ಮಂಗಳೂರು: ದೊಡ್ಡ ಡೀಲರ್ ಜಾಲದ ಭಾಗವಾಗಿರುವ ಎಎಂಎಲ್ ಮೋಟಾರ್ಸ್ ಇಂದು ಮಂಗಳೂರಿನಲ್ಲಿ ನೂತನ ಸೇವಾ ಕೇಂದ್ರವನ್ನು ಉದ್ಘಾಟಿಸಿದೆ. ನಗರದಲ್ಲಿ ಮಾರಾಟದ ನಂತರದ ತನ್ನ ಸೇವಾ ಕೇಂದ್ರವನ್ನು ತೆರೆಯುವುದರೊಂದಿಗೆ, ಎಎಂಎಲ್ ಮೋಟಾರ್ಸ್ ಈ ಪ್ರದೇಶದಾದ್ಯಂತ ಗ್ರಾಹಕರಿಗೆ ಅತ್ಯುತ್ತಮವಾದ ಸೌಲಭ್ಯ ಸಿಗುವ ಉದ್ದೇಶದಿಂದ ನೂತನ ಕೇಂದ್ರ ಆರಂಭಿಸಿದೆ.
"ಅಶೋಕ್ ಲೇಲ್ಯಾಂಡ್ ವಾಹನಗಳಿಗಾಗಿ ಕರ್ನಾಟಕ ಕರಾವಳಿ ಪ್ರದೇಶದ ಮಂಗಳೂರಿನ ಕಣ್ಣೂರು ಆರ್‍ಟಿಓ ಚೆಕ್ ಪೋಸ್ಟ್ ಬಳಿ ಅತ್ಯಾಧುನಿಕ ಸೇವಾ ಸೌಲಭ್ಯ ಆರಂಭಿಸಲಾಗಿದ್ದು, ಇದು ನಮ್ಮ ಗ್ರಾಹಕರ ವಾಹನಕ್ಕೆ ಸಕಾಲದಲ್ಲಿ ಗುಣಮಟ್ಟದ ಮತ್ತು ಕಾರ್ಯಕ್ಷಮತೆಯ ಸೇವೆಯನ್ನು ಅತ್ಯುತ್ತಮವಾಗಿ ಒದಗಿಸಲು ಅನುವು ಮಾಡಿಕೊಡಲಿದೆ ಎಂದು ಎಎಂಎಲ್ ಮೋಟಾರ್ಸ್ ಎಂಡಿ ರಾಜೀವ್ ಸಾಂಘ್ವಿ ಹೇಳಿದ್ದಾರೆ.
35,000 ಚದರ ಅಡಿಗಳಲ್ಲಿ ಹರಡಿರುವ ಹೊಸ ಅತ್ಯಾಧುನಿಕ ಸೌಲಭ್ಯವು ಅತ್ಯಾಧುನಿಕ ಟೋಲ್‍ಗಳೊಂದಿಗೆ ಸುಸಜ್ಜಿತವಾದ 10 ಬೇ ಗಳನ್ನು ಹೊಂದಿದೆ, ಇದನ್ನು ನುರಿತ, ಸಮರ್ಪಕ ತರಬೇತಿ ಪಡೆದ ಮೆಕ್ಯಾನಿಕ್‍ಗಳ ತಂಡವು ಕಾರ್ಯಾಚರಣೆ ಮಾಡುತ್ತದೆ ಮತ್ತು ನಿರ್ವಹಿಸುತ್ತದೆ.
ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್) 75 ರಲ್ಲಿ ಆಯಕಟ್ಟಿನ ಸ್ಥಳದಲ್ಲಿ ನೆಲೆಗೊಂಡಿರುವ ಈ ಅತ್ಯಾಧುನಿಕ ಸೌಲಭ್ಯವು ಎಲ್ಲ ಪಶ್ಚಿಮ ಮತ್ತು ದಕ್ಷಿಣ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿ ಕಾರ್ಯನಿರ್ವಹಿಸುತ್ತದೆ. ಎಂಆರ್‍ಪಿಎಲ್ ಮತ್ತು ಎನ್‍ಎಂಪಿಟಿ ಯಂತಹ ಪ್ರಮುಖ ಕೈಗಾರಿಕೆಗಳ ಸಾಮೀಪ್ಯದಿಂದಾಗಿ ಈ ಪ್ರದೇಶದ ವಿವಿಧ ವಾಹನ ವಿಭಾಗಗಳ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕೇಂದ್ರ ಆರಂಭಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ