ಹುಬ್ಬಳ್ಳಿ: ಜೀವನದ 60 ವರ್ಷದ ಜನ್ಮವರ್ಧಂತಿಯಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಗುರುವಾರ ಸಂಜೆ ಹುಬ್ಬಳ್ಳಿಯಲ್ಲಿ ಅನೇಕ ಸಾಧು ಸಂತರ ಉಪಸ್ಥಿತಿಯಲ್ಲಿ ಗುರುವಂದನೋತ್ಸವ ವೈಭವದಿಂದ ನೆರವೇರಿತು .
ಹುಬ್ಬಳ್ಳಿಯ ಭಕ್ತರು ಅಭಿಮಾನಿಗಳು ಸವಾಯಿ ಗಂಧರ್ವ ಸಭಾಂಗಣದಲ್ಲಿ ಸಂಯೋಜಿಸಿದ್ದ ಈ ಸಮಾರಂಭದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ , ತರಳಬಾಳು ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ , ತುಮಕೂರು ಶ್ರೀ ಹಿರೇಮಠದ ಡಾ ಶಿವಾನಂದ ಶಿವಾಚಾರ್ಯ ಸ್ವಾಮೀಜಿ , ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ , ವಿಜಯಪುರ ಶ್ರೀ ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ , ಹುಬ್ಬಳ್ಳಿ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಶ್ರೀ ರಘುವೀರಾನಂದಜೀ , ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ , ಕುಂದಗೋಳದ ಶ್ರೀ ಬಸವಣ್ಣಜ್ಜನವರ ಸ್ವಾಮೀಜಿ ,ರಬಕವಿ ಸಂಶಿಯ ಶ್ರೀ ಗುರುಸಿದ್ಧೇಶ್ವರ ಮಹಾ ಸ್ವಾಮೀಜಿಯವರು , ಪಾವಗಡ ಶ್ರೀ ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ಜಪಾನಂದ ಜೀ , ಹುಬ್ಬಳ್ಳಿ ಇಸ್ಕಾನ್ ಶ್ರೀ ಸ್ವಾಮಿ ರಾಜೀವಲೋಚನ ದಾಸ್ ಮೊದಲಾದವರು ಸಾನ್ನಿಧ್ಯವಹಿಸಿ ಶ್ರೀಗಳಿಗೆ ಭಕ್ತರ ಪರವಾಗಿ ತುಲಾಭಾರ ಸಹಿತ ಗುರುವಂದನೆ ಸಲ್ಲಿಸಿ ಸಂದೇಶ ನೀಡಿದರು . ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ , ಮಹೇಶ ಟೆಂಗಿನ ಕಾಯಿ ಹುಬ್ಬಳ್ಳಿ ಧಾರವಾಡ ಮಹಾಪೌರ ವೀಣಾ ಭಾರದ್ವಾಜ , ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಅಜಿತ್ ಪ್ರಸಾದ್ , ಉದ್ಯಮಿ ಶ್ರೀಕಾಂತ ಕೆಮ್ತೂರು , ಶ್ರೀಪಾದ ಸಿಂಗನಮಲ್ಲಿ , ವಿದ್ವಾಂಸರಾದ ಡಾ ಆನಂದತೀರ್ಥ ನಾಗಸಂಪಿಗೆ , ಡಾ ಸತ್ಯನಾರಾಯಣಾಚಾರ್ಯ , ಸತ್ಯಮೂರ್ತಿ ಆಚಾರ್ಯ, ಸಮೀರಾಚಾರ್ಯ ಕಂಠಪಲ್ಲಿ ಮೊದಲಾದವರು ಉಪಸ್ಥಿತರಿದ್ದರು . ವಿಶ್ವಹಿಂದು ಪರಿಷತ್ತಿನ ಪ್ರಮುಖರು , ಅಖಿಲ ಭಾರತ ಮಾಧ್ವ ಮಹಾಮಂಡಲ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಕೃಷ್ಣರಾಜ ಕೆಮ್ತೂರು , ಗೌರವ ಕಾರ್ಯದರ್ಶಿ ಅನಂತರಾಜ , ಖಜಾಂಚಿ ಗುರುರಾಜ ಬಾಗಲಕೋಟೆ , ಪ್ರಮುಖರಾದ ಶ್ರೀಕಾಂತ ಕೆಮ್ತೂರು, ಸತ್ಯಮೂರ್ತಿ ಆಚಾರ್ಯ , ಎ ಪಿ ಐತಾಳ್ ಮೊದಲಾದವರು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು .
ಸಂತ ಸಮಾವೇಶ :
ಶ್ರೀಗಳು ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಮಂಡಳಿಯ ಸದಸ್ಯರೂ ಮತ್ತು ಅಯೋಧ್ಯೆ ರಾಮಮಂದಿರದ ಟ್ರಸ್ಟಿಗಳೂ ಆಗಿರುವ ಹಿನ್ನೆಲೆಯಲ್ಲಿ
ಗುರುವಂದನೋತ್ಸವದ ಮೊದಲು ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು . ಎಲ್ಲ ಸಾಧು ಸಂತರು ಆಂತರಿಕ ಸಭೆ ಸೇರಿ ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳು ಪ್ರಚಲಿತ ವಿದ್ಯಮಾನಗಳ ಕುರಿತು ಗಹನವಾದ ಚರ್ಚೆ ನಡೆಸಿದರು .
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


