ನಟ ಆಶಿಶ್ ವಿದ್ಯಾರ್ಥಿ, ತಮ್ಮ 60 ರ ಹರೆಯದಲ್ಲಿ, ಇತ್ತೀಚೆಗೆ ತಮ್ಮ 1 ನೇ ಪತ್ನಿ ಪಿಲೂ ವಿದ್ಯಾರ್ಥಿಗೆ ವಿಚ್ಛೇದನ ನೀಡಿದರು ಮತ್ತು ಎರಡು ವರ್ಷಗಳ ನಂತರ ರೂಪಾಲಿ ಬರುವಾ ಅವರನ್ನು ವಿವಾಹವಾದರು. ಅವರ ವಿಚ್ಛೇದನದ ಭಾರೀ ವದಂತಿಗಳ ನಡುವೆ ವೃತ್ತಿಯಲ್ಲಿ RJ ಆಗಿರುವ ಆಶಿಶ್ ವಿದ್ಯಾರ್ಥಿ ಅವರ ಪತ್ನಿ ಪಿಲೂ ವಿದ್ಯಾರ್ಥಿ ಇತ್ತೀಚೆಗೆ ಮೌನ ಮುರಿದರು ಮತ್ತು ಆಶಿಶ್ ಅವರೊಂದಿಗಿನ ವೈವಾಹಿಕ ಜೀವನ ಮತ್ತು ಅವರ ಪ್ರತ್ಯೇಕತೆಯ ಬಗ್ಗೆ ಸುಂದರವಾದ ಸಂದರ್ಶನವನ್ನು ನೀಡಿದರು.
"ನಾವು 2021 ರಲ್ಲಿ ಬೇರ್ಪಟ್ಟಿದ್ದೇವೆ. ನನ್ನ ಜೀವನದ ಅತ್ಯುತ್ತಮ ಭಾಗವೆಂದರೆ ನಾವು ದಂಪತಿಗಳಾಗಿ ಕಳೆದ 22 ವರ್ಷಗಳು. ಆಶಿಶ್‌ನನ್ನು ಕೇಳಿದರೆ ಅವನು ಕೂಡ ಅದನ್ನೇ ಹೇಳುತ್ತಾನೆ. ನಮ್ಮಲ್ಲಿ ಸಾಮ್ಯತೆ ಮತ್ತು ಭಿನ್ನಾಭಿಪ್ರಾಯಗಳಿದ್ದವು ಆದರೆ ಭಿನ್ನವಾಗಿರುವುದಕ್ಕಾಗಿ ಒಬ್ಬರನ್ನೊಬ್ಬರು ದೂಷಿಸಲಿಲ್ಲ. ನಮ್ಮ ಮಗ ಈಗ ಅಮೆರಿಕಾದ ಪ್ರಸಿದ್ಧ ಬಹು ರಾಷ್ಟ್ರೀಯ ಕಂಪನಿ ಟೆಸ್ಲಾಗಾಗಿ ಕೆಲಸ ಮಾಡುತ್ತಾನೆ ಮತ್ತು ಆತನನ್ನು ಆ ರೀತಿ ಬೆಳೆಸಿದ ಸಂಪೂರ್ಣ ಕ್ರೆಡಿಟ್ ಅವನ ತಂದೆ ಆಶಿಶ್‌ಗೆ ಸಲ್ಲುತ್ತದೆ. ಅವರು ನಮ್ಮ ಮಗನಿಗೆ ಉತ್ತಮ ತಂದೆ, ಸೂಕ್ತ ಮಾರ್ಗದರ್ಶಕರಾಗಿದ್ದಾರೆ. ಸಾಮಾನ್ಯವಾಗಿ, ತಾಯಂದಿರು ಪಾಲನೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ ಆದರೆ ನಮ್ಮ ಪರಿವಾರದ ವಿಷಯದಲ್ಲಿ ಆಶಿಶ್ ನಮ್ಮ ಮಗನನ್ನು ಶ್ರೇಷ್ಠ ಮಾನವ ಮತ್ತು ಯಶಸ್ವಿ ವೃತ್ತಿಪರನಾಗಿ ಬೆಳೆಸುವ ಪ್ರಮುಖ ಪಾತ್ರವನ್ನು ವಹಿಸಿಕೊಂಡರು.
ಮದುವೆಯಾಗಿ 22 ವರ್ಷಗಳು ಕಳೆದು ಈಗ ಏಕೆ ವಿಚ್ಛೇದನ ಪಡೆದಿದ್ದೇವೆ ಎಂದು ನೀವು ಕೇಳಬಹುದು. ನಾವು ನಮ್ಮ ಜೀವನವನ್ನು ನಮ್ಮ ಮಗನನ್ನು ಬೆಳೆಸಲು ಕಳೆದಿದ್ದೇವೆ. ಈಗ ಅವರು ವಿದೇಶದಲ್ಲಿ ನೆಲೆಸಿದ್ದಾರೆ, ನಾವು ವ್ಯಕ್ತಿಗಳಾಗಿ ಸಾಧಿಸಲು ನಾವು ಏನು ಮಾಡಲು ಯೋಜಿಸುತ್ತೇವೆ ಎಂದು ಯೋಚಿಸಲು ನಮಗೆ ಇನ್ನೂ ಸಮಯವಿದೆ. ಆಶಿಶ್ ನನಗೆ ಬೇಕಾದುದನ್ನು ಮಾಡಲು ಎಂದು ಅಡ್ಡ ಬರುವ ಸಾಮಾನ್ಯ ಗಂಡನಲ್ಲ - ಅವರು ಯಾವಾಗಲೂ ನನಗೆ ಬೆಂಬಲವಾಗಿದ್ದಾರೆ. ಆದರೆ ನಮ್ಮ ಭವಿಷ್ಯದ ಯೋಜನೆಗಳು ವಿಭಿನ್ನವಾಗಿವೆ, ನಮ್ಮ ಜೀವನದುದ್ದಕ್ಕೂ ನಾವು ವ್ಯಕ್ತಿಗಳಾಗಿ ಸಾಧಿಸಲು ಬಯಸುವುದು ವಿಭಿನ್ನವಾಗಿದೆ. ಈ ಎಲ್ಲಾ ವರ್ಷಗಳಲ್ಲಿ ನಾವು ಪ್ರತ್ಯೇಕಗೊಳ್ಳುವ ಅಗತ್ಯವನ್ನು ಎಂದಿಗೂ ಯೋಚಿಸಲಿಲ್ಲ.
ಆದರೆ ಈಗ- ಭವಿಷ್ಯದ ಕುರಿತು, ವೈಯುಕ್ತಿಕ ಬೆಳವಣಿಗೆಯ ಕುರಿತು ಯೋಚಿಸಲು ನಮಗೆ ಸಮಯವಿದೆ, ನಮ್ಮ ಮಗನನ್ನು ಬೆಳೆಸುವ ಸಲುವಾಗಿ ನಾವು ರಾಜಿ ಮಾಡಿಕೊಳ್ಳಬೇಕಾಗಿಲ್ಲ. ಅವನು ಈಗ ತನ್ನದೇ ಆದ ಜೀವನವನ್ನು ಹೊಂದಿದ್ದಾನೆ, ವ್ಯಕ್ತಿಗಳಾಗಿ, ನಮ್ಮ ಜೀವನದುದ್ದಕ್ಕೂ ನಮ್ಮ ಆಸೆಗಳನ್ನು ಮತ್ತು ಅಗತ್ಯಗಳನ್ನು ಪೂರೈಸಿಕೊಳ್ಳುವ ಹಕ್ಕು ಮತ್ತು ಕರ್ತವ್ಯ ಖಂಡಿತವಾಗಿಯೂ ನಮ್ಮದು. ಹಾಗಾಗಿಯೇ ಬೇರ್ಪಟ್ಟೆವು.
ನಾವು ವೈವಾಹಿಕ ಜೀವನದ ಬಗ್ಗೆ ಯೋಚಿಸಿದಾಗ, ನಾವು ಒಟ್ಟಿಗೆ ಇರುವುದರ ಬಗ್ಗೆ ಯೋಚಿಸುತ್ತೇವೆ. ಒಟ್ಟಿಗೆ ಉಳಿಯುವ ವಿಷಯವಾಗಿದ್ದಾಗ, ನಾವು ಒಟ್ಟಿಗೆ ಇರಲು ನಮ್ಮ ಆಸೆಗಳನ್ನು ಮತ್ತು ಅಗತ್ಯಗಳನ್ನು ರಾಜಿ ಮಾಡಿಕೊಳ್ಳುತ್ತೇವೆ. ದಂಪತಿಗಳಾಗಿ ಉಳಿಯಲು ನಾವು ಮಾಡುವ ವ್ಯಕ್ತಿತ್ವ ತ್ಯಾಗಗಳು ಮತ್ತು ಆರ್ಥಿಕ ತ್ಯಾಗಗಳು ಸಾಕಷ್ಟು ಇವೆ. ಇನ್ನು ಮುಂದೆ ಇದರ ಅಗತ್ಯವಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ. ಹಾಗಾಗಿ ನಾನು ಮೌನದ ಮಂಜುಗಡ್ಡೆಯನ್ನು ಮುರಿದು ಆಶಿಶ್‌ನಿಂದ ವಿಚ್ಛೇದನವನ್ನು ಕೇಳಿದೆ - ಮತ್ತು ಅವರು ನನಗೆ ಬೇಕಾದುದನ್ನು ಅರ್ಥಮಾಡಿಕೊಂಡರು ಮತ್ತು ನನಗೆ ಬೇಕಾದುದನ್ನು ಪಡೆಯಲು ಸಹಾಯ ಮಾಡಿದರು. ಅವರು ನನಗೆ ಈ ವಿಚ್ಛೇದನ ಪ್ರಕ್ರಿಯೆಯನ್ನು ಸುಲಭಗೊಳಿಸಿದರು. ಯಾವುದೇ ಜಗಳಗಳಿಲ್ಲ, ದೂಷಣೆಯಿಲ್ಲ ಅಥವಾ ಅವಮಾನವಿಲ್ಲ - ಅವರು ನನಗೆ ಸಹಾಯ ಮಾಡಿದರು ಮತ್ತು ಈ ವಿಚ್ಛೇದನದ ಸಂಪೂರ್ಣ ಪ್ರಕ್ರಿಯೆಯಲ್ಲಿ ನನ್ನೊಂದಿಗೆ ನಿಂತರು.
ಅವನು ಮತ್ತೆ ಮದುವೆಯಾದನು- ಏಕೆಂದರೆ ಅವನಿಗೆ ಜೀವನ ಸಂಗಾತಿಯ ಅಗತ್ಯವಿತ್ತು. ನನ್ನ ಜೀವನದ ಗುರಿಗಳು ಬೇರೆಯಾಗಿರುವುದರಿಂದ ನಾನು ಮರುಮದುವೆಯಾಗುತ್ತಿಲ್ಲ. ನನಗೆ ಮತ್ತೆ ಮದುವೆಯಾಗುವ ಉದ್ದೇಶವಿಲ್ಲ. ನಾನು ನನ್ನ ಜೀವನದ ಬಹುಭಾಗವನ್ನು ಉತ್ತಮ ಮಗಳು, ಸುಂದರ ಹೆಂಡತಿ ಮತ್ತು ಜವಾಬ್ದಾರಿಯುತ ತಾಯಿಯಾಗಿ ಕಳೆದಿದ್ದೇನೆ - ಈಗ ನಾನು ನನ್ನ ಜೀವನವನ್ನು ನಾನು ಬಯಸಿದ ರೀತಿಯಲ್ಲಿ ಯೋಜಿಸುತ್ತಿದ್ದೇನೆ.
ಸೆಲೆಬ್ರಿಟಿಗಳ ವಿಚ್ಛೇದನದ ಕುರಿತು ನಾನು ಇತ್ತೀಚೆಗೆ ಕಂಡ ಅತ್ಯಂತ ಪ್ರಬುದ್ಧ ಮತ್ತು ಗೌರವಾನ್ವಿತ ಸಂದರ್ಶನಗಳಲ್ಲಿ ಇದು ಒಂದಾಗಿದೆ. ನಿಖರವಾಗಿ, ಮಕ್ಕಳು ಬೆಳೆದ ನಂತರ ದಂಪತಿಗಳು ಏಕೆ ವಿಚ್ಛೇದನ ಪಡೆಯುತ್ತಾರೆ ಎಂಬುದಕ್ಕೆ ಇವು ಕೆಲವು ಕಾರಣಗಳಾಗಿವೆ. ಸಣ್ಣ ಪುಟ್ಟ ಕಾರಣಗಳಿಗೂ ಶರಂಪರ ಜಗಳವಾಡುವ, ವಿಚ್ಛೇದನದ ನಂತರ ಪರಸ್ಪರ ದೋಷಾರೋಪ ಮಾಡುವ ಜನರ ಮಧ್ಯದಲ್ಲಿ ಅತ್ಯಂತ ಗೌರವಯುತವಾದ ವಿಚ್ಛೇದನ ಪ್ರಕರಣವಿದು. ಅವರ ಖಾಸಗಿ ಬದುಕನ್ನು ಗೌರವಿಸೋಣ.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


