ಕಲ್ಲಡ್ಕ: ಶ್ರೀ ಧ.ಗ್ರಾ. ಯೋಜನೆ ವತಿಯಿಂದ ಸ್ವಚ್ಛತಾ ಕಾರ್ಯ

Upayuktha
0


ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಅನಾರೋಗ್ಯ ಪೀಡಿತರಾಗಿರುವ ಗ್ರಾಮಾಭಿವೃದ್ಧಿ ಯೋಜನೆಯ ಗೋಳ್ತಮಜಲು ಎ ಒಕ್ಕೂಟದ ಮಾಜಿ ಅಧ್ಯಕ್ಷರಾದ ಮುರಬೈಲು ಈಶ್ವರ ನಾಯ್ಕರ ಮನೆಯ ಸುತ್ತಮುತ್ತ ಬೆಳೆದಿರುವ ಗಿಡ ಗಂಟಿಗಳನ್ನು ಕಡಿದು ಸ್ವಚ್ಚತೆ ಮಾಡಲಾಯಿತು.


ಸ್ವಚ್ಛತಾ ಕಾರ್ಯದಲ್ಲಿ ವಿಪತ್ತು ತಂಡದ ಅಧ್ಯಕ್ಷರಾದ ಮಾಧವ ಸಾಲ್ಯಾನ್, ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ತುಳಸಿ ಕೊಳಕೀರು, ಸೌಮ್ಯ ಬೊಂಡಾಲ, ಗಣೇಶ್, ವೆಂಕಪ್ಪ, ರವಿಚಂದ್ರ, ರಮೇಶ್, ಸಂತೋಷ್ ಬೊಲ್ಪೋಡಿ, ಧನಂಜಯ, ಮೌರೀಶ್, ಯೋಜನೆಯ ಗೋಳ್ತಮಜಲು ಒಕ್ಕೂಟದ ಅಧ್ಯಕ್ಷ ಮಮತಾ, ಸೇವಾ ಪ್ರತಿನಿಧಿ ಜಯಶ್ರೀ ಮೊದಲಾದವರು ಭಾಗವಹಿಸಿದರು.


إرسال تعليق

0 تعليقات
إرسال تعليق (0)
To Top