ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ

Upayuktha
0

ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ  ಧರ್ಮತ್ತಡ್ಕದ ಪ್ರೌಢಶಾಲಾ ವಿಭಾಗದ 2023-24ನೇ ವರ್ಷದ ಶಾಲಾ ಕಲೋತ್ಸವವು ಇಂದು ಆರಂಭಗೊಂಡಿತು. ಸುಪ್ರಸಿದ್ಧ ಯಕ್ಷಗಾನ ಕಲಾವಿದ "ಶ್ರೀ ಜಯಪ್ರಕಾಶ ಶೆಟ್ಟಿ ಪೆರ್ಮುದೆ" ಇವರು  ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು- "ಪ್ರತಿಯೊಂದು ಮಗುವಿನಲ್ಲಿಯೂ ಕೂಡಾ ಸುಪ್ತವಾದ ಪ್ರತಿಭೆ ಇರುತ್ತದೆ,ಮರೆಯಲ್ಲಿರುವ ಅಂತಹ ಪ್ರತಿಭೆಯನ್ನು ಹೊರ ತರುವಲ್ಲಿ ಶಾಲಾ  ಕಲೋತ್ಸವವು ವೇದಿಕೆಯನ್ನು ಒದಗಿಸುತ್ತದೆ. ಇಂತಹ ವೇದಿಕೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ ಅನೇಕರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ .ಪಠ್ಯ ವಿಷಯಗಳಲ್ಲಿ ಸಾಧನೆಯನ್ನು ಮಾಡುವುದರೊಂದಿಗೆ ಪಠ್ಯೇತರ ವಿಷಯಗಳಲ್ಲಿ  ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ಪುಸ್ತಕ ಪ್ರಪಂಚದಾಚೆಗಿನ ಜ್ಞಾನವನ್ನು ಪಡೆಯುವಂತಾಗಬೇಕು" ಎಂದು ಹಾರೈಸಿದರು‌.


ಮುಖ್ಯೋಪಾಧ್ಯಾಯ ಇ.ಎಚ್  ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು‌. ಶಾಲಾ ಮೇನೇಜರ್ ಶ್ರೀ ಶಂಕರ ನಾರಾಯಣ ಭಟ್, ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ ಶೆಟ್ಟಿ ಕುಡಾಲ್ ಹಾಗೂ ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್  ಶುಭನುಡಿಗಳನ್ನಾಡಿದರು.ಶ್ರೀ ರಾಜೇಶ್-ಮುಖ್ಯೋಪಾಧ್ಯಾಯರು ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆ ಬೆಟ್ಟಂಪಾಡಿ,ಶ್ರೀ ವಸಂತ ಮೂಂಡಬೈಲ್ , ಶ್ರೀಮತಿ ಉಷಾ ಕೆ.ಆರ್ ,ಶ್ರೀ ಶಶಿಕುಮಾರ್ ಪಿ ಉಪಸ್ಥಿತರಿದ್ದರು. ಶ್ರೀಮತಿ ಈಶ್ವರಿ ಡಿ ಸ್ವಾಗತಿಸಿ ಶಾಲಾ ಕಲೋತ್ಸವ ಸಂಚಾಲಕಿ ಶ್ರೀಮತಿ ವಿಚೇತ ಎಲ್ ವಂದಿಸಿದರು. ಶ್ರೀಮತಿ ಶ್ವೇತಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
To Top