ಸಮೃದ್ಧವಾದ ಪರಿಪೂರ್ಣ ಕಲೆ ಯಕ್ಷಗಾನ: ಎಂ. ದೇವಾನಂದ ಭಟ್

Upayuktha
0




ಮೂಡುಬಿದಿರೆ: ಯಕ್ಷಗಾನವು ಸಮೃದ್ಧ ಹಾಗೂ ಪರಿಪೂರ್ಣವಾದ ಕಲೆಯಾಗಿದ್ದು ತುಳು ಭಾಷೆಗೂ ಯಕ್ಷಗಾನದ ಕೊಡುಗೆ ಗಣನೀಯವಾಗಿದೆ ಎಂಬುದಾಗಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಸಂಘಟಕರೂ ಆಗಿರುವ ಎಂ. ದೇವಾನಂದ ಭಟ್ ಹೇಳಿದರು. 



ಅವರು ಕನ್ನಡ ಭವನದಲ್ಲಿರುವ ತುಳುಕೂಟದ ಕಛೇರಿಯಲ್ಲಿ ನಡೆದ ತಿಂಗಳ ಸಭೆ ಹಾಗೂ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ “ ತುಳುನಾಡಿನ ಯಕ್ಷಗಾನ” ಕುರಿತು ಮಾತನಾಡಿದರು. 



 ರಂಗ ಪ್ರವೇಶಕ್ಕೆ ಮುನ್ನ ಯಕ್ಷಗಾನ ಕಲೆಯ ವಿವಿಧ ಹಂತಗಳನ್ನು ಅವರು ಸಮಗ್ರವಾಗಿ ವಿವರಿಸುತ್ತಾ, ವಿಶೇಷವಾಗಿ ಬಣ್ಣಗಾರಿಕೆ ಮತ್ತು ವೇಷ ಭೂಷಣಗಳ ಬಗ್ಗೆಯೂ ವಿವರಿಸಿದರು. ಕಲಾವಿದನಿಗೆ ನಾಟ್ಯ, ಮಾತುಗಾರಿಕೆ, ಪುರಾಣ ಜ್ಞಾನದ ಜೊತೆ ಬಣ್ಣಗಾರಿಕೆಯ ಬಗ್ಗೆಯೂ ಸಂಪೂರ್ಣ ತಿಳುವಳಿಕೆ ಇರಬೇಕಾಗುತ್ತದೆ. ಬೇರೆ ಬೇರೆ ಪಾತ್ರಗಳಿಗೆ ಬಳಸುವ ಬಣ್ಣಗಾರಿಕೆ ಮತ್ತು ವಸ್ತ್ರವಿನ್ಯಾಸದ ಬಗ್ಗೆಯೂ ಅವರು ವಿವರಿಸಿದರು. ಕೆಲವು ಪ್ರಸಂಗಗಳ ಆಯ್ದ ತುಳು, ಕನ್ನಡ ಪದ್ಯಗಳನ್ನು ಭಾಗವತರಾದ ಶಿವಪ್ರಸಾದ್ ಭಟ್ ಅವರು ಹಾಡಿದರು. ತಬಲಾದಲ್ಲಿ ದೇವಾನಂದ ಭಟ್ ಅವರು ಸಹಕರಿಸಿದರು. ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರಾದ ಗುರು ಎಂ.ಪಿ.ಯವರು ಯಕ್ಷಗಾನ ಧಾಟಿಯ ಆಶು ಕವಿತೆಯನ್ನು ಪ್ರಸ್ತುತ ಪಡಿಸಿದರು.



ತುಳುಕೂಟದ ಅಧ್ಯಕ್ಷರಾದ ಧನಕೀರ್ತಿ ಬಲಿಪ, ಕಾರ್ಯಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ ಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ ಮುಂತಾದವರು ಉಪಸ್ಥಿತರಿದ್ದರು. ಹೆರಾಲ್ಡ್ ತಾವ್ರೋ ಅವರು ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top