ಹಾಸನ: ಮಹಾತ್ಮಗಾಂಧಿ ಜಗತ್ತಿನ ಅತ್ಯದ್ಭುತ ಶಕ್ತಿ. ಆ ಶಕ್ತಿ ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ಬೆಳೆದು ಸತ್ಯ ಮತ್ತು ಅಹಿಂಸೆ ಎಂಬ ಎರಡು ಮಹತ್ವಪೂರ್ಣ ತತ್ವಾದರ್ಶಗಳ ಮೂಲಕ ಉಪವಾಸ ವಿಧಾನವನ್ನು ಅನುಸರಿಸಿ, ಬ್ರಿಟೀಷರ ಸಂಕೋಲೆಯಿಂದ ಭಾರತ ಮಾತೆಯನ್ನು ಮುಕ್ತಗೊಳಿಸಲು ಸರ್ವ ಭಾರತೀಯರೊಂದಿಗೆ ಮುಂಚೂಣಿ ನಾಯಕತ್ವವನ್ನು ವಹಿಸಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಿದವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರಧಾನ) ಪ್ರೌಢಶಾಲೆಯ ಸಹ ಶಶಿಕ್ಷಕರು ಕೆ. ಎನ್.ಚಿದಾನಂದ ಹೇಳಿದರು.
ಹಾಸನ ಹೇಮಾವತಿ ನಗರದ ದ್ಯಾವಪ್ಪಗೌಡರ ಪ್ರಾಯೋಜಕತ್ವದಲ್ಲಿ ನಡೆದ 310ನೇ ತಿಂಗಳ ಮನೆ ಮನೆ ಕವಿಗೋಷ್ಠಿ ಕಾಯ೯ಕ್ರಮದಲ್ಲಿ ಗಾಂಧೀಜಿ ಬದುಕು ಮತ್ತು ಸ್ವಾತಂತ್ರ್ಯ ಹೋರಾಟ ವಿಷಯದಲ್ಲಿ ಉಪನ್ಯಾಸ ನೀಡಿ ಗಾಂಧಿ ಅವರ ಬಾಲ್ಯ ವಿದ್ಯಾಭ್ಯಾಸ ತಾಯಿಯಿಂದ ಪ್ರೇರಣೆಗೊಂಡಿದ್ದು, ಸತ್ಯ ಹೇಳುವುದು ಉಪವಾಸ ಮಾಡುವುದು ಕಲಿತದ್ದು, ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ವ್ಯವಹಾರಗಳ ಪ್ರತಿನಿಧಿಯಾಗಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಘಟನೆಗಳನ್ನು ಸವಿವರವಾಗಿ ತಿಳಿಸಿದರು.
ಭಾರತಕ್ಕೆ ಮರಳಿ ಗಾಂಧೀಜಿ ಮುಂದಾಳತ್ವದಲ್ಲಿ ನಡೆದ ಚಂಪಾರಣ್ಯ ಮತ್ತು ಖೇಡಾ ಸತ್ಯಾಗ್ರಹಗಳು ಜಲಿಯನ್ ವಾಲಾಬಾಗ್ ಘಟನೆ ಖಿಲಾಫತ್ ಚಳವಳಿ ಅಸಹಕಾರ ಚಳುವಳಿ, 1924 ರ ಬೆಳಗಾಂ ಕಾಂಗ್ರೆಸ್ ಅಧಿವೇಶನ ಕಾನೂನು ಭಂಗ ಚಳುವಳಿ ದಂಡಿ ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಚಳುವಳಿ, 21 ದಿನಗಳ ಉಪವಾಸ ಸತ್ಯಾಗ್ರಹ, ಕ್ವಿಟ್ ಇಂಡಿಯ ಚಳವಳಿ ಈ ಎಲ್ಲಾ ಘಟನೆಗಳನ್ನು ಸವಿಸ್ತಾರವಾಗಿ ತಿಳಿಸಿದರು. ಉಪನ್ಯಾಸಕರು ಡಾ. ಬರಾಳು ಶಿವರಾಂ ರವರು ಗಾಂಧೀಜಿ ಹಾಸನ ಜಿಲ್ಲೆಗೆ ಭೇಟಿ ಕುರಿತಾಗಿ ಮಾತನಾಡಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ ತಾವು ಇತ್ತೀಚಿಗೆ ಗುಜರಾತಿನ ಸಬರಮತಿ ಆಶ್ರಮಕ್ಕೆ ಗಾಂಧಿ ನಿವಾಸಕ್ಕೆ ಭೇಟಿ ನೀಡಿದನ್ನು ಸ್ಮರಿಸುತ್ತಾ ಮಹಾತ್ಮಾ ಗಾಂಧೀಜಿಯವರ ನೆಲದಲ್ಲಿ ನಾವು ಓಡಾಡಿದ್ದು ಬದುಕಿನ ಸಾರ್ಥಕತೆಗೆ ಒಂದು ಸೌಭಾಗ್ಯ ವೆಂದರು. ಕೆ. ಎನ್. ಚಿದಾನಂದ ಮತ್ತು ದ್ಯಾವಪ್ಪಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಜೆ. ಆರ್. ರವಿಕುಮಾರ್,ಜನಿವಾರ, ಎಸ್. ಲಲಿತಾ, ಎನ್. ಎಲ್ ಚನ್ನೇಗೌಡ, ಸುಂದರೇಶ್ ಡಿ. ಉಡುವೇರೆ, ನಾಗೇಂದ್ರ ಪ್ರಸಾದ್ ಕೆ.ವಿ. ಉಮೇಶ್
ಹೊಸಹಳ್ಳಿ, ಸಾವಿತ್ರಿ ಬಿ. ಗೌಡ, ಕಮಲಮ್ಮ, ಕಾಮಾಕ್ಷಿ ಕೃಷ್ಣಮೂರ್ತಿ, ಗೊರೂರು ಅನಂತರಾಜು ಸ್ವರಚಿತ ವಿಶೇಷವಾಗಿ ಕೆಲವರು ಗಾಂಧೀ ಕುರಿತಾಗಿ ಕವಿತೆ ವಾಚಿಸಿದರು. ಶ್ರೀಮತಿ ದಶಲಕ್ಷ್ಮಿ ಜಿ. ಆರ್. ಪದ್ಮಾವತಿ ವೆಂಕಟೇಶ್ ದೇಶಭಕ್ತಿ ಹಾಡಿದರು. ಸೌಮ್ಯ ಪ್ರಸಾದ್,ಯಾಕೂಬ್, ಸಮುದ್ರವಳ್ಳಿ ವಾಸು, ಖುಷಿ ವಿ. ಇದ್ದರು. ನವೆಂಬರ್ 5ಕ್ಕೆ 311ನೇ ತಿಂಗಳ ಮನೆ ಮನೆ ಕವಿಗೋಷ್ಠಿ ಕಾಯ೯ಕ್ರಮ ಹಾಸನ ಹೇಮಾವತಿ ನಗರ ಕವಿ ಎನ್. ಎಲ್. ಚನ್ನೇಗೌಡರ ಪ್ರಾಯೋಜಕತ್ವದಲ್ಲಿ ಅವರ ನಿವಾಸದಲ್ಲಿ ಏಪ೯ಡಿಸಲಾಗಿದ್ದು ಇಲ್ಲಿ ಚನ್ನೇಗೌಡರ ಇತ್ತೀಚಿಗಿನ ಮೂರು ಪುಸ್ತಕಗಳು ಲೋಕಾಪ೯ಣೆಗೊಳ್ಳಲ್ಲಿವೆ ಎಂದು ಸಂಚಾಲಕರು ಗೊರೂರು ಅನಂತರಾಜು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ