ಧರ್ಮತ್ತಡ್ಕ: ನವಂಬರ್ 7ರಿಂದ 10ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ 62 ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ ರೂಪುಗೊಂಡ ವಿವಿಧ ಸಮಿತಿಗಳ ಸಮಾಲೋಚನಾ ಸಭೆ ಸೋಮವಾರ ಇಲ್ಲಿನ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.
ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಸಭಾಧ್ಯಕ್ಷತೆ ವಹಿಸಿ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಿದರು. ಕಲೋತ್ಸವದಾದ್ಯಂತ ತಾನು ಜೊತೆಗಿರುವುದಾಗಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಸಂಘಟನಾ ಸಮಿತಿಗಳ ಪ್ರಗತಿಯ ದಾಖಲೀಕರಣದ ಮಹತ್ವವನ್ನು ತಿಳಿಸಿದರು.
ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಸಭೆಯನ್ನು ಉದ್ದೇಶಿಸಿ ಮಾತನಾಡಿ, ದೇಶ ವಿದೇಶಗಳಲ್ಲಿ ಉತ್ತಮ ನೆಲೆಯಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಬೇಕೆಂದು ಕೋರಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಮಾತನಾಡಿ ಸರ್ವರೂ ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಿದರು.
ಪ್ರೋಗ್ರಾಂ ಕಮಿಟಿಯ ಕನ್ವೀನರ್ ಸತೀಶ್ ಕುಮಾರ್ ಶೆಟ್ಟಿ, ಫುಡ್ ಕಮಿಟಿ ಕನ್ವೀನರ್ ರಾಜಕುಮಾರ್ ಕೆ, ರಿಸೆಪ್ಷನ್ ಸಮಿತಿ ಕನ್ವೀನರ್ ಶ್ರೀಮತಿ ಉಷಾ ಕೆ.ಆರ್, ಫೈನಾನ್ಸ್ ಸಮಿತಿ ಕನ್ವೀನರ್ ರಾಮಮೋಹನ್ ಸಿ ಯಚ್, ಸ್ಟೇಜ್ ಲೈಟ್ ಹಾಗೂ ಸೌಂಡ್ಸ್ ಸಮಿತಿ ಕನ್ವೀನರ್ ಪ್ರಶಾಂತ ಹೊಳ್ಳ, ಡಿಸಿಪ್ಲಿನ್ ಸಮಿತಿ ಕನ್ವೀನರ್ ಉಣ್ಣಿಕೃಷ್ಣನ್, ಟ್ರೋಫಿ ಕಮಿಟಿ ಕನ್ವೀನರ್ ಶಿವಪ್ರಸಾದ್ ಸಿ, ಪಬ್ಲಿಸಿಟಿ ಸಮಿತಿ ಕನ್ವೀನರ್ ಪ್ರದೀಪ್ ಕೆ ಹಾಗೂ ಹೆಲ್ತ್ ಹಾಗೂ ಸಾನಿಟೈಸೇಶನ್ ಸಮಿತಿ ಕನ್ವೀನರ್ ರಾಮಕೃಷ್ಣ ಭಟ್ ಹೀಗೆ ಕಲೋತ್ಸವದ ಯಶಸ್ಸಿಗಾಗಿ ರಚಿಸಿದ ಎಲ್ಲಾ 9 ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು. ಸಮಿತಿಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವುದಕ್ಕಾಗಿ ಸಭಿಕರ ಅಭಿಪ್ರಾಯಗಳನ್ನೂ ಶೇಖರಿಸಲಾಯಿತು. ಎಚ್.ಎಂ ಫೋರಂ ಸೆಕ್ರೆಟರಿ ಶಾಮ ಭಟ್, ಸಹ ಕಾರ್ಯದರ್ಶಿ ಸತ್ಯಪ್ರಕಾಶ್, ಸ್ಥಳೀಯ ವೈದ್ಯಾಧಿಕಾರಿ ಶ್ರೀಮತಿ ಡಾ.ಸೀತಾ ರತ್ನ, ಹೈಸ್ಕೂಲ್ ಹಾಗೂ ಯುಪಿ ಶಾಲೆಗಳ ಪಿ.ಟಿ.ಎ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮತ್ತು ಅಶೋಕ, ಎಂ.ಪಿ.ಟಿ ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ವಾರ್ಡ್ ಸದಸ್ಯರಾದ ಅಶೋಕ ಭಂಢಾರಿ, ಶಾಂತಿ ವೈ, ಗಂಗಾಧರ್, ಪಾಲಾಕ್ಷ, ಯು.ಪಿ ಶಾಲಾ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.
ಯು.ಪಿ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಪ್ರಾರ್ಥಿಸಿದರು. ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್ ವಂದಿಸಿದರು. ಶ್ರೀನಿವಾಸ್ ಕೆ.ಎಚ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ