ಶ್ರೀ ಪ್ರಸನ್ನ ವೆಂಕಟದಾಸರು ಚಲನ ಚಿತ್ರದ ಕಲಾವಿದರಿಗೆ "ಅಶ್ವಥ್ ಕಲಾಭವನದಲ್ಲಿ ಸನ್ಮಾನ"

Upayuktha
0

ಚಲನಚಿತ್ರ ಹೌಸ್‌ಫುಲ್‌ ಪ್ರದರ್ಶನ




ಬೆಂಗಳೂರು: ಪ್ರೇಕ್ಷಕರ ಒತ್ತಾಯದ ಮೇರೆಗೆ ಎನ್‌ಆರ್ ಕಾಲೋನಿಯ ಅಶ್ವಥ್ ಕಲಾಭವನದಲ್ಲಿ ನಿರ್ದೇಶಕ- ಡಾ||ಮಧುಸೂಧನ್ ಹವಲ್ದಾರ್ ಮತ್ತು ವಿಪ್ರ ವ್ಯವಹಾರ ವೇದಿಕೆ ಸಹಯೋಗದಲ್ಲಿ 'ಹೌಸ್ ಫುಲ್' ನೊಂದಿಗೆ ಈ ಚಲನ ಚಿತ್ರದ ಪ್ರದರ್ಶನವು ಯಶಸ್ವಿಯಾಯಿತು.


ಈ ಚಲನ ಚಿತ್ರದಲ್ಲಿ ಅಭಿನಯಿಸಿದ ಯುವ ಕಲಾವಿದರಿಗೆ ಹಾಗೂ ಈ ಚಿತ್ರದ ನಿರ್ದೇಶಕ ಡಾ|| ಮಧುಸೂದನ್ ಹವಲ್ದಾರ್ ಅವರಿಗೆ ವಿಪ್ರ ವ್ಯವಹಾರ ವೇದಿಕೆಯ ಅಧ್ಯಕ್ಷರಾದ ಜಯತೀರ್ಥ ಹಾಗೂ ಉಪಾಧ್ಯಕ್ಷ ಎ. ಪಿ.ಕೃಷ್ಣ ಅವರು ಸನ್ಮಾನಿಸಿದರು. ಈ ಚಿತ್ರದ ನಿರ್ದೇಶಕರಾದ ಡಾ|| ಮಧುಸೂದನ್ ಹವಾಲ್ದಾರ್ ಅವರು ಮಾತನಾಡುತ್ತಾ,  ಇನ್ನೂ ಹಲವಾರು ಧಾರ್ಮಿಕ ಚಿತ್ರಗಳ ನಿರ್ಮಾಣದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ತಮ್ಮ ಪ್ರೋತ್ಸಾಹ ಹೀಗೆ ಸದಾ ಕಾಲ ನಮ್ಮೆಲ್ಲರ ಮೇಲೆ ಇರಲಿ ಎಂದು ವಿನಂತಿಸಿದರು.


ಈ ಸಂದರ್ಭದಲ್ಲಿ ಜನರು ತಮ್ಮ ಮೊಬೈಲಿನ ಟಾರ್ಚ್ ಬೆಳಕು ತೋರಿಸುವ ಮೂಲಕ ಪ್ರೋತ್ಸಾಹ ನೀಡಿದರು.



ಶ್ರೀ ಪ್ರಸನ್ನ ವೆಂಕಟದಾಸರು ಬಾಲ್ಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಶಾಸ್ತ್ರ ಓದು ಬರೆಯುವುದಕ್ಕೆ ಅವಕಾಶ ಮಾಡಿಕೊಡದೆ ಮನೆ ಕೆಲಸದೊಂದಿಗೆ ಜೀವನವನ್ನು ಸಾಗಿಸುತ್ತಾರೆ. ಒಂದು ದಿನ ಅತ್ತಿಗೆಯಿಂದ ನಿಂದನೆಗೆ ಒಳಗಾಗಿ ನಂತರ ತಿರುಪತಿ ಶ್ರೀ ವೆಂಕಟರಮಣನ ಸಾಕ್ಷಾತ್ಕಾರದಿಂದ ಶ್ರೀ ಪ್ರಸನ್ನ ವೆಂಕಟ ದಾಸರಾಗಿ ಶಾಸ್ತ್ರ ಅಧ್ಯಯನವನ್ನು ಮಾಡಿ ಲೋಕ ವಿಖ್ಯಾತರಾಗುತ್ತಾರೆ. ದಾಸ ಸಾಹಿತ್ಯದ ಮೇರು ಕೃತಿಗಳ ಹಾಡು ಸಾಹಿತ್ಯ ಪದಗಳನ್ನು ರಚಿಸಿ ಲೋಕ ವಿಖ್ಯಾತರಾದ ಚಿತ್ರ ಕಥೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ.


ಈಗಿನ ಯುವಕರಿಗೆ ಅರ್ಥಗರ್ಭಿತವಾಗಿದೆ. ಮುಖ್ಯವಾಗಿ ಅಭಿನಯಿಸಿದ ಪ್ರಭಂಜನ್ ದೇಶಪಾಂಡೆ, ವಿಷ್ಣು ತೀರ್ಥ ಜೋಶಿ, ದೇವರಾತ ಜೋಶಿ, ವಿಜಯಾನಂದ ನಾಯಕ್, ಲಕ್ಷ್ಮೀ ಶ್ರೇಯಾಂಸಿ, ಲೀಲಾ ಅನಿಲಾಚಾರ್ಯ, ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಕಥೆ ಚಿತ್ರಕಥೆ ರೇಖಾ ಕಾಖಂಡಕಿ, ನಿರ್ದೇಶನ ಡಾಕ್ಟರ್ ಮಧುಸೂದನ್ ಹವಲ್ದಾರ್, ಮ್ಯೂಸಿಕ್ ವಿಜಯ ಕೃಷ್ಣ, ಹಾಗೂ ಸಾವಂತ್ ಸರ್, ಬಾಬಿ ಅಣ್ಣ, ಒಟ್ಟಾರೆಯಾಗಿ ಅತ್ಯದ್ಭುತವಾಗಿ ಮೂಡಿ ಬಂದ ಚಲನಚಿತ್ರ.


ಪ್ರಸನ್ನ ವೆಂಕಟದಾಸರು ಯೌವನದಲ್ಲಿ ವೆಂಕಣ್ಣನಾಗಿ ಇರುವಾಗ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ನದಿಯ ತೀರಕ್ಕೆ ಹೋಗಿ ಹಸುಗಳನ್ನು ಮೇಯಿಸಿಕೊಂಡು ಬಟ್ಟೆಯನ್ನು ಒಗೆದುಕೊಂಡು ಉರಿ ಬಿಸಿಲಿನಲ್ಲಿ ಮನೆಗೆ ಬಂದಾಗ ಅತ್ತಿಗೆಯವರು ಮಜ್ಜಿಗೆಯನ್ನು ಕಡಿಯುತ್ತಿರುವುದನ್ನು ನೋಡಿ ಅತ್ತಿಗೆ ನನಗೆ ಬಾಯಾರಿಕೆ ಆಗಿದೆ ಒಂದು ಲೋಟ ಮಜ್ಜಿಗೆಯನ್ನು ಕೊಡಿ ಎಂದು ಕೇಳುತ್ತಾನೆ. ಆ ಸಂದರ್ಭದಲ್ಲಿ ಮಜ್ಜಿಗೆಯನ್ನು ಕೊಡದೆ ಅವನನ್ನು ಬಾಪ್ಪಾ ಬಾ ಕೆಲಸ ಮಾಡಿ ಸುಸ್ತಾಗಿ ಬಂದಿದ್ದೀ ನೋಡು, ಪಾಪ ಬಂದ ಮಜ್ಜಿಗೆ ಕೇಳೋಕೆ ಅಂತ ಚುಚ್ಚು ಮಾತಿನಿಂದ ಹಿಯಾಳಿಸಿ ತಿರಸ್ಕಾರ ಮಾಡಿಬಿಡುತ್ತಾಳೆ. ಆಗ ಆ ವೆಂಕಣ್ಣ ಮನೆಯನ್ನು ಬಿಟ್ಟು ತೆರಳುತ್ತಾನೆ. ಇದೇ ಈ ಚಿತ್ರದ ಟರ್ನಿಂಗ್ ಪಾಯಿಂಟ್. ನಂತರ ಶ್ರೀ ವೆಂಕಟರಮಣನ ಸಾಕ್ಷಾತ್ಕಾರವಾಗಿ ವೆಂಕಣ್ಣ ಶ್ರೀ ಪ್ರಸನ್ನ ವೆಂಕಟದಾಸರು ಆಗಿ ಲೋಕ ವಿಖ್ಯಾತರಾಗುತ್ತಾರೆ.



إرسال تعليق

0 تعليقات
إرسال تعليق (0)
To Top