ಹುನಗುಂದ: ಸ್ವಚ್ಛತೆ, ಅಭಿವೃದ್ಧಿ, ಸರ್ಕಾರದ ಹಣ ಮತ್ತು ಯೋಜನೆ ಸದ್ಭಳಕೆ ಮಾಡುವಲ್ಲಿ, ಜನತೆಗೆ ಸ್ಪಂದನೆ ನೀಡುವಲ್ಲಿ ಯಶಸ್ವಿಯಾದ ತಾಲೂಕಿನ ಗಂಜೀಹಾಳ ಗ್ರಾಮ ಪಂಚಾಯತ್‌ಗೆ "ಗಾಂಧಿ ಗ್ರಾಮ" ಮನ್ನಣೆ ದೊರೆತಿದೆ.
ಗಂಜೀಹಾಳ ಮತ್ತು ನಂದನೂರ ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡುತ್ತಿದ್ದು, ಒಟ್ಟು 10 ಜನ ಸದಸ್ಯರನ್ನು ಒಳಗೊಂಡಿದೆ. ನರೇಗಾ ಯೋಜನೆಯಡಿ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಗ್ರಾಮ ಪಂಚಾಯತ್ ಕಛೇರಿ ಮೇಲೆ ಸೋಲಾರ್ ವಿದ್ಯುತ್ ಮತ್ತು ಗ್ರಾಮದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ರೈತರಿಗೆ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಶೌಚಾಲಯ ನಿರ್ಮಾಣ, ಇಂಗುವ ಬಚ್ಚಲು ನಿರ್ಮಾಣ ಮಾಡಿಕೊಡಲಾಗಿದೆ. 15 ನೇ ಹಣಕಾಸು ಯೋಜನೆಯಡಿ ಅನುದಾನ ಸರಿಯಾದ ಬಳಕೆ, ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳ ಕಲ್ಯಾಣ ಕಾರ್ಯಕ್ರಮ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ದಿನಗೂಲಿ ಮತ್ತು ಜಾಬ್ ಕಾರ್ಡ್ ವಿತರಣೆ, ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಸಿದ್ದಪಡಿಸಿದ ಕೀರ್ತಿ ಸಲ್ಲುತ್ತದೆ.
ಪಂಚಾಯತ್ ವ್ಯಾಪ್ತಿಯ ಈ ಎರಡು ಗ್ರಾಮಗಳಲ್ಲಿ ಸ್ವಚ್ಚತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಎಲ್ಲಾ ದಿಶೆಯಲ್ಲಿ ನಮ್ಮ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪ್ರಶಸ್ತಿಗೆ ಭಾಜನವಾಗಿದ್ದು ಖುಷಿ ತಂದಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರು ತಿಳಿಸಿದರು.
ಈ ಒಂದು ಪ್ರಶಸ್ತಿಯ ಜೊತೆಗೆ ಸರ್ಕಾರ ನೀಡುವ 5 ಲಕ್ಷ ರೂಪಾಯಿ ಬಹುಮಾನವನ್ನು ಗ್ರಾಮದ ಅಭಿವೃದ್ಧಿಗೆ ಮೀಸಲು ಇಡಲಾಗುವುದು ಎಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಕುಟುಂಬಗಳಿಗೆ ಶೌಚಾಲಯ,ಶಾಲೆ ಮತ್ತು ಅಂಗನವಾಡಿಗಳಿಗೆ ಶೌಚಾಲಯ, ಗ್ರಾಮಗಳಲ್ಲಿನ ಸ್ವಚ್ಚತೆ ಮತ್ತು ಸರ್ಕಾರದ ಅನುದಾನ ಸರಿಯಾದ ಸದ್ಭಳಕೆ, ನರೇಗಾ ಪರಿಣಾಮಕಾರಿ ಅನುಷ್ಠಾನಕ್ಕೆ, ಸಮರ್ಪಕವಾಗಿ ತೆರಿಗೆ ಸಂಗ್ರಹ, ಇತ್ಯಾದಿ ಗಳನ್ನು ಆಧರಿಸಿ ಈ ಪುರಸ್ಕಾರ ನೀಡಲಾಗುತ್ತಿದೆ.
"ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದ ಹಣ ಸದ್ಭಳಕೆ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ, ತೆರಿಗೆ ಸಂಗ್ರಹ ಮುಂತಾದವುಗಳಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದೇವೆ. ಇದಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಸದಸ್ಯರು, ಗ್ರಾಮದ ಜನರು, ಹಿರಿಯರು ಹಾಗೂ ಯುವಕರ ಸಹಕಾರದಿಂದ ಸಾಧ್ಯವಾಗಿದೆ ಎಂದು ಪಿಡಿಓ ಶೇಖರಪ್ಪ ಚಂದ್ರಗಿರಿ ತಿಳಿಸಿದ್ದಾರೆ.
"ಪ್ರಶಸ್ತಿ ಪಡೆಯಲು ಎಲ್ಲಾ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಸಹಕಾರವೇ ಕಾರಣ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದೆ. ಇದರಿಂದ ಮುಂದೆ ಇನ್ನಷ್ಟು ಕೆಲಸ ಮಾಡುವ ಉತ್ಸಾಹ ನೀಡಿದೆ ಎಂದು ಅಧ್ಯಕ್ಷರು ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ