ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದ ರಜತ ಮಹೋತ್ಸವದ ನಾಲ್ಕನೇ ದಿನವಾದ ಇಂದು (ಅ.01) ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಉಷಾ ಹೆಬ್ಬಾರ್ ಅವರು ಭಜನಾ ತರಬೇತಿಯನ್ನು ನಡೆಸಿಕೊಟ್ಟರು. ಮತ್ತು ಶ್ರೀಮತಿ ಸೌಮ್ಯ ಸುಭಾಷ್ ಅವರು ಭಜನೆ, ಶೋಭಾನೆ, ಸಂಪ್ರದಾಯ ಹಾಡುಗಳನ್ನು ಕಮ್ಮಟದಲ್ಲಿ ಹೇಳಿಕೊಟ್ಟರು.
ಮಧ್ಯಾಹ್ನ 12 ಘಂಟೆಗೆ ಆರೋಗ್ಯಕರ ಅಭ್ಯಾಸಗಳು, ಎಂಬ ವಿಚಾರದ ಕುರಿತು ವಿವೇಕ್‍ವಿನ್ಸೆಂಟ್ ಪಾಯ್ಸ್‌ರವರು ಉಪನ್ಯಾಸವನ್ನು ನಡೆಸಿಕೊಟ್ಟರು.
ಶ್ರೀ ಕ್ಷೇತ್ರದ ವಿವಿಧ ಭಾಗಗಳಿಗೆ ನಗರ ಸಂಕೀರ್ತನೆಗೆ ತೆರಳಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಭಜನಾ ಸಂಚಲನವನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ನಾಗರಿಕರ ಸಹಕಾರ ಮತ್ತು ಸ್ಪಂದನೆ ಅತ್ಯದ್ಭುತವಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ದಾಸವಾಣಿ’ ಕಾರ್ಯಕ್ರಮವನ್ನು ರಾಜೇಶ್ ಪಡಿಯಾರ್ ಅವರು ನಡೆಸಿಕೊಟ್ಟರು.
ಪ್ರತೀ ದಿನ ಪುರುಷ ಶಿಬಿರಾರ್ಥಿಗಳಿಗೆ ರಾಜ್ಯಮಟ್ಟದ ನೃತ್ಯ ಭಜನಾ ತರಬೇತುದಾರರಾದ ರಮೇಶ್ ಕಲ್ಮಾಡಿ ಹಾಗೂ ಶಂಕರ್, ಅವರಿಂದ ಕುಣಿತ ಭಜನಾ ತರಬೇತಿಯನ್ನು, ಮಹಿಳಾ ಶಿಬಿರಾರ್ಥಿಗಳಿಗೆ ವಿದುಷಿ ಚೈತ್ರಾ ಧರ್ಮಸ್ಥಳ ಅವರಿಂದ ನೃತ್ಯ ಭಜನಾ ತರಬೇತಿಯನ್ನು ನಡೆಸಲಾಗುತ್ತಿದೆ.
ಭಜನಾ ಕಮ್ಮಟದಲ್ಲಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ, ಡಾ| ಹೇಮಾವತಿ ವೀ. ಹೆಗ್ಗಡೆಯವರು, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಸುರೇಶ್ ಮೊೈಲಿ, ಪರಿಷತ್‍ನ ಅಧ್ಯಕ್ಷರಾದ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ. ಕಮ್ಮಟದ ಸದಸ್ಯರಾದ ರತ್ನವರ್ಮ ಜೈನ್, ಶ್ರೀನಿವಾಸ್‍ರಾವ್, ಕೋಶಾಧಿಕಾರಿ ಧರ್ಣಪ್ಪ, ಭವಾನಿ, ಸಂಗೀತ, ಶ್ರೀನಿವಾಸ್, ಜನಾರ್ಧನ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ