ಉಜಿರೆ: ಧರ್ಮಸ್ಥಳದಲ್ಲಿ ಒಂದು ವಾರ ಕಾಲ ನಡೆಯುತ್ತಿರುವ 25ನೆ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಬುಧವಾರ ಪೂರ್ವಾಹ್ನ ಹನ್ನೊಂದು ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮತ್ತು ಖ್ಯಾತ ಗಾಯಕ ಇಳೆಯರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ನೃತ್ಯ ಭಜನೆ: ಬುಧವಾರ ಬೆಳಿಗ್ಗೆ 9 ಗಂಟೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 300 ಭಜನಾ ತಂಡಗಳ 5,000 ಭಜನಾ ಪಟುಗಳಿಂದ ಶೋಭಾಯಾತ್ರೆ ಮತ್ತು ನೃತ್ಯ ಭಜನೆ ನಡೆಯಲಿದೆ.
ಧರ್ಮಸ್ಥಳ ಭಜನಾ ಕಮ್ಮಟ-5ನೇ ದಿನ: ಎಂ.ಎಸ್. ಗಿರಿಧರ್ ಅವರಿಂದ ಭಜನಾ ತರಬೇತಿ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದ ರಜತ ಮಹೋತ್ಸವದ ಐದನೇ ದಿನವಾದ ಇಂದು (ಅ.2) ಸಂಪನ್ಮೂಲ ವ್ಯಕ್ತಿಗಳಾಗಿ ಎಂ. ಎಸ್ ಗಿರಿಧರ್ ಅವರು ಭಜನಾ ತರಬೇತಿಯನ್ನು ನಡೆಸಿಕೊಟ್ಟರು. ಮತ್ತು ಶ್ರೀಮತಿ ಸೌಮ್ಯ ಸುಭಾಷ್ ಅವರು ಭಜನೆ, ಶೋಭಾನೆ, ಸಂಪ್ರದಾಯ ಹಾಡುಗಳನ್ನು ಕಮ್ಮಟದಲ್ಲಿ ಹೇಳಿಕೊಟ್ಟರು.
ಮಧ್ಯಾಹ್ನ 12 ಘಂಟೆಗೆ "ಭಜನೆ ಮತ್ತು ಬದುಕು' ಎ೦ಬ ಏಿಚಾರದ ಕುರಿತು ಎನ್ ಆರ್ ದಾಮೋಧರ ಶರ್ಮಾ ಬಾರ್ಕೂರು ಅವರು ಧಾರ್ಮಿಕ ಉಪನ್ಯಾಸವನ್ನು ನಡೆಸಿಕೊಟ್ಟರು. ಶ್ರೀ ಕ್ಷೇತ್ರದ ವಿವಿಧ ಭಾಗಗಳಿಗೆ ನಗರ ಸಂಕೀರ್ತನೆಗೆ ತೆರಳಿ ಶ್ರೀ ಕ್ಷೇತ್ರದಲ್ಲಿ ಶೇಷ ಭಜನಾ ಸಂಚಲನವನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲ ನಾಗರಿಕರ ಸಹಕಾರ ಮತ್ತು ಸ್ಪಂದನೆ ಅತ್ಯದ್ಭುತವಾಗಿತ್ತು
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ಮಂಜುನಾದ” ಸಂಗೀತ ಕಛೇರಿ ಕಾರ್ಯಕ್ರಮವನ್ನು ಪಿ. ನಿತ್ಯಾನ೦ದರಾವ್ ಮತ್ತು ತಂಡದವರು ನಡೆಸಿಕೊಟ್ಟರು. ಪ್ರತೀ ದಿನ ಪುರುಷ ಶಿಜರಾರ್ಥಿಗಳಗೆ ರಾಜ್ಯಮಟ್ಟದ ನೃತ್ಯ ಭಜನಾ ತರಬೇತುದಾರರಾದ ರಮೇಶ್ ಕಲ್ಮಾಡಿ ಹಾಗೂ ಶ೦ಕರ್, ಅವರಿಂದ ಕುಣಿತ ಭಜನಾ ತರಬೇತಿಯನ್ನು, ಮಹಿಳಾ ಶಿಜರಾರ್ಥಿಗಳಿಗೆ ವಿದುಷಿ ಚೈತ್ರಾ ಧರ್ಮಸ್ಥಳ ಅವರಿಂದ ನೃತ್ಯ ಭಜನಾ ತರಬೇತಿಯನ್ನು ನಡೆಸಲಾಗುತ್ತಿದೆ.
ಭಜನಾ ಕಮ್ಮಟದಲ್ಲಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ. ಡಾ. ಹೇಮಾವತಿ ವೀ. ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್, ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಸುರೇಶ್ ಮೊಯಿಲಿ, ಪರಿಷತ್‌ನ ಅಧ್ಯಕ್ಷರಾದ ಬಾಲಕೃಷ್ಣ ಪ೦ಜ, ಕಾರ್ಯದರ್ಶಿ ಪುರುಷೋತ್ತಮ ಜಿ.ಕೆ., ಕಮ್ಮಟದ ಸದಸ್ಯರಾದ ರತ್ನವರ್ಮ ಜೈನ್, ಶ್ರೀನಿವಾಸ್‌ರಾವ್, ಕೋಶಾಧಿಕಾರಿ ಧರ್ಣಪ್ಪ, ಭವಾನಿ, ಸಂಗೀತ, ಶ್ರೀನಿವಾಸ್, ಜನಾರ್ಧನ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ