ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಡಾ ಭರತ್ ಶೆಟ್ಟಿ ಗುದ್ದಲಿಪೂಜೆ

Upayuktha
0


ಮಂಗಳೂರು: ಲೋಕೋಪಯೋಗಿ ಇಲಾಖೆಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ 23 ದೇರೆಬೈಲ್ ಗ್ರಾಮದ ಮಂದಾರ ಬೈಲುವಿನಿಂದ ಚಾವಡಿ ಕುಡ್ಲ ರೆಸ್ಟೋರೆಂಟ್ ಬಳಿ ಹಾಗೂ ನಾಗಕನ್ನಿಕ ದೇವಸ್ಥಾನದ ಬಳಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ರಂಜನಿ ಎಲ್ ಕೋಟ್ಯಾನ್ ಹಾಗೂ ಮಾಜಿ ಮೇಯರ್ ಶಂಕರ್ ಭಟ್, ಮಾಜಿ ಕಾರ್ಪೊರೇಟರ್ ರಾಜೇಶ್ ಕೊಂಚಾಡಿ, ಜಿಲ್ಲೆಯ ಪ್ರಮುಖರಾದ ಭಾಸ್ಕರ್ ಸಾಲಿಯನ್, ರಾಮಣ್ಣ ಮೈಪಾಡಿ, ಕಾವೂರು ಮಹಾಶಕ್ತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕಾವೂರು, ಯುವ ಮೋರ್ಚಾ ಕಾರ್ಯದರ್ಶಿ ಜಿತೇಶ್ ದೇವಾಡಿಗ ಹಾಗೂ ಬೂತ್ ಅಧ್ಯಕ್ಷರು ದಿನೇಶ್ ಶೆಣೈ, ನಾರಾಯಣ ಕಂಜರ್ಪಣೆ, ದೇವೇಂದ್ರ, ಚರಣ್, ಹಾಗೂ ಬೂತ್ ಪ್ರಧಾನ ಕಾರ್ಯದರ್ಶಿಗಳು ಅರುಣ್, ಉಮಾ ಕೋಟ್ಯಾನ್ ಹಾಗೂ ಕಿರಣ್ ಕೋಟ್ಯಾನ್, ಚರಿತ್ ಪೂಜಾರಿ ಮುಲ್ಲಕಾಡು, ಗುರುಪ್ರಸಾದ್, ವಿಮಲಾಕ್ಷಿ, ಬೇಬಿ, ಯೋಶೋದಾ, ಸಾವಿತ್ರಿ, ಪ್ರೇಮಾ, ಸವಿತ, ಸಹನ ರಾವ್, ಧನುಷ್ ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top