ಚಿತ್ರಕಲೆಯಲ್ಲಿ ಛಾಪು ಮೂಡಿಸುತ್ತಿರುವ ರಾಧಿಕಾ ಮಕರಂದ ಬಾಯರಿ

Upayuktha
0



ಲೆ ನೀವು ನೋಡುವುದಲ್ಲ ಆದರೆ ಇತರರರು ಕಲೆಯನ್ನು ನೋಡುವಂತೆ ಮಾಡುವುದು ಎಂಬ ಒಂದು ಮಾತಿದೆ. ಅದೇ ರೀತಿ ಮಂಡಲ ಆರ್ಟ್‍ನಲ್ಲಿ ಸತತ ಪರಿಶ್ರಮ, ತಾಳ್ಮೆ, ಆಸಕ್ತಿಯಿಂದ ಕಲಿತು ಇಂದು ಈ ಕಲೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಓರ್ವ ಕಲಾವಿದೆ ರಾಧಿಕಾ ಮಕರಂದ ಬಾಯರಿ.



ಈಕೆ ರಾಮಕೃಷ್ಣ ಹೆಬ್ಬಾರ್ ಮತ್ತು ಗೀತಾ ಇವರ ಪುತ್ರಿ. MSc (organic chemistry) ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಿಂದಲೂ ಕಲೆಯ ಬಗ್ಗೆ  ಆಸಕ್ತಿ ಇದ್ದು,  ಲಾಕ್ ಡೌನ್ ಆಗಿದ್ದು, ಆಸಕ್ತಿ ಪೂರಕವಾಗಿ ಸಹಾಯವಾಯಿತು. ಯೂಟ್ಯೂಬ್ ಅಲ್ಲಿ “Goodness In You" ಎಂಬ ಆರ್ಟ್ ಚಾನೆಲ್ ನೋಡಿ ಅಭ್ಯಾಸ ಮಾಡಿ ಇಂದು ಒಳ್ಳೆಯ ಚಿತ್ರ ಕಲಾವಿದೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ರಾಧಿಕಾ ಅವರು ಹೇಳುತ್ತಾರೆ.



ಡಾಟ್ ಮಂಡಲ ಆರ್ಟ್ ಇವರ ನೆಚ್ಚಿನ ಚಿತ್ರಕಲೆ.

ಡೆಮಿ ಡೇವಿಡ್ಸನ್, ನೈರೋಬಿ, ಪ್ರಸುನ್ ಬಾಲಸುಬ್ರಮಣ್ಯಂ (Mandala Artist) ನೆಚ್ಚಿನ ಚಿತ್ರಕಲಾಕಾರರು. ಒಂದು ಡಾಟ್ ಮಂಡಲ ಆರ್ಟ್ ಮಾಡಲು 6 ರಿಂದ 8 ದಿನ ಬೇಕು ಆಗುತ್ತದೆ ಎಂದು ಹೇಳುತ್ತಾರೆ ರಾಧಿಕಾ.



ಚಿತ್ರ ಕಲೆ ಕ್ಷೇತ್ರದ ಇಂದಿನ ಸ್ಥಿತಿ ಗತಿ ಹಾಗೂ ಮುಂದಿನ ಯೋಜನೆಗಳು:

ಹೊಸ- ಹೊಸ ಪ್ರಯೋಗಗಳು ಈಗೀಗ ಜಾಸ್ತಿ. ಚಿಕ್ಕ ಮಕ್ಕಳಿಗೆ ಕಲಿಯುವ ಅವಕಾಶಗಳು ಜಾಸ್ತಿ ಆಗಿವೆ. ಮಂಡಲ ಆರ್ಟ್ ಅಲ್ಲಿ ಬೇರೆ ಬೇರೆ ಪ್ರಯೋಗಗಳನ್ನು ಮಾಡುವ ಇಚ್ಛೆ ಇದೆ ಎಂದು ಹೇಳುತ್ತಾರೆ ರಾಧಿಕಾ.



ಪುಸ್ತಕ ಓದುವುದು ಇವರ ಹವ್ಯಾಸಗಳು:

ರಾಧಿಕಾ ಅವರು  ಮಕರಂದ ಬಾಯರಿ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ, 

ಶಕ್ತಿನಗರ ಮಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top