ಮಂಗಳೂರು: ಸಕ್ಷಮ ದ.ಕ ಜಿಲ್ಲಾ ಘಟಕ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ವಿ.ಟಿ ರೋಡ್ ರಥಬೀದಿಯ ಚೇತನ ವಿಶೇಷ ಶಾಲೆಯಲ್ಲಿ ಇಂದು (ಅ.8) ಬೆಳಗ್ಗೆ ವಿದ್ಯಾ ಸಕ್ಷಮದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಅಷ್ಟಾವಕ್ರ ಜಯಂತಿ ದಿನಾಚರಣೆ ನೆರವೇರಿತು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಶಾಖೆಯ ಸಭಾಪತಿಗಳಾದ ರೊ. ಸಿಎ. ಶಾಂತಾರಾಮ ಶೆಟ್ಟಿ ಅವರು ಇಂದು ಬೆಳಗ್ಗೆ ಕಾರ್ಯಕ್ರಮ ಉದ್ಘಾಟಿಸಿ ದಿಚ್ಯಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಸಕ್ಷಮ ದ.ಕ ಜಿಲ್ಲೆ ಅಧ್ಯಕ್ಷ ಡಾ. ಮುರಳೀಧರ ನಾಯಕ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಷ್ಟಾವಕ್ರ ಜಯಂತಿಯ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಕ್ಷಮ ಕರ್ನಾಟಕದ ಪ್ರಾಂತ ಉಪಾಧ್ಯಕ್ಷ ವಿನೋದ್ ಶೆಣೈ, ರೆಡ್‌ಕ್ರಾಸ್ ದ.ಕ ದಿವ್ಯಾಂಗ ಕೋಶದ ಚೇರ್ಮನ್ ಹಾಗೂ ಕೆಎಂಸಿ ಮಂಗಳೂರು ಪ್ರಾಧ್ಯಾಪಕ ಡಾ. ಕೆ.ಆರ್ ಕಾಮತ್, ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ ಗೌರವ ಕಾರ್ಯದರ್ಶಿ ಸಂಜಯ್ ಶೆಟ್ಟಿ ಭಾಗವಹಿಸಿದ್ದರು.
ಸಕ್ಷಮ ಸದಸ್ಯರಾದ ನರೇಂದ್ರ ಭಟ್, ಚೇತನಾ ವಿಶೇಷ ಶಾಲೆ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಶ್ರೀಮತಿ ದಿನಮಣಿ ಕಾರ್ಯಕ್ರಮ ನಿರೂಪಿಸಿ, ಸಕ್ಷಮ ದ.ಕ ಜಿಲ್ಲಾ ಘಟಕದ ಕಾರ್ಯದರ್ಶಿ ಹರೀಶ್ ಪ್ರಭು ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ