ಕೆ.ಆರ್.ಪೇಟೆ: ಪಟ್ಟಣದ ಹೊರವಲಯದ ಸಾಧುಗೋನಹಳ್ಳಿ ಬಳಿ ಇರುವ ಶ್ರೀಮಾತೃಭೂಮಿ ವೃದ್ದಾಶ್ರಮದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಆಶ್ರಮದ ಮುಖ್ಯಸ್ಥ ನಾಗಣ್ಣ ಜೈಹಿಂದ್ ನೇತೃತ್ವದಲ್ಲಿ ಆಚರಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕರಾದ ಸಿ.ಜೆ.ಮರಿಸ್ವಾಮೀಗೌಡ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು.
ನಿವೃತ್ತ ಯೋಧ ಸುಕುಮಾರ್, ಮೋಹನ್, ಟೌನ್ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಬಿ.ಬಸವೇಗೌಡ, ಹಿಂದುಳಿಸ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಂ.ಶಿವಪ್ಪ, ವಕೀಲರ ಸಂಘದ ಅಧ್ಯಕ್ಷವ ರವಿಶಂಕರ್, ಬಿ.ನಂಜಪ್ಪ ಸೇರಿದಂತೆ ಹಲವು ಹಿರಿಯ ನಾಗರೀಕರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಎಲ್ಲ ಹಿರಿಯರನ್ನು ಆಶ್ರಮದ ಮುಖ್ಯಸ್ಥನ ನಾಗಣ್ಣ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ವೃದ್ದಾಶ್ರಮದ ಮುಖ್ಯಸ್ಥ ಹಿರಿಯ ನಾಗರೀಕರ ಈ ದೇಶದ ಮಾರ್ಗದರ್ಶಕರಾಗಿದ್ದಾರೆ. ಅವರು ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಲು ಸಲಹೆ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಹಿರಿಯರನ್ನು ಕಡೆಗಣಿಸಬಾರದು. ಇದು ಅಪರಾಧವಾಗುತ್ತದೆ. ವಯೋವೃದ್ದರನ್ನು ಅವರ ಮಕ್ಕಳು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಮಕ್ಕಳು ಅಥವಾ ವಾರಸುದಾರರಿಗೆ ಸೂಕ್ತ ದಂಡನೆ ವಿಧಿಸುವ ಹಕ್ಕನ್ನು ನ್ಯಾಯಾಲಯ ಹೊಂದಿರುತ್ತದೆ. ಹಿರಿಯರಿಂದ ಆಸ್ತಿ ಕಿತ್ತುಕೊಂಡು ಆರೈಕೆ ಮಾಡದೇ ಕಡೆಗಣಿಸಿದರೆ ನ್ಯಾಯಾಲಯ ಅಥವಾ ತಾಲ್ಲೂಕು ತಹಸೀಲ್ದಾರ್ ರವರು ಪುನಃ ವಾಪಸ್ ಹಿರಿಯರ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಲಿದ್ದಾರೆ ಹಾಗಾಗಿ ಯಾರೂ ಸಹ ವಯೋವೃದ್ದರನ್ನು ಕಡೆಗಣಿಸದೇ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿಮಾಡಿದರು. ಏನೂ ಇಲ್ಲದ ಅನಾಥರನ್ನು ನಮ್ಮ ಮಾತೃಭೂಮಿ ಆಶ್ರಮಕ್ಕೆ ಕರೆದುಕೊಂಡು ಬಂದು ಬಿಟ್ಟರೆ ನಾವು ಅವರನ್ನು ನೋಡಿಕೊಳ್ಳಲಿದ್ದೇವೆ ಎಂದು ನಾಗಣ್ಣ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ