ಬೌಲ್ಟ್ ರಿಟೇಲ್ ಜಾಲ ವಿಸ್ತರಣೆ

Upayuktha
0



ಮಂಗಳೂರು: ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೇರಬಲ್ ಬ್ರಾಂಡ್ ಬೌಲ್ಟ್ ಇಂದು ಭಾರತದ 13 ರಾಜ್ಯಗಳಲ್ಲಿ ಆಫ್‍ಲೈನ್ ರಿಟೇಲ್ ಮಾರುಕಟ್ಟೆಗಳ ಕಾರ್ಯತಂತ್ರದ ವಿಸ್ತರಣೆಯನ್ನು ಪ್ರಕಟಿಸಿದೆ.


ಇದು ಬೌಲ್ಟ್‍ನ ಪ್ರೀಮಿಯಂ ಆಡಿಯೊ ಮತ್ತು ವೇರಬಲ್ ಉತ್ಪನ್ನಗಳನ್ನು ಗ್ರಾಹಕರಿಗೆ, ತಂತ್ರಜ್ಞಾನದ ಉತ್ಸಾಹಿಗಳಿಗೆ ಮತ್ತು ಫಿಟ್‍ನೆಟ್ ಆಸಕ್ತರಿಗೆ ಹತ್ತಿರವಾಗಿಸುವ ಗುರಿ ಹೊಂದಿದ್ದು ಅನುಭವಗಳನ್ನು ಮರು ವ್ಯಾಖ್ಯಾನಿಸುವ ತನ್ನ ಬದ್ಧತೆಯನ್ನು ಮರು ದೃಢೀಕರಿಸುತ್ತದೆ. ಆಫ್ ಲೈನ್ ರೀಟೇಲ್ ಮಾರುಕಟ್ಟೆಗೆ ಬೌಲ್ಟ್ ವಿಸ್ತರಣೆಯು ಕರ್ನಾಟಕ ಸೇರಿ 13 ರಾಜ್ಯಗಳ ಗ್ರಾಹಕರನ್ನು ತಲುಪಲಿದೆ ಎಂದು ಬೌಲ್ಟ್ ನ ಸಹ-ಸಂಸ್ಥಾಪಕ ವರುಣ್ ಗುಪ್ತಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ತನ್ನ ಮೊದಲ ಹಂತದಲ್ಲಿ ಬೌಲ್ಟ್ 2500+ ಆಫ್ ಲೈನ್ ಮಳಿಗೆಗಳಿಗೆ ತನ್ನ ಸದೃಢ ಜಾಲ ವಿಸ್ತರಣೆಯನ್ನು ಪ್ರಾರಂಭಿಸಲಿದೆ ಮತ್ತು ಎರಡನೇ ಹಂತದಲ್ಲಿ ಮತ್ತಷ್ಟು ವಿಸ್ತರಿಸಲಿದೆ. ಈ ರೀಟೇಲ್ ಮಳಿಗೆಗಳು ಬೌಲ್ಟ್ ನ ವಿಸ್ತಾರ ಉತ್ಪನ್ನದ ಪೋರ್ಟ್ ಫೋಲಿಯೊ ಪ್ರದರ್ಶಿಸುವುದೇ ಅಲ್ಲದೆ ನೆಕ್ ಬ್ಯಾಂಡ್ ಗಳು, ಸ್ಮಾರ್ಟ್ ವಾಚ್ ಗಳು ಮತ್ತು ವೈವಿಧ್ಯಮಯ ಇಯರ್ ಬಡ್ ಗಳು ಅಲ್ಲದೆ ಗ್ರಾಹಕರಿಗೆ ಬೌಲ್ಟ್ ನ ಗುಣಮಟ್ಟ ಮತ್ತು ಆವಿಷ್ಕಾರವನ್ನು ಹತ್ತಿರದಿಂದ ತಮ್ಮ ಬಳಿಯಲ್ಲಿರುವ ಮಳಿಗೆಗಳಲ್ಲಿ ಅನುಭವ ಪಡೆದುಕೊಳ್ಳಲು ಅವಕಾಶ ನೀಡುತ್ತದೆ ಎಂದು ಪ್ರಕಟಣೆ ಹೇಳಿದೆ.


ಬೌಲ್ಟ್ 2500ಕ್ಕೂ ಹೆಚ್ಚು ಆಫ್‍ಲೈನ್ ಮಳಿಗೆಗಳೊಂದಿಗೆ ಸಹಯೋಗ ಹೊಂದಿದ್ದು ಪ್ರಮುಖ ನ್ಯಾಷನಲ್ ಲಾರ್ಜ್ ಫಾಮ್ರ್ಯಾಟ್ ರೀಟೇಲರ್‍ಗಳಾದ ರಿಲಯನ್ಸ್ ಡಿಜಿಟಲ್ ಮತ್ತು ಪ್ರಾದೇಶಿಕ ಮಳಿಗೆಗಳಾದ ಎಸ್.ಎಸ್. ಮೊಬೈಲ್, ಮತ್ತು ಪೂಜಾ ಫೋನ್ ವಾಲೆ, ಪೂರ್ವಿಕಾ, ಚೆನ್ನೈ ಮೊಬೈಲ್ಸ್, ಸುಪ್ರೀಮ್, ಬಿಗ್ ಸಿ, ಹ್ಯಾಪಿ ಮತ್ತಿತರ ಮಳಿಗೆಗಳ ಜತೆ ಸಹಯೋಗ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top