ಮಂಗಳೂರು: ಮಾರ್ನಿಮಿ ಕಾಲದ ಸಂತಸ ಸಂಭ್ರಮ ಉಲ್ಲಾಸ ಉತ್ಸಾಹಗಳನ್ನು ಸಾರುವ ರಘು ಇಡ್ಕಿದು ರವರು ಬರೆದಿರುವ ಮತ್ತು ಎಲ್ಲೂರು ಶ್ರೀನಿವಾಸರಾವ್ ರವರು ಸಂಗೀತ ನಿರ್ದೇಶನ ಮಾಡಿರುವ ತುಳು ಹಾಡು ಶನಿವಾರ (ಅ.21) ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಬಿಡುಗಡೆಗೊಂಡಿತು.
ಹಾಡನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ. ಅಶೋಕ್ ಕುಮಾರ್ ರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ, ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್, ದೇವಸ್ಥಾನದ ಆಡಳಿತ ಸಮಿತಿಯ ಗಂಗಾಧರ್ ಕೋಟ್ಯಾನ್, ಶ್ರೀಮತಿ ವನಮಾಲಾ, ‘ಥಂಡರ್ ಕಿಡ್ಸ್' ಮಕ್ಕಳ ಸಂಗೀತ ತಂಡದ ಆಡಳಿತ ಸಮಿತಿಯ ಶ್ರೀಮತಿ ಶ್ರೇಯಶ್ರೀ ಭಟ್, ಶ್ರೀಮತಿ ಕವಿತಾ, ಹಾಡಿನ ನಿರ್ಮಾಣ ಮತ್ತು ದೃಶ್ಯ ಸಂಯೋಜನೆ ಮಾಡಿದ ಶ್ರೀಮತಿ ವಿದ್ಯಾ ಯು, ಸಾಹಿತಿ ರಘು ಇಡ್ಕಿದು ಉಪಸ್ಥಿತರಿದ್ದರು.
ಈ ಹಾಡನ್ನು ಬಾಲ ಪ್ರತಿಭೆಗಳಾದ ವಿನಮ್ರ ಇಡ್ಕಿದು, ಶಿವಮನ್ಯು ಶ್ರೀಕಾಂತ್ ಭಟ್, ಕು. ವೈಷ್ಣವಿ ಪಿ.ಭಟ್, ಕು. ಮುಗ್ಧ ಹಾಡಿರುತ್ತಾರೆ.
ವಿದ್ಯಾ ಯು ನಿರ್ಮಾಣ ಮತ್ತು ದೃಶ್ಯ ನಿರ್ದೇಶನ ಮಾಡಿರುವ ಈ ಹಾಡನ್ನು ಮನೋಜ್, ರಿತೇಶ್ ಎ, ಜಿತೇಶ್ ಎ ಮತ್ತು ವಿದ್ಯಾ ಯು ಚಿತ್ರೀಕರಣ ಮಾಡಿದ್ದಾರೆ. ಮನೋಜ್ ಸಂಕಲನ ಮಾಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ