ಕುಂಜಾರುಗಿರಿ: ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಮತ್ತು ಸನಾತನ ಧರ್ಮದ ಉಳಿವಿಗಾಗಿ ಸುಮಾರು 150 ಋತ್ವಿಜರಿಂದ 10 ಹೋಮ ಕುಂಡಗಳಲ್ಲಿ ಒಂದು ಲಕ್ಷ ಸಂಖ್ಯೆ ಜಾತವೇದಸೀ ತ್ರಿಷ್ಟುಪ್ ಮಂತ್ರ ಹೋಮ ನಡೆಯಿತು.
ಯಾಗ ಆರಂಭದಲ್ಲಿ ಶಿರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಗಮಿಸಿ , ನಮ್ಮ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ನಾವು ದೇವರ ಮೊರೆ ಹೋಗಿ ಪ್ರಾರ್ಥಿಸಬೇಕು.ನಮ್ಮ ಶತ್ರುಗಳು ನಾಶವಾಗದೆ ಅವರ ಒಳಗಿರುವ ಶತ್ರುತ್ವ ನಾಶ ಆಗಬೇಕು.ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಎಲ್ಲರಿಗೂ ದೇವತಾನುಗ್ರಹವಾಗಲಿ ಎಂದು ಆಶೀರ್ವಚನ ನೀಡಿದರು.
ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ನಡೆಯಿತು.ಹಿಂದೂ ಧರ್ಮ ರಕ್ಷಣೆಯನ್ನು ಮಾಡಲು ಪಣ ತೊಟ್ಟಿರುವವರಿಗೆ ದೇವರ ರಕ್ಷಣೆ ಬೇಕಾಗಿರುವುದರಿಂದ ನಾವೆಲ್ಲರೂ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರೊಂದಿಗೆ ಕೈಜೋಡಿಸಬೇಕು.ಸದೃಢ ಭಾರತವನ್ನು ಕಟ್ಟಲು ದೇವರ ಪ್ರಾರ್ಥನೆಯೊಂದಿಗೆ ನಮ್ಮ ಪ್ರಯತ್ನವು ಅಗತ್ಯವಾಗಿದೆ.ಈ ಸಂದರ್ಭದಲ್ಲಿ ಋತ್ವಿಜರು ನಿಸ್ವಾರ್ಥವಾಗಿ ಮಾಡಿದ ಕರ್ಮಾಂಗವು ದೇವರ ಚಿತ್ತಕ್ಕೆ ಬಂದು ದೇಶಕ್ಕೆ ಹಾಗೂ ದೇಶವನ್ನು ಆಳುವವರಿಗೆ ಶೆಯಸ್ಸಾಗಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಅದಮಾರು ಹಿರಿಯ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಶುಭಾಶೀರ್ವಾದ ಹಾಗೂ ಪೂರ್ಣ ಸಹಕಾರದಲ್ಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ವಿದ್ವಾಂಸರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ಗೋಪಾಲಕೃಷ್ಣ ಜೋಯಿಸ್, ಪಂಜ ಭಾಸ್ಕರ ಭಟ್, ನಿಟ್ಟೆ ಪ್ರಸನ್ನ ಆಚಾರ್ಯ, ಹೆರ್ಗ ಜಯರಾಮ ತಂತ್ರಿ,ಹೆರ್ಗ ರವೀಂದ್ರ ಭಟ್,ಅರ್ಚಕರಾದ ಗೋಪಾಲಕೃಷ್ಣ ಭಟ್,ರಾಘವೇಂದ್ರ ಭಟ್, ಬೆಳ್ಳೆ ಮಧ್ವರಾಜ ಭಟ್, ಪಡುಬಿದ್ರೆ ರಾಜೇಶ ಉಪಾಧ್ಯಾಯ ಮೊದಲಾದವರು ಭಾಗವಹಿಸಿದ್ದು, ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಪುತ್ತೂರಿನ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ,ದೇವಸ್ಥಾನದ ಮೆನೇಜರ್ ರಾಜೇಂದ್ರ ರಾವ್, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಸಂದೀಪ್ ಮಂಜ ಹಾಗೂ ಶ್ರೀಕಾಂತ್ ಉಪಾಧ್ಯಾಯ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷರಾದ ಶ್ರೀಕಾಂತ ನಾಯಕ್,ಕುರ್ಕಾಲು ಸುಂದರ ಶೆಟ್ಟಿ ,ಬಿಜೆಪಿ ಮುಖಂಡರುಗಳಾದ ಗೀತಾಂಜಲಿ ಸುವರ್ಣ, ಸುಮಾ ಶೆಟ್ಟಿ, ವಿಶ್ವನಾಥ ಶೆಟ್ಟಿ ಬೆಳ್ಳೆ, ವಿಶ್ವನಾಥ ಪೂಜಾರಿ,ಬೆಳ್ಳೆ ಪಂಚಾಯತಿನ ಅಧ್ಯಕ್ಷರಾದ ದಿವ್ಯ ಆಚಾರ್ಯ,ಉಪಾಧ್ಯಕ್ಷರಾದ ಶಶಿಧರ ವಾಗ್ಲೆ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ