ಅ.26 ರಂದು ಮಂಗಳೂರಿನಲ್ಲಿ "ಶೋಧ - ಸ್ವಾದ" ರಾಜ್ಯ ಮಟ್ಟದ ವಿಚಾರಗೋಷ್ಠಿ

Upayuktha
0



ಮಂಗಳೂರು: ಕರಾವಳಿ ಕರ್ನಾಟಕದ ನೆಲ ಸಂಸ್ಕತಿಯ ಅಧ್ಯಯನ ಮತ್ತು ಶೋಧನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಮ್ಮ ನಾಡಿನ ಹಿರಿಯ ಸಾಹಿತಿ ಹಾಗೂ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆಯವರ ಸಂಶೋಧನೆಯ ವಿಷಯಗಳು ಮುಂದಿನ ಪೀಳಿಗೆಯ ಅಧ್ಯಯನಾಸ್ತಕರಿಗೆ ಮತ್ತು ಸಂಶೋಧಕರಿಗೆ ಉಪಯುಕ್ತವಾದುದು. ಇಂದಿರಾ ಹೆಗ್ಗಡೆಯವರ ಸಂಶೋಧನಾ ಬರಹಗಳ ಮರು ಓದು ಮತ್ತು ಅರ್ಥೈಸುವಿಕೆ, ಅಧ್ಯಯನದ ಹಾದಿಗಳ ಹುಡುಕುವಿಕೆಯ ಹಾಗೂ ಯುವಪೀಳಿಗೆಯನ್ನು ಕ್ರಿಯಾಶೀಲವಾಗಿಸುವ ಆಶಯದೊಂದಿಗೆ ಸುರತ್ಕಲ್ ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರಿನ ತುಳು ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ), ಮಂಗಳೂರಿನ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದ ಕನ್ನಡ ಸಂಘ, ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಡಾ.ಇಂದಿರಾ ಹೆಗ್ಗಡೆ ನೆಲದ ಮೂಲದ ನಡೆ "ಶೋಧ - ಸ್ವಾದ" ರಾಜ್ಯ ಮಟ್ಟದ ವಿಚಾರಗೋಷ್ಠಿಯು ಅಕ್ಟೋಬರ್ 26 ರಂದು ಗುರುವಾರ ಮಂಗಳೂರು ರೋಶನಿ ನಿಲಯದ ಮರಿಯಾ ಪೈವಾ ಸಭಾಂಗಣದಲ್ಲಿ ಪೂರ್ವಾಹ್ನ 10 ರಿಂದ ಸಂಜೆ 3.30 ರ ವರೆಗೆ ನಡೆಯಲಿದೆ.




ಅಂದು ಇಂದಿರಾ ಹೆಗ್ಗಡೆಯವರ ಸಮಗ್ರ ಸಾಹಿತ್ಯ ಹಾಗೂ ಸಂಶೋಧನಾ ಕೃತಿಗಳ ಅವಲೋಕನ ಕೃತಿ 'ಅತಿಕಾರೆ' ಬಿಡುಗಡೆಗೊಳ್ಳಲಿದೆ. ಪ್ರೊ. ಬಿ.ಎ ವೀವೇಕ ರೈ ಅವರು ಗೌರವ ಸಂಪಾದಕರಾಗಿದ್ದು ಡಾ.ಜ್ಯೋತಿ ಚೇಳ್ಯಾರು ಸಂಪಾದಕರಾಗಿದ್ದು, ಪ್ರೊ. ಕೃಷ್ಣಮೂರ್ತಿ ಪಿ., ಬಿ.ಎಂ. ರೋಹಿಣಿ, ಡಾ. ಸುಧಾರಾಣಿ, ದೇವಿಕಾ ನಾಗೇಶ್, ಬೆನೆಟ್ ಜಿ. ಅಮ್ಮನ್ನ, ತಾರನಾಥ ಗಟ್ಟಿ, ಕಾಪಿಕಾಡು ಸಂಪಾದಕ ಮಂಡಳಿಯಲ್ಲಿದ್ದಾರೆ.  ಈ ಕೃತಿಯು ತುಳುನಾಡಿನ ಜನಪದ ಸಂಸ್ಕøತಿ ಚರಿತ್ರೆ ಕುರಿತಾದ ಆಕರ ಗ್ರಂಥವಾಗಿದೆ. ಕರ್ನಾಟಕ ಇತಿಹಾಸ ಆಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅತಿಕಾರೆ ಕೃತಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ.




ಡಾ. ಇಂದಿರಾ ಹೆಗ್ಗಡೆಯವರ ಸಂಶೋಧನಾ ಕೃತಿ ತುಳುನಾಡ ಸಂಸ್ಕøತಿ ಸಮೀಕ್ಷೆಯನ್ನು  ಸ್ಕೂಲ್ ಆಫ್ ಸೋಷಿಯಲ್ ವರ್ಕ್‍ನ ಪ್ರಾಂಶುಪಾಲರಾದ ಡಾ. ಸೋಫಿಯಾ ಎಸ್ ಪೆರ್ನಾಂಡಿಸ್ ಬಿಡುಗಡೆ ಗೊಳಿಸಲಿದ್ದಾರೆ.ತುಳು ಪರಿಷತ್‍ನ ಗೌರವ ಅಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ, ಯಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ. ಪಿ. ಕೃಷ್ಣಮೂರ್ತಿ ಆಕೃತಿ ಆಶಯ ಪಬ್ಲಿಕೇಶನ್ಸ್‍ನ ಕಲ್ಲೂರು ನಾಗೇಶ ಮುಖ್ಯ ಅತಿಥಿಗಳಾಗಿರುತ್ತಾರೆ. ಕರಾವಳಿ ಲೇಖಕಿಯವರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರು ಸಂಪಾದಕ ನುಡಿ ಆಡಲಿದ್ದಾರೆ.




ವಿಚಾರಗೋಷ್ಠಿಯಲ್ಲಿ ಭಾರತಿಯ ಭಾಷಾ ಸಂಸ್ಥಾನ ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ ಡಾ.ಬಿ. ಶಿವರಾಮ ಶೆಟ್ಟಿ ಅವರು ಡಾ.ಇಂದಿರಾ ಹೆಗ್ಗಡೆಯವರ ಸಂಶೋಧನೆಗಳ ಕುರಿತು,  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಎಮ್. ಜಾನಕಿ ಬ್ರಹ್ಮಾವರ ಅವರು ಪ್ರವಾಸ ಸಾಹಿತ್ಯದ ಕುರಿತು, ಭಂಡಾರ್‍ಕಾರ್ಸ್ ಕಾಲೇಜು ಕುಂದಾಪುರದ ವಿಶ್ರಾಂತ ಪ್ರಾಧ್ಯಾಪಕಿ ಡಾ. ರೇಖಾ ಬನ್ನಾಡಿ ಸೃಜನ ಶೀಲ ಸಾಹಿತ್ಯ ಕುರಿತು ವಿಚಾರ ಮಂಡಿಸಲಿದ್ದಾರೆ.



ಡಾ. ಇಂದಿರಾ ಹೆಗಡೆಯವರ ಸಾಹಿತ್ಯ ಸಂಶೋಧನೆ ಕುರಿತು ಅವರೊಂದಿಗೆ ಸಂವಾದ ನಡೆಯಲಿದ್ದು ಅಶ್ವಿನ್ ಶೆಟ್ಟಿ, ಡಾ. ಯೋಗೀಶ್ ಕೈರೋಡಿ, ಉಷಾ ಕಟ್ಟೆಮನೆ, ರಘು ಇಡ್ಕಿದು, ವೀಣಾ ಶೆಟ್ಟಿ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ತಾರಾನಾಥ ಕಾಪಿಕಾಡು ಹಾಗು ಡಾ. ಸುಧಾರಾಣಿ ಸಂವಾದ ನಡೆಸಿಕೊಡಲಿದ್ದಾರೆ. ಡಾ. ಇಂದಿರಾ ಹೆಗ್ಗಡೆಯವರ ಕೃತಿಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಹಮ್ಮಿಕೊಳ್ಳಲಾಗಿದ್ದು. ಸಂವಾದ-ಮಾತು-ಚರ್ಚೆಗಳಿಂದ ತುಳು ನಾಡಿನ ಸಾಹಿತ್ಯ - ಸಂಶೋಧನೆಗಳ ಹೊಸ ಹೊಳಪುಗಳನ್ನು ಶೋಧಿಸುವ ಪ್ರಯತ್ನ ವಿಚಾರಗೋಷ್ಠಿಯ ಪ್ರಮುಖ ಆಶಯವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Advt Slider:
To Top