ಮಂಗಳೂರು: ಮಂಗಳೂರು ನಗರ ಸಹಿತ ದ.ಕ. ಜಿಲ್ಲೆಯಲ್ಲಿ ವೈಭವದಿಂದ ನಡೆಯುವ ನಾಡಹಬ್ಬ ದಸರಾದಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ಪದವಿ ಕಾಲೇಜುಗಳಿಗೂ ದಸರಾ ರಜೆ ಘೋಷಿಸಬೇಕೆಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದ.ಕ . ಜಿಲ್ಲಾಧ್ಯಕ್ಷ (ಸ್ವಾಯತ್ತ) ಸುಧಾಂಶು ರೈ ಪಿ. ಆಗ್ರಹಿಸಿದ್ದಾರೆ.
ಈಗಾಗಲೇ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದ್ದು ಪದವಿ ಕಾಲೇಜು ವಿದ್ಯಾರ್ಥಿಗಳು ದಸರಾ ರಜೆಯಿಂದ ವಂಚಿತರಾಗಿದ್ದಾರೆ.
ಮಂಗಳೂರು ದಸರಾವು ನಾಡಿನ ಪ್ರಮುಖ ಹಬ್ಬವಾಗಿದ್ದು ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ರಜೆ ನೀಡುವ ಬಗ್ಗೆ ಇಲಾಖೆಗೆ ಆದೇಶ ನೀಡಬೇಕೆಂದು ಅವರು ಉನ್ನತ ಶಿಕ್ಷಣ ಸಚಿವರನ್ನು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


