ಕೆ.ಆರ್.ಪೇಟೆ: ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಬಂಧಿಸಿ, ಗಡಿಪಾರು ಮಾಡುವಂತೆ ಒತ್ತಾಯಿಸಿ ಕೆ.ಆರ್.ಪೇಟೆ ತಾಲೂಕು ಯುವ ಒಕ್ಕಲಿಗರ ಹೋರಾಟ ವೇದಿಕೆ ವತಿಯಿಂದ ಪಟ್ಟಣದಲ್ಲಿರುವ ಟಿ.ಬಿ. ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ, ರಸ್ತೆ ತಡೆ ಚಳುವಳಿ ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಾಹಿತಿ ಕೆ.ಎಸ್.ಭಗವಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್ .ಜಾನಕೀರಾಮ್ ಮಾತನಾಡಿ ಈ ಸಮಾಜಕ್ಕೆ ಅನ್ನ ನೀಡುವ ಶ್ರಮಿಕ ಸಮುದಾಯ ಒಕ್ಕಲಿಗ ಸಮುದಾಯವಾಗಿದೆ. ಎಲ್ಲಾ ಸಮುದಾಯವನ್ನು ಸಮಾನವಾಗಿ ಕಾಣುವ ಏಕೈಕ ಸಮುದಾಯವಾಗಿದೆ. ಒಕ್ಕಲಿಗ ಸಮುದಾಯಕ್ಕೆ ನಾಡಪ್ರಭು ಕೆಂಪೇಗೌಡರಿಂದ ಹಿಡಿದು ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡರಾದಿಯಾಗಿ ಎಲ್ಲರೂ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಹೀಗೆ ತನ್ನದೆ ಆದ ವಿಶೇಷ ಸ್ಥಾನಮಾನವಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಾಹಿತಿ ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದು, ಒಕ್ಕಲಿಗರಿಗೆ ನೋವುಂಟು ಮಾಡಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ಸ್ವಾಸ್ಥವನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಮಾತನಾಡಿದ ಯುವ ಮುಖಂಡ ಚಿಕ್ಕೋನಹಳ್ಳಿ ಬಿ.ಸಿ ಚೇತನ್ ನಮ್ಮ ಸಮುದಾಯ ಜನತೆ ಸಂಸ್ಕೃತಿ ಹೀನರಲ್ಲ ಸಂಸ್ಕೃತಿಯ ರಾಯಭಾರಿ ನಾಡಿಗೆ ಒಕ್ಕಲಿಗರ ಕೊಡುಗೆ ಸಾಕಷ್ಟಿದೆ ಅದನ್ನು ಅರ್ಥೈಸಿಕೊಳ್ಳದೆ, ಸಮುದಾಯದ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಕೆಲಸ ಮಾಡುವ ಇಂತಹ ಹುಚ್ಚರನ್ನ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್ ಶಿವರಾಮೇಗೌಡ,ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ ಅಶೋಕ್, ಹಿರಿಯ ಮುಖಂಡ ಗುಡ್ಡೆಹೊಸಹಳ್ಳಿ ಜವರಾಯಿಗೌಡ, ಕಸಬಾ ಹೋಬಳಿಯ ಜೆಡಿಎಸ್ ಅಧ್ಯಕ್ಷ ಮಾಕವಳ್ಳಿ ವಸಂತ ಕುಮಾರ್, ಅಗ್ರಹಾರ ಬಾಚಹಳ್ಳಿ ಬಿ.ವಿ.ನಾಗೇಶ್, ಅಗ್ರಹಾರ ಬಾಚಹಳ್ಳಿ ಗ್ರಾ.ಪಂ ಅಧ್ಯಕ್ಷ ಎ.ಸಿ ದಿವಿಕುಮಾರ್, ಡಾಬಾ ಮಂಜು, ಶೀಳನೆರೆ ಭರತ್, ದೊಡ್ಡಗಾಡಿಗನಹಳ್ಳಿ ಲೋಕೇಶ್, ಕೆರೆಕೋಡಿ ಆನಂದ್, ಜಗದೀಶ್, ಯುವ ಒಕ್ಕಲಿಗರ ವೇದಿಕೆ ಸದಸ್ಯರಾದ ಮಹೇಂದ್ರ, ಭಾಸ್ಕರ್, ಮಹೇಶ್, ಬೋರೇಗೌಡ, ಜಗದೇಶ್, ಗಿರೀಶ್, ನವೀನ್, ರಮೇಶ್, ಅಗ್ರಹಾರಬಾಚಹಳ್ಳಿ ವಾಸು ನಾರಾಯಣಗೌಡ, ಸೇರಿದಂತೆ ನೂರಾರು ಮಂದಿ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ