ಇವತ್ತಿನ ದಿನಗಳಲ್ಲಿ ಎಲ್ಲಿ ನೋಡಿದರೂ ಹೆಂಗಸರದ್ದೆ ರಾಯಭಾರ, ಎಲ್ಲಾ ಕಡೆ ಹೆಂಗಸರೇ ಕಾಣುವುದು. ಯಾವ ರೀತಿಯಲ್ಲಿ ಸರ್ಕಾರಕ್ಕೆ ಒಗ್ಗಿದ್ದಾರೆಂದರೆ ಒಂದು ಕಿಲೋಮೀಟರ್‌ಗೂ ಬಸ್ಸಿನಲ್ಲಿ ಪ್ರಯಾಣ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಜನರು ಬಸ್ಸಿನಲ್ಲಿ ಪ್ರಯಾಣಿಸುವ ಪರಿಸ್ಥಿತಿ.
ಹೌದು, ಈ ಸರ್ಕಾರ ಕೊಟ್ಟಿರುವ ಫ್ರೀ ಟಿಕೆಟ್ ಎಷ್ಟೂ ದಿನ ಇರಬಹುದು? ಚುನಾವಣೆಯಲ್ಲಿ ಗೆಲ್ಲಬೇಕೆಂದು ಈ ರೀತಿ ಮಾಡಿದ್ದಾರೋ ಅಥವಾ ಜನರ ಅಭಿವೃದ್ಧಿಗೆ ಮಾಡಿದ್ದಾರೋ ಒಂದೂ ತಿಳಿಯದು. ಜನರ ಕಷ್ಟ ಕೇಳಲಾಗುತ್ತಿಲ್ಲ ಅದರಲ್ಲೂ ವಿದ್ಯಾರ್ಥಿಗಳ ರೋಧನೆ ಇನ್ನೂ ಅಧಿಕವಾಗಿದೆ. ಬಸ್ನಲ್ಲಿ ತುಂಬಾನೇ ರಶ್ ಇದೆ ಎಂದು ಹೇಳಿ ನಿಲ್ಲಿಸದೆ ಶಾಲಾ ಕಾಲೇಜುಗಳಿಗೆ ತಲುಪಲು ತುಂಬಾನೇ ಕಷ್ಟವಾಗಿದೆ. ಯಾರಲ್ಲಿ ಹೇಳೋಣ ಈ ಪರಿಸ್ಥಿತಿಯನ್ನು ಯಾರು ಹೇಳೋರಿಲ್ಲ ಕೇಳೋರಿಲ್ಲ. ಬಸ್ ಟಿಕೆಟ್ ಫ್ರೀ ಎಂದು ಹೇಳಿಯಾಗಿದೆ ಆದರೆ ಈ ಪರಿಸ್ಥಿತಿಯನ್ನು ಅನುಭವಿಸಿ ನಮಗಂತೂ ತುಂಬಾನೇ ಕಷ್ಟವಾಗಿದೆ. ಬಸಿನಲ್ಲಿ ಕೈ ಮುರಿದುಕೊಂಡು, ಡ್ರೈವರ್ನ ಸೀಟಿನಲ್ಲಿ ಡೋರ್ ತೆಗೆದು ಮೇಲೆ ಹತ್ತುವಂತಹ ಪರಿಸ್ಥಿತಿ.
ಗಂಡಸರಿಗೆ ಶಾಲಾ ಕಾಲೇಜು ವಿದ್ಯಾರ್ಥಿಗೆ ತುಂಬಾನೇ ಕಷ್ಟವಾಗುತ್ತಿದೆ ಮುಂದಿನ ಮೂರು ಸೀಟುಗಳು ಮಹಿಳೆಯರಿಗೆ ಮೀಸಲಿಟ್ಟರೆ ಎಲ್ಲಾ ಹೆಂಗಸರು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಹಾಗಾದರೆ ಗಂಡಸರಿಗೆ ಯಾವುದೇ ಸ್ವಾತಂತ್ರ‍್ಯನೇ ಇಲ್ಲವಾ, ಗಂಡಸರಿಗೆ ಯಾವುದೇ ಫ್ರೀ ಟಿಕೆಟ್ ಅಂತ ಯಾರೂ ಹೇಳಿಲ್ಲ ಅವರೂ ಪ್ರೈವೇಟ್ ಬಸ್ ನಲ್ಲೂ ಪ್ರಯಾಣ ಮಾಡಬಹುದು ಆದರೆ ಬಸ್ಸ್ ಪಾಸ್ ಆದ ನಂತರ ಅವರಿಗೆ ಸರ್ಕಾರಿ ಬಸ್ನಲ್ಲೂ ಹತ್ತಲೂ ಸ್ಥಳಾವಕಾಶ ಇಲ್ಲದಿದ್ದರೆ ಏನೂ ಮಾಡುವುದು, ಅದರಲ್ಲೂ ವಿದ್ಯಾರ್ಥಿಗೆ ಅವರ ಖರ್ಚಿಗೆ ಸಾಕಾಗದ ಪರಿಸ್ಥಿಯಲ್ಲಿ ದಿನಾಲೂ ಹಣ ಕೊಟ್ಟು ಪ್ರಯಾಣ ಮಾಡಿದರೆ ಏನೂ ಲಾಭ? ಪ್ರಪಂಚದಲ್ಲಿ ಎಲ್ಲರೂ ಶ್ರೀಮಂತರಿರುವುದಿಲ್ಲ ಬಡವರ ಸಂಖ್ಯೆ ತುಂಬಾನೇ ಇದೆ ಅವರೆಲ್ಲ ಏನೂ ಮಾಡುವುದು?.
ಯಾವ ರೀತಿಯಲ್ಲಿ ಸರ್ಕಾರ ನಡೆಯುತ್ತೋ ಜನಸಾಮಾನ್ಯರಾದ ನಮಗಂತೂ ಗೊತ್ತಿಲ್ಲ ಸರ್ಕಾರ ನಮಗೆ ಒಗ್ಗಿಕೊಳ್ಳುತ್ತೋ ಅಥವಾ ಸರ್ಕಾರಕ್ಕೆ ನಾವೇ ಒಗ್ಗಿಕೊಳ್ತ ಇದ್ದೇವೆಯೋ ಅದೂ ಕೂಡ ಗೊತ್ತಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು, ಎಲ್ಲರೂ ಒಟ್ಟಾಗಿ, ಒಂದಾಗಿ ದೇಶವನ್ನು ಕಟ್ಟೋಣ.
- ರಮ್ಯ ಎಂ ಶ್ರೀನಿವಾಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ