ಸೀತಾಪಹರಣಕ್ಕೆ ಹೀಗೂ ಒಂದು ಕಾರಣವಿರಬಹುದೆ...?

Upayuktha
1 minute read
0


ನವರಾತ್ರಿಯಲ್ಲಿ ಬಹಳಷ್ಟು ಜನ ಸುಂದರಕಾಂಡ ಪಾರಾಯಣ ಮಾಡುವುದುಂಟು. ರಾಮಾಯಣದ ಕಾರಣವೇ ಸೀತಾಪಹರಣ. ಅದೂ ಕೂಡ ವೇದಪಾರಂಗತ ಮಹಾಶಿವಭಕ್ತ ರಾವಣನಿಂದ.


ಅಷ್ಟೊಂದು ತಿಳುವಳಿಕೆಯುಳ್ಳ ರಾವಣ, ಸೀತೆಯನ್ನು ಕದ್ದೊಯ್ದ ಎಂದರೆ, ಸ್ಲಲ್ಪ ಯೋಚಿಸಬೇಕಾದ ವಿಷಯವೇ.



ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ತಾಯಿ ಅನೇಕ ವಿಧವಾಗಿ ಅಲಂಕಾರ ಮಾಡಿ, ನೋಡಿ, ಆನಂದಿಸುವುದುಂಟು. ಹೆಣ್ಣುಮಕ್ಕಳಿಗೆ ಗಂಡಿನ ಉಡುಗೆತೊಡುಗೆ, ಗಂಡುಮಕ್ಕಳಿಗೆ ಹೆಣ್ಣಿನ ಅಲಂಕಾರ ಹೀಗೆಲ್ಲ.


ಶಿವಪಾರ್ವತಿಯರು ಹೊಸದಾಗಿ ಮದುವೆಯಾದ ಮದುಮಕ್ಕಳು. ಸರಸ ಸಲ್ಲಾಪ, ವಿನೋದಗಳಲ್ಲಿ ಕಾಲಕಳೆವಾಗ, ಇಬ್ಬರಿಗೂ ಈ ವೇಷಬದಲಾವಣೆಯ ಕಲ್ಪನೆ ಬರುತ್ತದೆ. ಬದಲಾದ ವೇಷದಲ್ಲಿ, ಶಿವ ಗೌರಾಂಗಿಯಾಗಿ, ಸುಂದರ ಹೆಣ್ಣುಮಗುವಾಗಿ, ಸಾಲಂಕೃತಳಾಗಿ ಬದಲಾಗುತ್ತಾಳೆ. ಅವಳೇ ಸೀತೆ. ಜನಕಮಹಾರಾಜನ ಮಗಳು.


ಇತ್ತ, ಶಿವೆಯೋ, ಮೇಘನೀಲವರ್ಣ, ಧೀರ, ದಶರಥಪುತ್ರ ರಾಮನಾಗಿ ಅಯೋಧ್ಯೆಯಲ್ಲಿ ವಾಸ. ಶಿವೆಯ ಮಾತೃಹೃದಯದ ಪ್ರತೀಕವೇ. ರಾಮ ಶರಣಾಗತವತ್ಸಲ. ಎಂತಹ ತಪ್ಪು ಮಾಡಿದವರನ್ನೂ ಕ್ಷಮಿಸಬಲ್ಲಾತ.


ಇವರಿಬ್ಹರ ಮಿಲನಕ್ಕೆ ವಿಶ್ವಾಮಿತ್ರನ ಮುಂದಾಳತ್ವ. ಸೀತಾಕಲ್ಯಾಣ ಸಂಪನ್ನ.


ಆ ಘೋರ ರಾತ್ರಿ. ಪಟ್ಟಾಭಿಷೇಕ ನಾಳೆಯ ಬೆಳಿಗ್ಯೆ. ಕೈಕೇಯಿಯ ವರಯಾಚನೆ. ರಾಮನಿಗೆ ಒಂದಲ್ಲಾ, ಎರಡಲ್ಲ, ಹದಿನಾಲ್ಕು ವರ್ಷಗಳ ವನವಾಸ. ಪಿತೃವಾಕ್ಯ ಪರಿಪಾಲನೆಯತ್ತ ರಾಮನ ಚಿತ್ತ. ಸೀತೆಯನ್ನು ವನವಾಸಕ್ಕೆ ಬರುವುದು ಬೇಡ ಎಂದು ಪರಿಪರಿಯಲ್ಲಿ ತಿಳಿಹೇಳುತ್ತಾನೆ. ಸೀತೆ ಕೇಳಲೊಲ್ಲಳು. ಬರುವೆನೆಂದು ಹಟಹಿಡಿಯುತ್ತಾಳೆ. ಈ ಹಟ ಶಿವನ ಪ್ರತಿರೂಪ. ಕೋಪಿಷ್ಠ ರುದ್ರ. ತಾಂಡವರೂಪಿ. ನಾನಾ ಕಾರಣಗಳಿಂದ ರಾಮನನ್ನು ಒಪ್ಪಿಸಿ, ಅವನೊಡನೆ ಕಾಡಿಗೆ ಹೊರಡುತ್ಚಾಳೆ.


ಮಾಯಾಮೃಗದ ಬೆನ್ನಟ್ಟಿ ಹೋದ ರಾಮನಿಗಾಗಿ, ಲಕ್ಷ್ಮಣನನ್ನು ಬೈದಾಡಿ ಕಳುಹಿಸಿದ ಕಾರಣವೂ ರುದ್ರತ್ವವೇ.


ಇತ್ತ ಲಂಕೆಯಲ್ಲಿ ರಾವಣ, ಶಿವನ ಪ್ರತಿಹೆಜ್ಜೆಯನ್ನೂ ಗಮನಿಸುತ್ತಾ ಬಂದವ. ಕೈಲಾಸದ ಶಿವನ ಆತ್ಮಲಿಂಗವನ್ನು ಗೋಕರ್ಣದಲ್ಲಿ, ದೇವತೆಗಳು, ಉಪಾಯದಿಂದ ಭೂಸ್ಪರ್ಶ ಮಾಡಿಸುದುದನು ಇನ್ನೂ ಮರೆತಿಲ್ಲ. ಈಗ, ಅದೇ ಶಿವನು, ಸೀತೆಯಾಗಿ, ರಾಮನ ಪತ್ನಿಯಾಗಿ, ಕಾಡಿನಲ್ಲಿರುವುದು ತಿಳಿಯುತ್ತದೆ. ಈಗಲಾdರೂ, ಸೀತೆಯ ರೂಪದಲ್ಲಿರುವ ಶಿವನನ್ನೇ, ತನ್ನ ಮನೆಗೆ ತಂದು ಪೂಜಿಸುವ ಮಹದಾಸೆ ರಾವಣನು ಸಮಯ, ಕಾರಣ ಕಾದು, ಪಂಚವಟಿಯಿಂದ ಸೀತೆಯ ಹರಣ, ಅದುವೇ ಸೀತಾಪಹರಣ ಮಾಡುತ್ತಾವೆ. ಸೀತೆಯನ್ನು ಮುಟ್ಟಿದರೆ ತಾನೇ, ಸೀತೆಯನ್ನು ಮತ್ತೆ ನೆಲದಮೇಲೆ ಇಡುವ ತಾಪತ್ರಯವೇ ಬೇಡ ಎಂದು, ನೆಲದ ಸಮೇತ, ಪುಷ್ಪಕವಿಮಾನದಲ್ಲಿ ಕೊಂಡೊಯ್ಯುತ್ತಾನೆ.


ಶಿವ ತನ್ನ ಮೂಲರೂಪದಲ್ಲಿ ಸ್ಮಶಾನವಾಸಿ. ನಿರಲಂಕಾರಿ, ನಿರಹಂಕಾರಿ. ಭೂಸ್ಥಿತ, ಧ್ಯಾನಸ್ಧ, ತಪೋನಿರತ. ಅದಕ್ಕಾಗಿಯೇ, ಅವನನ್ನು ಅರಮನೆಗೆ ಕರೆದೊಯ್ಯದೇ, ಅಶೋಕವನಕ್ಕೆ ಕರೆದೊಯ್ದು, ಅಲ್ಲಿ ಇರಿಸುತ್ತಾನೆ. 


ಸೀತೆಯು ರಾಮಧ್ಯಾನದಲ್ಲಿರಲು ಅನುವು ಮಾಡಿಕೊಡುತ್ತಾನೆ.

ಇತ್ತ, ರಾಮನೋ ಶಿವೆಯ ವೇಷದಲ್ಲಿ. ಸೀತೆಗಾಗಿ ಹಾತೊರೆಯುತ್ತಾನೆ. ನವರಾತ್ರಿಯ ಸಮಯ. 

ರಾಮನಲ್ಲಿನ ದುರ್ಗೆ ಎಚ್ಚೆತ್ತುಕೊಳ್ಳುತ್ತಾಳೆ. ಅವಳ ಕೆಲಸವೇ ದುಷ್ಟಶಿಕ್ಷಣ ಶಿಷ್ಟರಕ್ಷಣ. 


ರಾವಣನ ದುಷ್ಟತೆ ಮಿತಿಮೀರಿದೆ. ರಕ್ಕಸರ ಆಟಾಟೋಪಕ್ಕೆ  ಎಲ್ಲರೂ ಸೋತು, ಸುಣ್ಣವಾಗಿದ್ದಾರೆ. ರಾಮನ ರೂಪದಲ್ಸಿ, ದುರ್ಗೆ , ಲಂಕೆಯ ಮೇಲೆ ದಾಳಿ ಮಾಡುತ್ತಾಳೆ.ದುರ್ಗೆಗೆ ಎಲ್ಲ ದೇವತೆಗಳು, ತಮ್ಮ ತಮ್ಮ ಶಕ್ತಿಶಸ್ರ್ರಗಳನ್ನಿತ್ತು ಮಹಿಷಾಸುರನ ವಧೆಗೆ ಅನುವು ಮಾಡಿಕೊಟ್ಟರೆ, ರಾಮನಿಗೆ ಋಷಿಮು ನಿಗಳು ಬಲಾತಿಬಲ, ಬ್ರಹ್ಮಾಸ್ತ್ರ, ಮುಂತಾದ ಅಸ್ತ್ರಗಳನ್ನು ಉಪದೇಶಿಸಿ ಸಹಕರಿಸುತ್ತಾರೆ. ದೇವಲೋಕದಿಂದ ರಥಬರುತ್ತದೆ ಕೊನೆಗೆ, ರಾವಣನ ಹೃದಯದಲ್ಲಿರುವ ಅಮೃತಕಲಶವನ್ನು ನಾಶಪಡಿಸಿ, ರಾವಣವಧೆಯಾಗುತ್ತದೆ.


ಇದುವೇ ರಾಮಲೀಲೆ.

ಒಂದರ್ಥದಲ್ಲಿ, ಇದು ಕೂಡ ದುರ್ಗಾಷ್ಟಮಿಯೇ. ದುರ್ಗೆಯ ವಿಜಯವೇ. ವಿಜಯದಶಮಿಯೇ.

ವೇಷ ಬಲಾವಣೆಯ ಆಟ ಲೋಕದ ಒಳಿತಿಗಾಗಿ


ರಾಮರಾಮ ದುರ್ಗಾರಾಮ  ಶಂಕರ ಶಂಕರ. ಸೀತಾಶಂಕರ

ರಾಮರಾಮ ಸೀತಾರಾಮ ಶಂಕರಶಂಕರ ಸೀತಾಶಂಕರ




- ಮೀನಾಕ್ಷಿ ಮನೋಹರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top