ಉಡುಪಿ: ಹೊಸ ಯುಟಿಐ ಅಸೆಟ್ ಹಣಕಾಸು ಕೇಂದ್ರ

Upayuktha
0


ಮಂಗಳೂರು/ ಉಡುಪಿ: ದೇಶದ ಅತಿದೊಡ್ಡ ಆಸ್ತಿ ನಿರ್ವಾಹಕರಲ್ಲಿ ಒಂದಾಗಿರುವ ಯುಟಿಐ ಅಸೆಟ್ ಮ್ಯಾನೇಜ್‍ಮೆಂಟ್ ಕಂಪನಿ (ಯುಟಿಐ ಎಎಂಸಿ), ಉಡುಪಿ ಸೇರಿದಂತೆ ದೇಶದ ವಿವಿಧೆಡೆ 29 ಹೊಸ ಹಣಕಾಸು ಕೇಂದ್ರಗಳನ್ನು ಆರಂಭಿಸಲಿದೆ.


ಈ ಕಚೇರಿಗಳನ್ನು 29 ಸೆಪ್ಟೆಂಬರ್ 2023 ಶುಕ್ರವಾರದಂದು ಏಕಕಾಲದಲ್ಲಿ ಉದ್ಘಾಟಿಸಲಾಗುವುದು. ಈ ಕಾರ್ಯತಂತ್ರದ ಕ್ರಮವು ಗ್ರಾಹಕರಿಗೆ ಉತ್ತಮ ಹಣಕಾಸು ಸೇವೆ ಲಭ್ಯತೆಗೆ ಹಾಗೂ ಕಂಪನಿಯ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಲುಅನುಕೂಲವಾಗಲಿದೆ ಎಂದು ಎಂಡಿ ಮತ್ತು ಸಿಇಒ ಇಮ್ತಿಯಾಝುರ್ ರೆಹಮಾನ್ ಹೇಳಿದ್ದಾರೆ.


ಹೊಸ ಕೇಂದ್ರವು ಉಡುಪಿಯ ಜೋಡುಕಟ್ಟೆ ಕಿನ್ನಿಮೂಲ್ಕಿಯ ಬಿಗ್‍ಬಜಾರ್ ಬಳಿ ಕ್ರಿಸ್ ಕಾಂಪ್ಲೆಕ್ಸ್, ಮೊದಲ ಮಹಡಿಯಲ್ಲಿದೆ.


ಹೂಡಿಕೆದಾರರಿಗೆ ಹತ್ತಿರವಾಗಲು ಮತ್ತು ನಮ್ಮ ಸಮಗ್ರ ಕೊಡುಗೆಗಳನ್ನು ಸುಲಲಿತವಾಗಿ ಒದಗಿಸುವ ಗುರಿಯೊಂದಿಗೆ ನಾವು ನಿರಂತರವಾಗಿ ದೇಶಾದ್ಯಂತ ನಮ್ಮ ನೆಟ್‍ವರ್ಕ್ ಅನ್ನು ಹೆಚ್ಚಿಸುತ್ತಿದ್ದೇವೆ. ಜನರು ಹೂಡಿಕೆ ಮಾಡಲು ಸಿದ್ಧರಿರುವ ಸಣ್ಣ ನಗರಗಳಲ್ಲಿ ಅಪಾರ ಬೆಳವಣಿಗೆಯ ಸಾಮಥ್ರ್ಯವಿದೆ. ಮ್ಯೂಚುಯಲ್ ಫಂಡ್ ಹೂಡಿಕೆಗಳ ಕುರಿತು ಅವರ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಈ ನಗರಗಳಲ್ಲಿ ನಮ್ಮ ಉತ್ಪನ್ನಗಳಿಗೆ ಉತ್ತಮ ಪ್ರವೇಶವನ್ನು ಒದಗಿಸಲು ಇದು ಪೂರಕವಾಗಲಿದೆ ಎಂದು ವಿವರಿಸಿದ್ದಾರೆ.


ಈ ಹಣಕಾಸು ಕೇಂದ್ರಗಳು (ಯುಎಫ್‍ಸಿಗಳು), ವ್ಯಾಪಾರ ಅಭಿವೃದ್ಧಿ ಅಸೋಸಿಯೇಟ್ಸ್, ಮ್ಯೂಚುಯಲ್ ಫಂಡ್ ವಿತರಕರು (ಎಂಎಫ್‍ಡಿ) ಮತ್ತು ಬ್ಯಾಂಕ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡು ಆ ಮೂಲಕ ತನ್ನ ವಿತರಣಾ ಜಾಲದ ಮೂಲಕ ತನ್ನ ಹೂಡಿಕೆದಾರರನ್ನು ತಲುಪಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter      

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top