ಉಡುಪಿ: ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪಠ್ಯಾಧಾರಿತ ಕುಮಾರವ್ಯಾಸ ಭಾರತದ “ಉತ್ತರನ ಪೌರುಷ” ಎಂಬ ಕಾವ್ಯ ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಸತೀಶ ಕುಮಾರ ಕೆಮ್ಮಣ್ಣು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಾಚನದಲ್ಲಿ ಮಂಜುಳಾ ಸುಬ್ರಹ್ಮಣ್ಯ ಭಟ್ ಅವರು ಉಪಸ್ಥಿತರಿದ್ದು ನಡೆಸಿಕೊಟ್ಟರು. ಶ್ರೋತೃಗಳ ಮನಸ್ಸಿಗೆ ಹಿತವಾಗುವಂತೆ ವ್ಯಾಖ್ಯಾನವೂ ಇತ್ತು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾಗದರ್ಶನವಾಗುವಂತೆ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ತಾಲೂಕು ಗಮಕ ಕಲಾಘಟಕದ ಅಧ್ಯಕ್ಷರಾದ ಪ್ರೊ. ಎಂ.ಎಲ್ ಸಾಮಗರು ಗಮಕ ಕಲೆಯ ಅವಶ್ಯಕತೆಯನ್ನು ವಿವರಿಸಿದರು.
ಅಧ್ಯಕ್ಷ ಸತೀಶ ಕುಮಾರ ಕೆಮ್ಮಣ್ಣು ಗಮಕ ಪರಿಷತ್ತಿನ ಚಟುವಟಿಕೆಗಳ ಕಡೆಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ ಉಪನ್ಯಾಸಕರಾದ ವಸಂತ ಕುಮಾರ ಅವರು ಮತ್ತು ಕಾರ್ಯಕ್ರಮದ ಕೊನೆಗೆ ಮಟ್ಟು ಕೃಷ್ಣ ಕುಮಾರ ಅವರು ವಂದನಾರ್ಪಣೆ ಗೈದರು. ಚಿಕ್ಕದಾದ ಚೊಕ್ಕದಾದ ಕಾರ್ಯಕ್ರಮ ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುವಂತೆ ನಡೆಯಿತು.
-ಸತೀಶ್ ಕುಮಾರ್ ಕೆಮ್ಮಣ್ಣು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ