ಸುರತ್ಕಲ್: ವಿದ್ಯಾರ್ಥಿಗಳಲ್ಲಿ ಕಾನೂನು ಪ್ರಜ್ಞೆ ಬೆಳದರಷ್ಟೇ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದು ಮಂಗಳೂರು ನಗರದ ಉಪ ಪೊಲೀಸ್‍ಆಯುಕ್ತ (ಅಪರಾಧ ಮತ್ತು ಸಂಚಾರಿ) ಬಿ.ಪಿ.ದಿನೇಶ್‍ಕುಮಾರ್ ನುಡಿದರು. ಅವರು ಗೋವಿಂದದಾಸ ಕಾಲೇಜಿನ ಮಹಿಳಾ ವೇದಿಕೆ ಮತ್ತು ಗ್ರಾಹಕರ ವೇದಿಕೆಯ ಚಟುವಟಿಕೆಗಳನ್ನುಉದ್ಘಾಟಿಸಿ ಮಾತನಾಡುತ್ತಿದ್ದರು.
ದಕ್ಷಿಣಕನ್ನಡ ಜಿಲ್ಲೆಯಿಂದ ಪೊಲೀಸ್ ಇಲಾಖೆಗೆ ಉದ್ಯೋಗಿಗಳಾಗಿ ಸೇರುವವರ ಪ್ರಮಾಣ ಕಡಿಮೆಯಾಗಿದ್ದು ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಆಸಕ್ತಿವಹಿಸ ಬೇಕು ಎಂದುಅವರು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ ವಹಿಸಿದ್ದರು.
ಮಹಿಳಾ ವೇದಿಕೆಯ ಸಂಯೋಜಕಿ ಶ್ರೀದೇವಿ, ಅಕ್ಷತಾ, ಡಾ.ವಿಜಯಲಕ್ಷ್ಮೀ, ಡಾ. ಸುಧಾ, ಡಾ.ಸುಜಾತ ಮತ್ತು ಡಾ.ಪ್ರಶಾಂತ್ ಉಪಸ್ಥಿತರಿದ್ದರು.
ಗ್ರಾಹಕ ವೇದಿಕೆಯ ಸಂಯೋಜಕಿ ದಯಾ ಸುವರ್ಣ ಸ್ವಾಗತಿಸಿದರು. ಪೂರ್ವಿ ಅಶೋಕ್ ಕಾರ್ಯಕ್ರಮದ ಅತಿಥಿ ಪರಿಚಯಿಸಿದರು. ಶ್ರೇಯಾ ಭಟ್ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


