ಸಂಭ್ರಮದ ಓಕುಳಿ ಸಂತಸದ ಹಾವಳಿ
ನಾಡಿನಲ್ಲೆಡೆ ದಸರಾ ಹಬ್ಬದ ಲೀಲಾವಳಿ
ನವದಿನ ನವನವೀನ ವರ್ಣಗಳ ಹಬ್ಬ
ಸವಿಯುವ ಕಂಗಳಲ್ಲಿ ಸಡಗರದ ದಿಬ್ಬ
ನವದುರ್ಗೆಯ ಪೂಜಿಸುತಲಿ ಭಕ್ತಿಯಿಂದ
ಮನದಲಿ ಸ್ಮರಿಸುತ ಜಪಿಸುವರು ನಾಮ
ಶಕ್ತಿದಾತೆಯ ವಿವಿಧ ಅವತಾರಗಳ ದರ್ಶನ
ದಸರಾ ಹಬ್ಬಕ್ಕೆ ವಿಶಿಷ್ಟವಾದ ಕಳೆಯ ಸಿಂಚನ
ಮೈಸೂರು ಒಡೆಯರ ವಿಜಯದ ಪ್ರತೀಕ
ಪ್ರತಿವರ್ಷ ಆಚರಿಸುವರು ಸಂಭ್ರಮದ ದ್ಯುತಕ
ಜಂಬೂ ಸವಾರಿ ಮೆರವಣಿಗೆ ಬಲು ಆಕರ್ಷಕ
ಚಾಮುಂಡೇಶ್ವರಿ ಹೊತ್ತ ಆನೆ ನಮಗೆಲ್ಲ ಪ್ರೇರಕ
ಜೀವವ ಸಂಹರಿಸಿ ಜೀವನ ರಕ್ಷಿಸುವ ಆಯುಧಗಳು
ಪೂಜಾ ಸ್ಥಾನ ಅಲಂಕರಿಸುವ ಸುಂದರ ಕ್ಷಣಗಳು
ಬಾಂಧವ್ಯ ವೃದ್ಧಿಸುವ ಬನ್ನಿಗೆ ವಿಶಿಷ್ಟವಾದ ದಿನ
ಪರಸ್ಪರ ವಿನಿಮಯದಿ ಗಟ್ಟಿಗೊಳಿಸಿತು ಬಂಧನ
ನಾವು ನೀವು ಬಂಗಾರದಂಗ ಇರೋಣ ಎನಲು
ಮನದಲಿ ಹೊಮ್ಮುವುದು ಆತ್ಮೀಯತೆ ಹೊನಲು
ನೂರಾರು ವರ್ಷಗಳ ಇತಿಹಾಸವಿರುವ ಈ ಹಬ್ಬ
ಮರೆಯಾಗದೆ ಬರುವ ಪೀಳಿಗೆಗೆ ಉಸಿರಾಗಲಿ ಹಬ್ಬ
- ಅವಿನಾಶ ಸೆರೆಮನಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ