ಹುಬ್ಬಳ್ಳಿ: ತಮ್ಮ ಷಷ್ಠ್ಯಬ್ದಿಯ ಅಂಗವಾಗಿ ಹುಬ್ಬಳ್ಳಿಯಲ್ಲಿ ಭಕ್ತರು ಅಭಿಮಾನಿಗಳು ಹಮ್ಮಿಕೊಂಡಿರುವ ಎರಡು ದಿನಗಳ ಗುರುವಂದನೋತ್ಸವದ ಸಂದರ್ಭದಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನಗರದ ಹೊರವಲಯದ ಹೆಗ್ಗೇರಿಯ ದಲಿತ ಕಾಲೋನಿಯಲ್ಲಿ ಸಾಮರಸ್ಯದ ಹೆಜ್ಜೆ ಹಾಕಿದರು .
ಹುಬ್ಬಳ್ಳಿ ವಿಶ್ವಹಿಂದು ಪರಿಷತ್ತಿನ ಸಂಯೋಜನೆಯಲ್ಲಿ ಹಳೇ ಹುಬ್ಬಳ್ಳಿಲಯ ಹೆಗ್ಗೇರಿಯ ದಲಿತರ ಬಡಾವಣೆಗೆ ಗುರುವಾರ ಬೆಳಿಗ್ಗೆ 6.30 ಕ್ಕೆ ಆಗಮಿಸಿದಾಗ ಸ್ಥಳೀಯ ನಿವಾಸಿಗಳು ಸಂಭ್ರಮದಿಂದ ಹೂಮಳೆಗೈದು ಪೂರ್ಣಕುಂಭ ಕಲಶ ಸಹಿತ ವೈಭವದ ಸ್ವಾಗತ ನೀಡಿದರು . ಕೆಲವು ಮನೆಗಳಿಗೆ ತೆರಳಿ ಮನೆಯವರೊಂದಿಗೆ ಉಭಯ ಕುಶಲೋಪರಿ ನಡೆಸಿ ರಾಮಮಂತ್ರೋಪದೇಶ ನೀಡಿ ನಿತ್ಯ ಮನೆ ಮಂದಿ ಸೇರಿಕೊಂಡು ರಾಮಮಂತ್ರ ಜಪಿಸೋದ್ರಿಂದ ಜೀವನಸಲ್ಲಿ ಸುಖ ಸಮೃದ್ಧಿಗಳು ಮತ್ತು ಸಮಾಜದಲ್ಲೂ ಶಾಂತಿ ಸಾಮರಸ್ಯ ಸುಭಿಕ್ಷೆಗಳು ನೆಲೆಗೊಳ್ಳುತ್ತವೆ ಎಂದು ಸಂದೇಶ ನೀಡಿ ಮನೆ ಮಂದಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು .ಬಡಾವಣೆಯ ಭುವನೇಶ್ವರಿ ಮಂದಿರ ಮತ್ತು ಸಮುದಾಯ ಭವನಕ್ಕೂ ಭೇಟಿ ನೀಡಿದರು .ವಿ ಹಿಂ ಪ ಹುಬ್ಬಳ್ಳಿ ಮತ್ತು ಬಡಾವಣೆಯ ಪ್ರಮುಖರು ಶ್ರೀಗಳಿಗೆ ಸಾಥ್ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


