ಉಜಿರೆ: "ಇತಿಹಾಸ ಅಧ್ಯಯನದ ವಿದ್ಯಾರ್ಥಿಗಳು ಸಂಶೋಧನಾ ಮನೋಬಲ ಹೊಂದಿರುತ್ತಾರೆ. ಗತಿಸಿ ಹೋದದ್ದೆಲ್ಲಾ ಇತಿಹಾಸದಲ್ಲಿ ದಾಖಲಾಗಿದೆ. ಭೂತಕಾಲದ ಘಟನೆಗಳನ್ನು ಇಟ್ಟುಕೊಂಡು ವರ್ತಮಾನ ಮತ್ತು ಭವಿಷ್ಯವನ್ನು ಸರಿಯಾಗಿ ಕಟ್ಟಲು ಸಾಧ್ಯ," ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ್ ಹೆಗ್ಡೆ ಆಶಿಸಿದರು.
ಉಜಿರೆ ಶ್ರೀ ಧ.ಮಂ ಕಾಲೇಜಿನಲ್ಲಿ ಇಂದು (ಸೆ.20) ನಡೆದ ಇತಿಹಾಸ ವಿಭಾಗದ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಕಕೋಶ ಜೀವಿಯಿಂದ ಆರಂಭವಾದ ಜೈವಿಕ ಪ್ರಕ್ರಿಯೆ ಮನುಷ್ಯನ ಹಂತದವರೆಗೆ ತಲುಪಿದೆ. ಮನುಷ್ಯನಿಂದಲೇ ಸಂಸ್ಕೃತಿ ಆಚಾರ-ವಿಚಾರಗಳು ರೂಪಗೊಂಡಿದೆ. ನಮ್ಮ ಪೂರ್ವಿಕರು ಸಾಮಾಜಿಕವಾಗಿ ಉನ್ನತ ಮಟ್ಟದ ಜೀವನ ನಡೆಸುತ್ತಿದ್ದರು. 12ನೇ ಶತಮಾನದಲ್ಲಿ ಸಮಾನತೆಗೆ ಪ್ರಾಮುಖ್ಯತೆ ಇತ್ತು, ಆದರೆ ಇಂದು ಅವುಗಳಿಗೆ ವಿರುದ್ಧವಾದ ದೇಶವನ್ನು ಒಡೆಯುವಂತಹ ಸಮಾಜ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಲ್ಲಿ ಬಹುಮುಖಿ ಓದುಗ, ಚಿಕಿತ್ಸಕ ಮನೋಬುದ್ಧಿ, ಕುತೂಹಲಕಾರಿ ಮನಸ್ಸು ಇದ್ದಾಗ ಮಾತ್ರ ಸತ್ಪ್ರಜೆಗಳಾಗಲು ಸಾಧ್ಯ, ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ 'ಅನ್ವೇಷಣೆ' ಭಿತ್ತಿ ಪತ್ರಿಕೆ ಅನಾವರಣಗೊಂಡಿತು. ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್, ಸಹ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ, ವಿದ್ಯಾರ್ಥಿ ಪ್ರತಿನಿಧಿ ದೇವದಾಸ್ ಮತ್ತು ಸೃಷ್ಠಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸೋನಾ ಸ್ವಾಗತಿಸಿ, ದ್ವಿತೀಯ ಬಿ.ಎ ವಿದ್ಯಾರ್ಥಿನಿ ವಿದ್ಯಾಶ್ರೀ ವಂದಿಸಿ, ಅಂತಿಮ ಬಿ.ಎ ವಿದ್ಯಾರ್ಥಿನಿ ಮಾರಿಯಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ