ಶಿವರಾಮ ಕಾರಂತರು ಕನ್ನಡದ ಕಣ್ಮಣಿ : ಡಾ ಮೀನಾಕ್ಷಿ ರಾಮಚಂದ್ರ

Upayuktha
0


ಮಂಗಳೂರು: ಕ. ಸಾ. ಪ, ಮಂಗಳೂರು ತಾಲೂಕು ಘಟಕ ಇದರ ವತಿಯಿಂದ ಮಂಗಳವಾರದಂದು ಡಾ. ಶಿವರಾಮ ಕಾರಂತರ 122ನೇ ಜನ್ಮ ದಿನಾಚರಣೆಯನ್ನು  ನಗರದ ಶಾರದಾ ವಿದ್ಯಾಲಯದಲ್ಲಿ ಆಚರಿಸಿ ಸಂಭ್ರಮಿಸಲಾಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ್ ಎಸ್. ರೇವಣಕರ್ ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು  ತಾಲೂಕು ಘಟಕ ಇದರ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಡಾ. ಶಿವರಾಮ ಕಾರಂತರ ಭಾವ ಚಿತ್ರಕ್ಕೆ ಪುಷ್ಪನಮನ  ಸಲ್ಲಿಸಿದರು.  ರತ್ನಾವತಿ ಜೆ ಬೈಕಾಡಿ ಅವರು ಪ್ರಾರ್ಥನೆಗೈದರು. ಕ. ಸಾ. ಪ ದ ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಸ್ವಾಗತಿಸಿದರು.  ಕ. ಸಾ. ಪ ದ ಇನ್ನೋರ್ವ ಕಾರ್ಯದರ್ಶಿಗಳಾದ ಎನ್. ಗಣೇಶ್ ಪ್ರಸಾದ್ ಜೀ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಮೀನಾಕ್ಷಿ ರಾಮಚಂದ್ರ ಅವರು ಕಾರಂತರ ಬಗ್ಗೆ ಉಪನ್ಯಾಸ ಮಾಡಿದರು. ಡಾ. ಶಿವರಾಮ ಕಾರಂತರು ಕನ್ನಡ ನಾಡು ಕಂಡ ಅಪ್ರತಿಮ ಸಾಹಿತಿ ಎಂದು ಅಭಿಪ್ರಾಯಪಟ್ಟರು. ಸುಬ್ರಾಯ ಭಟ್ ಅವರು ಧನ್ಯವಾದ ಸಮರ್ಪಿಸಿದರು . ಈ ಸಂದರ್ಭದಲ್ಲಿ ಶ್ರೀ ರಘು ಇಡ್ಕಿದು,  ಮೆದು ತಿರುಮಲೇಶ್ವರ ಭಟ್,  ಕ್ರಷ್ಣಪ್ಪ ನಾಯಕ್, ಕ್ರಷ್ಣ ಭಟ್,  ಚಂದ್ರಶೇಖರ ನಾವಡ,  ದೊಡ್ಡಮನಿ,  ಉಷಾ ಜಿ ಪ್ರಸಾದ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top