ಮಂಗಳೂರು: ಈಚೆಗೆ ಮಂಗಳೂರಿನಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ಐಟಿಸಿ ಆಶೀರ್ವಾದ ಸ್ಪೈಸಸ್ ಕಿಚನ್ ಸೂಪರ್‌ಸ್ಟಾರ್ ಕಿರೀಟವನ್ನು ಅಲಂಕರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಕರಾವಳಿಯ ಭಾಗದ ಖಾದ್ಯಗಳನ್ನು ಈ ಗೃಹಿಣಿಯರು ತಯಾರಿಸಿ ಗಮನ ಸೆಳೆದರು. ಪ್ರವಾಸಿ ಉತ್ಸಾಹಿಗಳು ಹಾಗೂ ಆಹಾರ ಪ್ರೇಮಿಗಳಾದ ಸ್ನೇಹಾ ಕಾಮತ್ ಹಾಗೂ ರಿತೇಶ್ ಕಾಮತ್ ಅವರು 15 ವಿಧಗಳ ಖಾದ್ಯಗಳನ್ನು ತಯಾರಿಸಿದರು.
ಆರ್ ಜೆ ನಯನಾ ಶೆಟ್ಟಿ ಅವರು ಆಯೋಜಿಸಿದ ಫಿನಾಲೆಯಲ್ಲಿಖಾದ್ಯಗಳನ್ನು ಪ್ರದರ್ಶಿಸಲಾಯಿತು. ಪ್ರತಿಭಾವಂತ ಗೃಹಿಣಿಯರು ಈ ಕಾರ್ಯಕ್ರಮದಲ್ಲಿ ಬಾಯಲ್ಲಿ ನೀರೂರಿಸುವ ಕರಾವಳಿಯ ಭಾಗದ ಖಾದ್ಯಗಳನ್ನು ತಯಾರಿಸಿದರು.
ಕಾರ್ಯಕ್ರಮದ ಸ್ಪರ್ಧಾ ವಿಜೇತರಿಗೆ ವರ್ಷಕ್ಕೆ ಬೇಕಾಗುವಷ್ಟು ಆಶೀರ್ವಾದ ಮಸಾಲೆ ಪದಾರ್ಥಗಳನ್ನು ವಿತರಣೆ ಮಾಡಲಾಯಿತು. ವಿಜೇತರು ಟ್ರೋಫಿ ಹಿಡಿದರು ಸಂಭ್ರಮಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ