ಪ್ರೀತಿಯೊಂದೇ ಕುಟುಂಬದ ಬೆನ್ನೆಲುಬು

Upayuktha
0


"ಮಾನವ ಮೂಲತಃ ಸಮಾಜ ಜೀವಿ, ಸಂಘ ಜೀವಿ." "ಸಮಾಜವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಸಮಾಜವಿಲ್ಲ." ಇದು ಸಮಾಜಶಾಸ್ತ್ರಜ್ಞರ ಮಾತು. ಅದರಲ್ಲೂ "ಮ್ಯಾನ್ ಈಸ್ ಎ ಸೋಶಿಯಲ್ ಎನಿಮಲ್" ಎಂದು ಹೇಳಿದವರು ಅರಿಸ್ಟಾಟಲ್. ಹೀಗೆ ಅನೇಕ ಸಮಾಜಶಾಸ್ತ್ರಜ್ಞರು, ಮೇಧಾವಿಗಳು, ತತ್ವಜ್ಞಾನಿಗಳು ಕುಟುಂಬದ ಮಹತ್ವವನ್ನು ಸಾರಿ ಸಾರಿ ಹೇಳಿದ್ದಾರೆ.


ಬದುಕಿನುದ್ದಕ್ಕೂ, ಅದೆಷ್ಟೋ ಅಪರಿಚಿತರು ಪರಿಚಿತರಾಗಿ, ಕೆಲವೊಮ್ಮೆ ಬಿಗಿಯಾದ ಬಂಧವೊಂದು ಹುಟ್ಟುತ್ತಲೇ ಇರುತ್ತವೆ. ಈ ಎಲ್ಲಾ ಭೇಟಿಗಳ ನಡುವೆ ಸದಾ ನಮ್ಮೊಂದಿಗೆ ಜೊತೆಯಾಗಿ ಇರುವವರೇ ರಕ್ತ ಸಂಬಂಧಿಗಳು ಅಥವಾ ಕುಟುಂಬ. ಕುಟುಂಬ ಎಂದರೆ ನಮ್ಮೆಲ್ಲಾ ನೋವು- ನಲಿವುಗಳಲ್ಲೂ ಭಾಗಿಯಾಗುವವರು. ಜೀವನದಲ್ಲಿ ಸದಾ ಎಚ್ಚರಿಕೆಯನ್ನು ನೀಡುತ್ತಾ, ಬದುಕಿಗೆ ಕಣ್ಣಾಗುವವರು. ತಮ್ಮಲ್ಲಿ ಒಬ್ಬ ವ್ಯಕ್ತಿಗೆ ನೋವಾದಾಗ ಇಡೀ ಕುಟುಂಬ ಅವನ ಜೊತೆ ನಿಲ್ಲುತ್ತದೆ. ಅವನ ನಗುವಿಗೆ ಕಾರಣರಾಗುತ್ತಾರೆ.


ಇದನ್ನೂ ಓದಿ: ಮಕ್ಕಳಿಗೆ ಪ್ರೀತಿ ಏಕೆ ಮರೀಚಿಕೆಯಾಗಬೇಕು?


ಈಗಿನ ಕುಟುಂಬಗಳಲ್ಲಿ ಇಂತಹ ಪ್ರೀತಿ ಮರೆಮಾಚಿವೆ. ಕೆಲವೊಮ್ಮೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಂದ ಕುಟುಂಬಗಳು ಒಡೆದು ಹೋಗಿ, ಒಂದು ಕುಟುಂಬ ನಾಲ್ಕಾರು ಮನೆಗಳಾಗಿ ವಿಭಜನೆಯಾಗುತ್ತಿದೆ. ಪ್ರೀತಿ, ವಿಶ್ವಾಸಗಳ ಕೊರತೆ ಎದ್ದು ಕಾಣುತ್ತಿವೆ. ಇಂದಿನ ಪೀಳಿಗೆಗೆ ರಕ್ತ ಸಂಬಂಧಿಗಳ ಪರಿಚಯವೇ ಇಲ್ಲವಾಗಿವೆ. ಕುಟುಂಬಿಕರು ಅಪರೂಪಕ್ಕೊಮ್ಮೆಯಾದರು ಮನೆಗೆ ಬಂದರೂ ಕೂಡ ಒಂದು ಲೋಟ ನೀರು ಕೊಡಲು ಸಾಧ್ಯವಾಗದಷ್ಟು ಪುರುಸೊತ್ತಿಲ್ಲ.


ಕೆಲವೊಂದು ಸಣ್ಣ ಪುಟ್ಟ ವಿಚಾರಗಳನ್ನೇ ಕೊಳಕು ಮನದಲ್ಲಿ ತುಂಬಿ, ಅರ್ಥವಿಲ್ಲದ ಕಾರಣಗಳಿಂದ ಕುಟುಂಬಿಕರನ್ನು ಮರೆತು ಹೋಗುವಂತಹ ಕೆಟ್ಟ ಕಾಲಘಟ್ಟದಲ್ಲಿ ನಾವಿದ್ದೇವೆ ಎನ್ನುವುದು ನಿಜಕ್ಕೂ ಆಘಾತಕಾರಿ. ಕೆಲವರಂತೂ "ಕಳ್ಳನಿಗೊಂದು ಪಿಳ್ಳೆ ನೆಪ" ಎಂಬ ಗಾದೆಯಂತೆ ಸಂಬಂಧಿಕರಲ್ಲಿ ಮಾತನಾಡುವುದನ್ನು ತಪ್ಪಿಸಲು ನಿದ್ದೆಮಾಡುವ ಹಾಗೆ ಅಥವಾ ಯಾವುದೋ ಕಾರ್ಯದಲ್ಲಿ ಮಗ್ನರಾಗಿರುವಂತೆ ನಾಟಕ ಮಾಡುತ್ತಾರೆ.


ಒಟ್ಟಿನಲ್ಲಿ ಹೇಳುವುದಾದರೆ ಕುಟುಂಬ ಎನ್ನುವುದು ದೇವರ ಒಂದು ಅದ್ಭುತ ಕೊಡುಗೆ. ದಯವಿಟ್ಟು ಅದನ್ನು ಪ್ರೀತಿಯಿಂದ ಕಾಪಾಡಿ. ಪ್ರೀತಿಯೊಂದೇ ಕುಟುಂಬದ ಬೆನ್ನೆಲುಬು. ಅದರಲ್ಲೂ ಕಂಜೂಸುತನ ತೋರಬೇಡಿ.




- ಸಂಶೀನ ಸೂರ್ಯ,

ದ್ವಿತೀಯ ಪತ್ರಿಕೋದ್ಯಮ,

ವಿವೇಕಾನಂದ ಕಾಲೇಜು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top