ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸೆಪ್ಟೆಂಬರ್ 1 ರಂದು ನಡೆದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ -2023-24 ಸಂತ ಫಿಲೋಮಿನಾ ಪ.ಪೂ.ಕಾಲೇಜಿನ ಬಾಲಕರ ವಿಭಾಗವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ದ್ವಿತೀಯ ವಾಣಿಜ್ಯ ವಿಭಾಗದ ಇಬ್ರಾಹಿಂ ಶಾಝಿಲ್, ಅಬೂಬಕ್ಕರ್ ಸಿದ್ದಿಕ್, ಕೃಷಾ ರೋಯಿಸ್ಟನ್, ಮೊಹಮ್ಮದ್ ಫಾಯಿಜ್, ಮಹಮ್ಮದ್ ಅಜ್ಮಾನ್ , ಮಹಮ್ಮದ್ ರಶೀದ್, ಅಕ್ತರ್ ಖಾನ್,ವರುಣ್ ಎಚ್.ಎಂ,ಅಬ್ದುಲ್ ರಾಝಿಕ್ ಕೆ,ಮೊಹಮ್ಮದ್ ಶಫಿ, ಮುಹಮ್ಮದ್ ಮುಬಾಶ್, ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ರಾಝಿಕ್, ಅಹಮ್ಮದ್ ತವಾಫ್,ಯು ಮಹಮ್ಮದ್ ಫಸೀಹ್ ಪ್ರಥಮ ವಿಜ್ಞಾನ ವಿಭಾಗದ ಅಬ್ದುಲ್ ರೆಹಮಾನ್, ಕೆ ದ್ವಿತೀಯ ವಿಜ್ಞಾನ ವಿಭಾಗದ ಅಬ್ದುಲ್ ಅರ್ಷಕ್, ಜೋಹೈರ್ ಲತೀಫ್ ಸಿ.ಎ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಆಟಗಾರರನ್ನು ಅಭಿನಂದಿಸಿ ಶುಭಹಾರೈಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಎಲಿಯಾಸ್ ಪಿಂಟೋ ಮತ್ತು ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ