ಶಾಶ್ವತ ಪರಿಹಾರದೆಡೆಗಿರಲಿ ಸಂಶೋಧನೆ: ಡಾ. ಕಾಳಪ್ಪ ಪ್ರಶಾಂತ

Upayuktha
0

 ಎಸ್.ಡಿ.ಎಂ ಕಾನ್ಕೆಮ್ ವೇದಿಕೆಗೆ ಚಾಲನೆ



ಉಜಿರೆ: ವೈಜ್ಞಾನಿಕ ಸಂಶೋಧನೆಗಳು ಶಾಶ್ವತ ಪರಿಹಾರ ಹೊಳೆಸಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ನೈಸರ್ಗಿಕ ವಿಜ್ಞಾನ ವಿಭಾಗದ ಡೀನ್ ಡಾ. ಕಾಳಪ್ಪ ಪ್ರಶಾಂತ ಹೇಳಿದರು.



ಅವರು ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಕಾನ್‍ಕೆಮ್ 2023-24ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಲವು ದಶಕಗಳ ಹಿಂದಿನಿಂದಲೂ ಪಾಲಿಮರ್ ಬಳಕೆಯನ್ನು ಕಾಣುತ್ತಿದ್ದೇವೆ. ಅದು ಇಂದಿಗೂ ಮುಂದುವರೆಯುತ್ತಿದೆ. ಪಾಲಿಮರ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳಿಗೆ ಅರಿವಿದ್ದರೂ ಶಾಶ್ವತ ಪರಿಹಾರ ಕೊಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂದರು.



ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎ ಕುಮಾರ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತರರೊಡನೆ ಮಾಡುವ ಸ್ಪರ್ಧೆಯ ಜೊತೆಗೆ ನಮ್ಮೊಳಗಿನ ಸ್ಪರ್ಧೆಯು ಅತಿ ಮಹತ್ವದ್ದಾಗಿರುತ್ತದೆ. ಆತ್ಮಾವಲೋಕನದೊಂದಿಗೆ  ಉತ್ತಮ ನಾಳೆಯೆಡೆಗೆ ಮುನ್ನಡೆಯಬೇಕೆಂದರು.



ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ರಸಾಯನಶಾಸ್ತ್ರದ ಕ್ಷೇತ್ರದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುವ ಉದ್ದೇಶದೊಂದಿಗೆ ವಿಭಾಗದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.



ವೈಷ್ಣವಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕಾನ್‍ಕೆಮ್ ಕಾರ್ಯದರ್ಶಿ ಡಾ. ಶಶಿಪ್ರಭಾ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸುಪ್ರಿಯಾ ಮತ್ತು ಶ್ರುತಿ ನಿರೂಪಿಸಿ. ಕಾನ್‍ಕೆಮ್ ಜಂಟಿ ಕಾರ್ಯದರ್ಶಿ ಡಾ. ರಾಜೇಶ್ ಎನ್. ಹೆಗ್ಡೆ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top