ಹಾಸನ: ಮಂಡ್ಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 14 / 17 ವಯಸ್ಸಿನ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಬ್ಯಾಸ್ಕೆಟ್ ಬಾಲ್ ಕ್ರೀಡಾಕೂಟ-2023-24ರಲ್ಲಿ, ಹಾಸನದ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಗಮನೀಯ ಸಾಧನೆಗಳನ್ನು ಮಾಡಿದ್ದಾರೆ.
14 ವಯಸ್ಸಿನ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಿಕ್ಕಮಗಳೂರು ವಿರುದ್ಧ ಪ್ರಥಮ ಸ್ಥಾನವನ್ನು ಹಾಸನ ಜಿಲ್ಲೆಯು ಪಡೆದುಕೊಂಡಿದೆ. ಈ ತಂಡದಲ್ಲಿನ ನಮ್ಮ ಶಾಲೆಯ ಏಳು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇದರಲ್ಲಿ ರಾಘವ್ ಕೆ.ಕೆ ಅತಿ ಹೆಚ್ಚು ಬ್ಯಾಸ್ಕೆಟ್ ಶೂಟ್ ಮಾಡಿದ ಕ್ರೀಡಾಪಟು ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲೆಯ ವಿದ್ಯಾರ್ಥಿಗಳೆಂದರೆ, ಮನೋಜ್ ವೈ ಸಿ, ರಾಘವ್ ಕೆ ಕೆ, ಸುದೀಪ್ ಜೋಯಲ್ ಏಸುದಾಸ್, ಪ್ರಥಮ್ ಗೌಡ ಹೆಚ್ ಎಸ್, ಮೋಹಿತ್ ಎನ್, ಸೂರ್ಯ ಕೆ, ಪ್ರೀತಂ ಗೌಡ ಎಂ. ಯು.
17 ವಯಸ್ಸಿನ ವಯೋಮಿತಿಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ವಿರುದ್ಧ ಪ್ರಥಮ ಸ್ಥಾನವನ್ನು ಹಾಸನ ಜಿಲ್ಲೆಯ ಪಡೆದುಕೊಂಡಿದೆ. ಈ ತಂಡದಲ್ಲಿ ನಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ, ಹಾಗೂ ನಮ್ಮ ಶಾಲೆಯ ವಿದ್ಯಾರ್ಥಿ ಪ್ರೀತಮ್ ಪಿ.ಎ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಮ್ಮ ಶಾಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳೆಂದರೆ, ಶಿವು ಪಟೇಲ್ ಹೆಚ್ ಬಿ, ಪ್ರೀತಮ್ ಪಿ ಎ.
17 ವಯಸ್ಸಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮಂಡ್ಯ ವಿರುದ್ಧ ದ್ವಿತೀಯ ಸ್ಥಾನವನ್ನು ಪಡೆದ ಹಾಸನ ತಂಡದಲ್ಲಿ ನಮ್ಮ ಶಾಲೆಯ ಐದು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರುಗಳೆಂದರೆ,ರೇವತಿ ಪಿಎಲ್, ನೇಹಾ ಕೆ, ತೇಜಸ್ವಿನಿ, ಅಚಲ್ ಅನಿಲ್ ನಾರ್ವೆಕರ್, ಕೃತಿಕಾ ಎಂಎಲ್.
ಈ ಅಪ್ರತಿಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ, ಕಾರ್ಯದರ್ಶಿಗಳಾದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರು ಹಾಗೂ ಶಾಲೆಯ ಮುಖ್ಯಸ್ಥರು, ಶಿಕ್ಷಕ ವರ್ಗದವರು ಮತ್ತು ಪೋಷಕರು ಅಭಿನಂದನೆಯನ್ನು ತಿಳಿಸಿದರು.
ವರದಿ: ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ