ಬಂಟ್ವಾಳ: ಮಂಗಳೂರು ಹವ್ಯಕ ಮಂಡಲದ ಸೆಪ್ಟೆಂಬರ್ ತಿಂಗಳ ಸಭೆಯು ಶನಿವಾರ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಡೆಯಿತು.
ಹಿಂದಿನ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅವರನ್ನು ಸಮ್ಮಾನಿಸಲಾಯಿತು.
ಬಳಿಕ ನೂತನ ಪದಾಧಿಕಾರಿಗಳ ಪ್ರಥಮ ಸಭೆ ನಡೆಯಿತು. ನೂತನ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಮಂಡಲ, ವಲಯಗಳ ಜವಾಬ್ದಾರಿ ಬಗ್ಗೆ, ಶ್ರೀ ಮಠದ ಯೋಜನೆಗಳ ಬಗ್ಗೆ, ಮಾಣಿ ಮಠದಲ್ಲಿ ನಡೆಯುವ ನವರಾತ್ರ ನಮಸ್ಯಾ ಕಾರ್ಯಕ್ರಮದ ಬಗ್ಗೆ, ಅಂಗ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ, ಮಾರ್ಗದರ್ಶನದಲ್ಲಿ ಕ್ರಿಯಾಶೀಲರಾಗಿರೋಣ ಎಂದು ಹೇಳಿದರು.
ಆಡಳಿತ ಖಂಡದ ಶ್ರೀಸಂಯೋಜಕ ಹಾರಕರೆ ನಾರಾಯಣ ಭಟ್, ಪ್ರಾಂತ ಕಾರ್ಯದರ್ಶಿ ವೇಣು ಕೆದ್ಲ, ಮಂಡಲ ಗುರಿಕ್ಕಾರ ಉದಯ ಕುಮಾರ್ ಖಂಡಿಗ, ನಿರ್ಗಮನ ಅಧ್ಯಕ್ಷ ಗಣೇಶಮೋಹನ ಕಾಶಿಮಠ, ನಿರ್ಗಮನ ಉಪಾಧ್ಯಕ್ಷ ರಮೇಶ ಭಟ್ ನೂಜಿಬೈಲು, ನಿರ್ಗಮನ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಹಳೆಮನೆ, ನಿರ್ಗಮನ ಕೋಶಾಧಿಕಾರಿ ಮುರಳಿಕೃಷ್ಣ ಕುಕ್ಕಿಲ, ನಿರ್ಗಮನ ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಕೆ.ಜಿ., ಮಂಡಲ ನೂತನ ಉಪಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಕೋಶಾಧಿಕಾರಿ ಮಹೇಶ್ವರ ಭಟ್ ಕೆ., ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಮ್ಮಜೆ, ವಿವಿಧ ಯೋಜನೆಗಳ ಪ್ರಧಾನರಾದ ಅಮೈ ಶಿವಪ್ರಸಾದ ಭಟ್, ಭಾಸ್ಕರ ಹೊಸಮನೆ, ಸುರೇಶ್ ಕುಮಾರ್ ಶಾಂತಿಮೂಲೆ, ಈಶ್ವರ ಭಟ್ ವಾರಣಾಶಿ, ಕೃಷ್ಣಪ್ರಮೋದ ಶರ್ಮ, ಪ್ರದೀಪ ಕೊಣಾಜೆ, ವೀಣಾಸರಸ್ವತೀ ಅಳಕೆಮಜಲು, ಭಾರ್ಗವಿ ಕುಂದಾಪುರ, ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್, ಉಮಾಶಿವ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ರುದ್ರ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರಪ್ರಸಾದ್, ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, 12 ವಲಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ