ಉಜಿರೆ: "ನಾವು ಪ್ರತಿನಿತ್ಯವು ಕಾನೂನಿನೊಂದಿಗೆ ವ್ಯವಹರಿಸುತ್ತೇವೆ. ಈ ಸಂಧರ್ಭದಲ್ಲಿ ನಮ್ಮ ಮೂಲಭೂತ ಹಕ್ಕುಗಳನ್ನು ಕಾಪಾಡಲು ನಮ್ಮ ಭಾರತೀಯ ಸಂವಿಧಾನದ ಐದು ರಿಟ್ಗಳು ಸಹಾಯ ಮಾಡುತ್ತದೆ ಹಾಗಾಗಿ ಕಾನೂನು ನಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ" ಎಂದು ವಕೀಲ ವಿಕಾಸ್ ಉತ್ತಯ್ಯ ನುಡಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಸ್ವಾಯತ್ತ ಕಾಲೇಜಿನಲ್ಲಿ ಸೆಪ್ಟೆಂಬರ್ 29 ರ ಶುಕ್ರವಾರದಂದು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಭಾರತೀಯ ಸಂವಿಧಾನದಲ್ಲಿ ರಿಟ್ ವಿಷಯದ ಅತಿಥಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಲೀಪ್ ಎ.ಪಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರುಗಳಾದ ಶ್ರೀ ನಟರಾಜ್ ಎಚ್.ಕೆ , ಶ್ರೀಮತಿ ಭಾಗ್ಯಶ್ರೀ,ಶ್ರೀ ಶಿವಕುಮಾರ್ ಉಪಸ್ಥಿತರಿದ್ದರು ಹಾಗೂ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಡಾ. ಶಲೀಪ್ ಎ.ಪಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ