ಇಂಟರ್‌ನ್ಯಾಷನಲ್‌ ಬಂಟ್ಸ್‌ ವೆಲ್‌ಫೇರ್‌ ಟ್ರಸ್ಟ್‌: ಅ. 15ರಿಂದ 'ನವರಾತ್ರಿ ದುರ್ಗಾ ಪೂಜೆ'

Upayuktha
0

 



ಮಂಗಳೂರು: ಇಂಟರ್‌ ನ್ಯಾಷನಲ್‌ ಬಂಟ್ಸ್‌ ವೆಲ್‌ಫೇರ್‌ ಟ್ರಸ್ಟ್‌ ನ ಮಹಿಳಾ ವಿಭಾಗದಿಂದ ಅಕ್ಟೋಬರ್‌ 15, ಆದಿತ್ಯವಾರ, ಸಂಜೆ 4.00 ರಿಂದ ರಾತ್ರಿ 8.00ರ ತನಕ ನವರಾತ್ರಿ ದುರ್ಗಾ ಪೂಜೆ ಬಲ್ಮಠ ರಸ್ತೆಯಲ್ಲಿರುವ ಪೆವಿಲಿಯನ್‌ ಸಭಾಂಗಣದಲ್ಲಿ ಟ್ರಸ್ಟ್‌ನ ಸ್ಥಾಪಾಕಾಧ್ಯಕ್ಷ ಡಾ. ಅತ್ತೂರು ಸದಾನಂದ ಶೆಟ್ಟಿ, ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರ ಪೂವಭಾವಿ ಸಭೆಯು ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. 


ಧಾರ್ಮಿಕ ಕಾರ್ಯಕ್ರಮಗಳು: ವಿವಿಧ ವಲಯ ಬಂಟರ ಸಂಘದ ಮಹಿಳಾ ವಿಭಾಗದಿಂದ ಭಜನೆ, ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ, ಮಂಗಳಪೂಜೆ, ಪ್ರಸಾದ ವಿತರಣೆ, ದಾಂಡಿಯಾ ಹಾಗೂ ಅನ್ನ ಪ್ರಸಾದವಿದೆ. ಪೂರ್ವಭಾವಿ ಸಭೆಯಲ್ಲಿ ದೇವಿಚರಣ್‌ ಶೆಟ್ಟಿ ಕಾರ್ಯಾಧ್ಯಕ್ಷರು, ಸಂಘಟನಾ ಕಾಯ೯ದಶಿ೯ ರಾಜ್‌ಗೋಪಾಲ್‌ ರೈ, ಯುವ ವಿಭಾಗದ ಅಧ್ಯಕ್ಷ ನಿತೇಶ್‌ ಶೆಟ್ಟಿ ಎಕ್ಕಾರು, ಸದಾಶಯ ಪ್ರಧಾನ ಸಂಪಾದಕ ಭಾಸ್ಕರ್‌ ರೈ ಕುಕ್ಕುವಳ್ಳಿ, ಮತ್ತಿತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top