"ಅಭಿರಾಮಚಂದ್ರ" ಚಿತ್ರ ಪ್ರೀಮಿಯರ್ ಶೋ ಉದ್ಘಾಟನಾ ಸಮಾರಂಭ
ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ಕರಾವಳಿಯ ಕಲಾವಿದರು ಅದ್ಭುತ ಸಾಧನೆ ಮಾಡುತ್ತಿದ್ದು, ಅವರಿಗೆ ನಾವೆಲ್ಲರು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮಂಗಳೂರು ಕಂಬಳದ ರೂವಾರಿ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಕರಾವಳಿಯ ನಿರ್ದೇಶಕ ನಾಗೇಂದ್ರ ಗಾಣಿಗ ನಿರ್ದೇಶನದ "ಅಭಿರಾಮಚಂದ್ರ'ದಲ್ಲಿ ನಾಯಕಿ ನಟಿಯಾಗಿ ಮಂಗಳೂರಿನ ಶಿವಾನಿ ರೈ ನಟಿಸಿದ್ದಾರೆ. ಇಂತಹ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸಲು ಈ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಬೇಕು. ಮಂಗಳೂರು, ಉಡುಪಿ, ಮಣಿಪಾಲ, ಕುಂದಾಪುರ ಮತ್ತು ಪುತ್ತೂರಿನಲ್ಲಿ ಸೇರಿದಂತೆ ರಾಜ್ಯಾದ್ಯಂತ ಅಕ್ಟೋಬರ್ 6ರಿಂದ ವೀಕ್ಷಣೆಗೆ ಲಭ್ಯವಿದೆ ಎಂದರು.
ಈ ಸಂದರ್ಭ ಯೆನೆಪೋಯ ವೈದ್ಯಕೀಯ ಸಂಸ್ಥೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಲಕ್ಷ್ಮೀಶ್ ಉಪಾಧ್ಯಾಯ, ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಉದ್ಯಮಿ ಹರಿಕಿಶನ್ ಶೆಟ್ಟಿ, ದಿವಾಕರ್ ಸಾಮಾನಿ, ಭಾರತೀ ಪ್ರಕಾಶ್, ಪ್ರಥಮ್ ಭಂಡಾರಿ, ನಟರಾದ ಶನಿಲ್ ಗುರು, ಪ್ರಕಾಶ್ ತುಮಿನಾಡ್, ಹಿರಿಯ ಪತ್ರಕರ್ತ ಯು. ಕೆ. ಕುಮಾರ್‌ನಾಥ್, ರವೀಂದ್ರ ಶೆಟ್ಟಿ, ಚಿತ್ರದ ನಿರ್ದೇಶಕ ನಾಗೇಂದ್ರ ಗಾಣಿಗ, ನಾಯಕ ನಟಿ ಶಿವಾನಿ ರೈ, ನಾಯಕರಾದ ರಥ ಕಿರಣ್, ಸಿದ್ದು ಮೂಲಿಮನಿ, ನಾಟ್ಯರಂಗ, ಬಾಲ ನಟ ತನ್ಮಯ್ ಆರ್. ಶೆಟ್ಟಿ, ಬಾಲನಟಿ ಅನ್ವೇಷ, ಸುಚಿತ್ರಾ ಶೆಟ್ಟಿ, ಶೋಭಾ ವಿ. ರೈ, ಡಾ. ವೀರೇಶ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ