ಅನಂತಾಡಿ: ಅ.8ರಂದು 'ಕೆಸರ್ದ ಕಂಡೋಡು ಕುಸಲ್ದ ಗೊಬ್ಬುಲು'

Upayuktha
0



ಬಂಟ್ವಾಳ: ನವ ಭಾರತ್ ಯುವಕ ಸಂಘ (ರಿ) ಅನಂತಾಡಿ ಇದರ ವತಿಯಿಂದ "ಕೆಸರ್ದ ಕಂಡೋಡು ಕುಸಲ್ದ ಗೊಬ್ಬುಲು" ಕ್ರೀಡಾಕೂಟವು ಅನಂತಾಡಿ ಗ್ರಾಮದ ಪಡಿಪ್ಪಿರೆ ಎಂಬಲ್ಲಿ ಅ. 8ರಂದು ಆದಿತ್ಯವಾರ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಪಡಿಪ್ಪಿರೆ ಇವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಉಳ್ಳಾಲ್ತಿ ದೇವಸ್ಥಾನ ಅನಂತಾಡಿ ಇದರ ಆಡಳಿತ ಮುಕ್ತೆಸ್ಥರಾದ ನರೇಂದ್ರ ರೈ ನೆಲ್ತೋಟು ಮಾಡಲಿದ್ದು, ಕ್ರೀಡಾ ಜ್ಯೋತಿಯ ಚಾಲನೆಯನ್ನು ಉಳ್ಳಾಲ್ತಿ ದೇವಸ್ಥಾನ ಅರ್ಚಕರಾದ ಗೋಪಾಲಕೃಷ್ಣ ಬನ್ನಿ೦ತಾಯ  ನೆರವೇರಿಸಲಿದ್ದು,  ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಧ್ವಜಾರೋಹಣ ಮಾಡಲಿರುವರು. ಕೆಸರುಗದ್ದೆ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ ಹಾಗೂ ದೈವ ಪರಿಚಾರಕರಾದ ವಿಟ್ಟಲ ಪೋಯ್ಯ ಮಾಡಲಿರುವರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತುಳುನಾಡ ಸಾಂಸ್ಕೃತಿಕ ಚಿಂತಕರಾದ ತಮ್ಮಣ್ಣ ಶೆಟ್ಟಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಸುರೇಶ್, ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆ, ಚಲನಚಿತ್ರ ನಟ ಚೇತನ್ ರೈ ಮಾಣಿ, ಶಿಕ್ಷಕ ವೆಂಕಟೇಶ್ ಬಂಟ್ರಿಂಜ, ವಕೀಲರಾದ ರಮೇಶ್ ಮಠದಮೂಲೆ, ದೈವ ಪರಿಚಾರಕರುಗಳಾದ ರುಕ್ಮಯ ಗೌಡ ನಡುಮನೆ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಇಡೆಮುಂಡೆವು, ಚಿದಾನಂದ ಗೌಡ ತಾಳಿಪಡುಪು, ರಾಮಣ್ಣ ಗೌಡ ಮಾಣಿ, ಬಾಲಪ್ಪ ಪೊಯ್ಯೇ, ಮೊದಲಾದವರು ಉಪಸ್ಥಿತರಿರುವರು.


ವಿಶೇಷ ಗೌರವಿತ ಆಹ್ವಾನಿತರಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಸಚಿವರಾದ ರಮನಾಥ ರೈ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ 2023 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ನೆರಳಕಟ್ಟೆ, ನೆರಳಕಟ್ಟೆ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಸಂಜೀವ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕಿ ಸುಂದರಿ ಅಶ್ವತಡಿ, ನಿವೃತ್ತ ಶಿಕ್ಷಕಿ ಅಮ್ಮತಾಯಿ, ಅನಂತಾಡಿ ಶಾಲೆಯ ವರ್ಗಾಯಿತ ಶಿಕ್ಷಕ ರಾಧಾಕೃಷ್ಣ ಮೂಲ್ಯ, ಯುವ ಕಂಬಲ ಓಟಗಾರ ರಾಜೇಶ್ ಅನಂತಾಡಿ, ಮಹಮ್ಮದ್ ಶರೀಫ್ ಮಜಲಹಿತ್ತಿಲು ಇವರುಗಳನ್ನು ಅಭಿನಂದಿಸಲಾಗುವುದು. ಹಾಗೂ ಸಂಘದ ಗೌರವ ಸಲಹೆಗಾರರಾಗಿದ್ದು ಕಳೆದ ತಿಂಗಳು ಅಗಲಿದ ದಿವಂಗತ ತೀರ್ಥ ಪ್ರಸಾದ್ ಕೊಂಗಲಾಯಿ ಯವರಿಗೆ ಸಂಘದ ವತಿಯಿಂದ ಪುಷ್ಪ ನಮನದ ಮೂಲಕ ಗೌರವಾರ್ಪಣೆ ನೆರವೇರಲಿರುವುದು ಎಂದು  ಕಾರ್ಯಕ್ರಮದ ಸಂಘಟಕರು ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top