ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Upayuktha
0


ಮಡಿಕೇರಿ: ಮಡಿಕೇರಿಯ ಬೆಳ್ಳಿಯಪ್ಪ ಸ್ಮಾರಕ ಸಭಾಭವನದಲ್ಲಿ ಕೊಡಗು ಜಿಲ್ಲಾ  ಕುಲಾಲ ಕುಂಬಾರ ಸಮಾಜದ ಕುಲಬಾಂಧವರು ಒಟ್ಟು ಸೇರಿ ಜಿಲ್ಲಾ ಕುಂಬಾರ ಕುಲಾಲ ಸಂಘಕ್ಕೆ ನೂತನ ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡುವ ಕಾರ್ಯಕ್ರಮ ಅಕ್ಟೋಬರ್ 8ರಂದು ನಡೆಯಿತು.


ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶ್ರೀ ಎಮ್‌ಡಿ ನಾನಯ್ಯ ಅವರು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಮುತ್ತಮ್ಮ ಕೋಟಿ ಇವರು ಹಲವಾರು ವರ್ಷ ಸಂಘಕ್ಕೆ ಪ್ರಾಮಾಣಿಕವಾಗಿ ಸೇವೆ ಮಾಡಿದ್ದನ್ನು ಸ್ಮರಿಸುತ್ತಾ, 'ಒಂದು ಸಮಾಜದ ಸಂಘ ಬಲಿಷ್ಠವಾದಾಗ ಆ ಸಮಾಜವು ಅಭಿವೃದ್ಧಿ ಹೊಂದುತ್ತದೆ. ಎಲ್ಲರೂ ಜೊತೆಗೂಡಿ ನಡೆದಾಗ ಸಮಾಜದ ಏಳಿಗೆಯೂ ಇನ್ನಷ್ಟು ಬೆಳಗುತ್ತದೆ. ಆ ಮೂಲಕ ಹೊಸ ಸಮಿತಿಯು ಕಾರ್ಯಪ್ರವೃತ್ತವಾಗಿ ಕೆಲಸ ಮಾಡಲಿ. ಕುಲಾಲ ಕುಂಬಾರ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಹೊಸ ಸಮಿತಿಯು ಕಟಿಬದ್ಧರಾಗಲಿ ಎಂದು ಜಿಲ್ಲಾಧ್ಯಕ್ಷರಾದ ಎಂ.ಡಿ ನಾಣಯ್ಯ ಅವರು ತಿಳಿಸಿದರು.


ನಂತರ ಕುಲಾಲ ಕುಂಬಾರ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ 75% ಕ್ಕಿಂತ ಹೆಚ್ಚು ಅಂಕ ತೆಗೆದ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು.


ನಂತರ ಕುಲಬಾಂಧವರಿಗೆ ಆಪತ್ಕಾಲದಲ್ಲಿ ನೆರವಾದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ಗೌರವ ಸಲಹೆಗಾರರಾದ ಉದ್ಯಮಿ ಲಯನ್ ದಾಮೋದರ್ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. 



ಸನ್ಮಾನ ಸ್ವೀಕರಿಸಿ ಮಾತನಾಡಿದ ಲಯನ್ ದಾಮೋದರ್ ಅವರು, ಎಲ್ಲರೂ ಒಮ್ಮಸಿನಿಂದ ಒಗ್ಗೂಡಿದಾಗ ಸಮಾಜ ಬೆಳೆಯಲು ಸಾಧ್ಯ ಆ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯವನ್ನು ಇನ್ನಿತರ ವ್ಯವಸ್ಥೆಗಳನ್ನು ಪೂರೈಸಲು ಅನುಕೂಲವಾಗುತ್ತದೆ ಎಂದರು.


ನಂತರ ಕೊಡಗು ಜಿಲ್ಲಾ, ಕುಲಾಲ ಕುಂಬಾರ ಯುವ ಘಟಕದ ಇನ್ನೊಬ್ಬರು ಗೌರವ ಸಲಹೆಗಾರರಾದ ಕುಶಾಲಪ್ಪ ಕುಶಾಲನಗರ RTD ASI ಅವರು ಮಾತನಾಡಿ, ಸಂಘದ ಕುಲಬಾಂಧವರೆಲ್ಲ ಸಂಘದ ವತಿಯಿಂದ ನಡೆಯುವ ವಾರ್ಷಿಕ ಮಹಾಸಭೆಗೆ ತಮ್ಮ ಸಂಸಾರದೊಂದಿಗೆ ಸಭೆಗೆ ಹಾಜರಾಗಿ ಮುಂದೆ ನಡೆಯುವ ಕ್ರೀಡಾಕೂಟ ಮತ್ತು ಇತರ ಮನೋರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆಯೂ ಕರೆ ನೀಡಿದರು. ಮತ್ತು ಸಂಘವು ಗಟ್ಟಿಯಾದಾಗ ಸಮಾಜದ ಬೆಳವಣಿಗೆ ಆಗುತ್ತದೆ ಆ ಮೂಲಕ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.


ಸದಸ್ಯ ದಿನೇಶ್ ಐಗೂರು ಅವರು ಮಾತನಾಡಿ ಸಂಘದ ಬೆಳವಣಿಗೆಗೆ ಯುವಕರ ಪಾತ್ರ ಮಹತ್ತರವಾದದ್ದು ಅದಕ್ಕಾಗಿ ಯುವಕರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.


ನಂತರ ಮಾತನಾಡಿದ ಮಡಿಕೇರಿಯ ಎಎಸ್‌ಐ ಚಂದ್ರಶೇಖರ್, ಅರುಣ್ ಕುಲಾಲ್ ಕೂಡಿಗೆ, ಅಶ್ವತ್ ಮಡಿಕೆ ಬೀಡು, ಚಂದ್ರಶೇಖರ್ ಮುರ್ನಾಡು, ಸಂಘದ ಬೆಳವಣಿಗೆಗೆ ಪೂರಕವಾದ ಸಲಹೆ ನೀಡಿದರು. ಮತ್ತು ಯುವ ಘಟಕದ ಹಲವು ಸಮಾಜಮುಖಿ ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆ ಸಹಕಾರ ನೀಡಿದ್ದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.


ನಂತರ ನೂತನ ಸಮಿತಿ ರಚನೆಯಾಯಿತು. ಸ್ಥಾಪಕ ಅಧ್ಯಕ್ಷರಾಗಿ ಶ್ರೀಮತಿ ಮುತ್ತಮ್ಮ ಕೋಟಿ, ಗೌರವಾಧ್ಯಕ್ಷರಾಗಿ ಎಂ.ಡಿ ನಾಣಯ್ಯ, ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷರಾಗಿ

ನಿವೃತ್ತ ಎಎಸ್‌ಐ ಕುಶಾಲಪ್ಪ ಕೆ ಕುಶಾಲನಗರ, ಉಪಾಧ್ಯಕ್ಷರಾಗಿ ಮಡಿಕೇರಿಯ ವೆಂಡಮ್ ಎಂಟರ್ಪ್ರೈಸಸ್ ನ ಉದ್ಯಮಿ ಲಯನ್ ದಾಮೋದರ್, ಕಾರ್ಯದರ್ಶಿಯಾಗಿ ಅರುಣ್ ಕುಲಾಲ್ ಕೂಡಿಗೆ, ಖಜಾಂಜಿಯಾಗಿ ಗಿರೀಶ್ ಮಡಿಕೆಬೀಡು ಆಯ್ಕೆಯಾದರು.


ಕಮಿಟಿ ಸದಸ್ಯರಾಗಿ ದಿನೇಶ್ ಐಗೂರು, ಅಶ್ವತ್ ಮಡಿಕೆ ಬೀಡು, ಸುರೇಶ್ ಮಡಿಕೇರಿ, ಅಪ್ಪಾಜಿ ಕುಶಾಲ್ ನಗರ, ನಾರಾಯಣ ಚೇರಂಬಾಣೆ, ಪುರುಷೋತ್ತಮ್ ಹೆಮ್ಮಾಡ್, ಅಚ್ಚು ಐಗೂರು, ಕೆ. ವೈ. ವಿಠಲ ಶ್ರೀಮತಿ ಕಾಂತಿಮಣಿ ಮಡಿಕೇರಿ, ಶ್ರೀಮತಿ ಸರಸ್ವತಿ ಬೆಟ್ಟಗೇರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾ ಘಟಕ, ಯುವ ಘಟಕ ಮತ್ತು ಮಹಿಳಾ ಘಟಕದ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜನೆ ಮಾಡುವ ತೀರ್ಮಾನ ಮಾಡಲಾಯಿತು. 


ಕಾರ್ಯಕ್ರಮದಲ್ಲಿ ಹೋದ್ದೂರು ಬಾಂಧವರು, ಚೇರಂಬಾಣೆ ಸಂಘದ ಸದಸ್ಯರು, ಬೆಟ್ಟಗೇರಿ ಬಾಂಧವರು, ಸೋಮವಾರಪೇಟೆ ಘಟಕದ ಸದಸ್ಯರು, ವಿರಾಜಪೇಟೆ ಘಟಕದ ಸದಸ್ಯರು, ಮಡಿಕೆ ಬಿಡು ಬಾಂಧವರು,  

ಕುಶಾಲ್ ನಗರ ಘಟಕದ ಸದಸ್ಯರು, ಮಡಿಕೇರಿ ಘಟಕದ ಸದಸ್ಯರು, ಶನಿವಾರ ಸಂತೆ ಬಾಂಧವರು, ಮಹಿಳಾ ಘಟಕದ ಸದಸ್ಯರು, ಯುವ ಘಟಕದ ಸದಸ್ಯರು ಹಾಜರಿದ್ದರು.


ಭರತ್ ಬೆಟಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರುತಿಕಾ ಅವರು ಪ್ರಾರ್ಥಿಸಿದರು. ಅಶ್ವತ್ ಮಡಿಕೆ ಬಿಡು ಅವರು ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top