ಮಂಗಳೂರು: ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ಗೃಹರಕ್ಷಕರ ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ವೆಚ್ಚ ಸಹಾಯ ಧನವನ್ನು ನೀಡಲಾಗುತ್ತಿದೆ.
ಬೆಳ್ತಂಗಡಿ ಘಟಕದ ಗೃಹರಕ್ಷಕಿ ಶೈಲಜಾ ಇವರ ಮಕ್ಕಳಾದ ಸಪ್ನಾ ವಿ.ಎಸ್., ಎಂ.ಎಸ್.ಸಿ. ಎರಡನೇ ವರ್ಷ ಮತ್ತು ಎರಡನೇ ಮಗಳಾದ ಕುಮಾರಿ ಸಂಜನಾ ವಿ.ಎಸ್., ಬಿಸಿಎ ಎರಡನೇ ವರ್ಷದ ವ್ಯಾಸಂಗಕ್ಕಾಗಿ ರೂ. 14,685/- ಕೇಂದ್ರ ಕಛೇರಿಯಿಂದ ಸಹಾಯ ಧನ ಮಂಜೂರಾಗಿದೆ.
ಈ ನಿಟ್ಟಿನಲ್ಲಿ ಅ.18 ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಶೈಲಜಾ ಇವರಿಗೆ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಪ್ರಥಮ ದರ್ಜಿ ಸಹಾಯಕಿ ಶ್ಯಾಮಲಾ ಎ., ಹಾಗೂ ಗೃಹರಕ್ಷಕರಾದ ದಿವಾಕರ, ಸುಲೋಚನಾ, ಖತೀಜಮ್ಮ, ಸಂದೇಶ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ