ಸದಾ ಆರೋಗ್ಯವಾಗಿರಲು ನ್ಯಾಚುರೋಪತಿಯೆಂಬ ಪಾರಂಪರಿಕ ಚಿಕಿತ್ಸೆ ಬಹಳ ಉತ್ತಮ ಚಿಕಿತ್ಸೆ: ಡಾ. ಸುಜಾತಾ

Upayuktha
0


ಉಜಿರೆ: ಕಾಲ ಬದಲಾಗಿದೆ. ಜೀವನಶೈಲಿ ಬದಲಾಗಿದೆ. ಆಹಾರ ಪದ್ಧತಿ ಬದಲಾಗಿದೆ. ಇವೆಲ್ಲದರ ಜೊತೆಗೆ ಮನುಷ್ಯನಲ್ಲಿ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಮನುಷ್ಯ ಊಟದಷ್ಟು ಔಷಧಿಗಳು ಔಷಧಿಯ ಪ್ರಮಾಣದಷ್ಟು ಊಟವನ್ನೂ ಮಾಡುವ ಪರಿಸ್ಥಿತಿಯಿದೆ. ಬದಲಾದ ಜೀವನಶೈಲಿಯಿಂದ ಉಂಟಾಗಿರುವ ಆರೋಗ್ಯ ತೊಂದರೆಗಳಿಗೆ ಪ್ರಕೃತಿ ಚಿಕಿತ್ಸೆ ಅತ್ಯುತ್ತಮ ಪರಿಹಾರವಾಗಿದೆ. ಪ್ರಕೃತಿ ಚಿಕಿತ್ಸೆ ನಮ್ಮ ಜೀವನಕ್ಕೆ ತುಂಬಾ ಹತ್ತಿರ ಇರುವ ಒಂದು ಚಿಕಿತ್ಸೆ. ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜಿನ ಉಪ-ಪ್ರಾಂಶುಪಾಲರಾದ ಶ್ರೀಮತಿ ಡಾ.ಸುಜಾತರವರು ಮಹಿಳಾ ಆರೋಗ್ಯ ಮತ್ತು ನ್ಯಾಚುರೋಪತಿ ಈ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. 


ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪಂಚ ಮಹಾಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ ಇದರ ತತ್ವಗಳನ್ನು ಆಧಾರವಾಗಿಟ್ಟುಕೊಂಡು ನೀಡುವ ಚಿಕಿತ್ಸೆ ಪ್ರಕೃತಿ ಚಿಕಿತ್ಸೆ ಇದು ಅತ್ಯಂತ ಸುಲಭವಾಗಿ ಸಿಗುವ ಹಾಗೂ ನಾವು ಸುಲಭವಾಗಿ ಪಾಲನೆ ಮಾಡಲು ಸಹಕಾರಿಯಾಗುವ ಚಿಕಿತ್ಸೆ. ಉತ್ತಮ ಹಾಗೂ ಮಿತ ಆಹಾರ, ತಾಜಾ ಗಾಳಿ, ವ್ಯಾಯಾಮ, ಬಿಸಿಲು, ಧ್ಯಾನ ಮತ್ತು ಸರಿಯಾದ ಮಾನಸಿಕ ವರ್ತನೆ, ಇವೆಲ್ಲವೂ ದೇಹ ಮತ್ತು ಮನಸ್ಸನ್ನು ಸದೃಢವಾಗಿಡುವಲ್ಲಿ ತಮ್ಮ ಪಾತ್ರವನ್ನು ವಹಿಸುತ್ತವೆ ಎಂದು ಅವರು ತಿಳಿಸಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ವಿ ಪ್ರಕಾಶ್ ಕಾಮತ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಶ್ರೀ ಧ.ಮಂ.ಮಹಿಳಾ ಐಟಿಐನ ಬೋಧಕ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜಿನ ಎಂ.ಡಿ ವಿದ್ಯಾರ್ಥಿನಿಯರಾದ ಡಾ. ಇಂದಿರಾ ಹಾಗೂ ಬಳಗ ಕಾರ್ಯಕ್ರಮ ಆಯೋಜಿಸಿದ್ದು ನಂತರ ಮಹಿಳಾ ಆರೋಗ್ಯದ ಕುರಿತು ಮಾಹಿತಿ ನೀಡಿದರು.


ನಾವು ಜೀವನದಲ್ಲಿ ದಿನನಿತ್ಯ ಬಳಸುವ ಆಹಾರ ವಸ್ತುಗಳು, ಔಷಧಿಗಳು ಮತ್ತು ಪಾನೀಯಗಳು ಇವೆಲ್ಲವೂ ಮಿತವಾಗಿ ಬಳಸಬೇಕು ಅದೇರೀತಿ ಇತರ ಅಂದರೆ ಡೀಸೆಲ್, ಪೆಟ್ರೋಲ್, ನೈಲ್ ಪಾಲಿಷ್, ವೈಟ್ನರ್ ಇತ್ಯಾದಿಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಅವುಗಳ ಪರಿಮಳ ಹೆಚ್ಚು ಹೊತ್ತು ನಮ್ಮ ಮೂಗಿಗೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ಜನಜಾಗೃತಿ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಅವರು ಮದ್ಯಪಾನ/ಧೂಮಪಾನ/ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಾಧನ ಇದನ್ನು ನಾವು ಮಾಡುವುದಾಗಲಿ ಮಾಡುವವರಿಗೆ ಸಹಕಾರ ನೀಡುವುದಾಗಲಿ ಒಳ್ಳೆಯದಲ್ಲ ಅದೇರೀತಿ ಜೀವಕ್ಕೆ ಹಾನಿ ಉಂಟು ಮಾಡುವ string juice ಅತಿಯಾದ ಔಷಧ ಬಳಕೆ, ವೈದ್ಯರ ಸಲಹೆ ಪಡೆಯದೆ ಔಷದ ಸೇವನೆಯ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು. ಕ್ಯಾನ್ಸರ್ ಕಿಡ್ನಿ ವೈಫಲ್ಯ ಲಿವರ್ ಸಮಸ್ಯೆ ಮುಂತಾದ ಹಲವಾರು ವಿಷಯಗಳ ಕುರಿತು ಮಾಹಿತಿ ನೀಡಿದರು. ಅದೇ ರೀತಿ ನಾವು ಸಮಾಜದಲ್ಲಿ ಯಾವ ರೀತಿ ವರ್ತಿಸಿದರೆ ಉತ್ತಮ ಹಾಗೂ ನಮ್ಮ ದೇಹದ ಸ್ವಾಸ್ಥ್ಯ ಕಾಪಾಡುವುದೇ ಸ್ವಾಸ್ಥ್ಯ ಸಂಕಲ್ಪ ಇದನ್ನು ನಾವು ನೀವು ಪ್ರತಿಯೊಬ್ಬ ಕನ್ನಡಿಗನೂ ಪಾಲಿಸಬೇಕು ಎಂದು ಹೇಳಿದರು 


ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಇವರು ಉಪಸ್ಥಿತರಿದ್ದರು. ಉಜಿರೆ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಹಾಗೂ ಯೋಜನಾಧಿಕಾರಿ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಕು ಪವಿತ್ರ ಕಾರ್ಯಕ್ರಮ ನಿರೂಪಿಸಿದರು ಮತ್ತು ಪ್ರಜ್ಞಾ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top