ಜಾನಪದ ಸಂಸ್ಕೃತಿ ಮತ್ತು ವೈದಿಕ ಸಂಸ್ಕೃತಿಯಿಂದ ತುಳುನಾಡು ನಿರ್ಮಾಣ: ಡಾ. ಪುಂಡಿಕಾಯಿ ಗಣಪಯ್ಯ ಭಟ್

Upayuktha
0




ಉಜಿರೆ: ನೆಲದ ಸಂಸ್ಕೃತಿ ಮತ್ತು ವೈದಿಕ ಸಂಸ್ಕೃತಿಯ ಒಟ್ಟುಗೂಡುವಿಕೆಯಿಂದ ತುಳುನಾಡು ನಿರ್ಮಾಣವಾಗಿದೆ ಎಂದು ಮೂಡುಬಿದಿರೆಯ ಶ್ರೀ ಧವಲಾ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಗಣಪಯ್ಯ ಭಟ್ ಹೇಳಿದರು.



ಅವರು ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ನಡೆದ `ಐತಿಹಾಸಿಕ ಪರಂಪರೆ ಉಳಿಸಿ' ಕಾರ್ಯಕ್ರಮದಡಿಯಲ್ಲಿ ‘ತುಳುನಾಡಿನ ದೇಗುಲ ಸಂಸ್ಕೃತಿ’ ಕುರಿತು ಬುಧವಾರ ಮಾತನಾಡಿದರು.



ತುಳುನಾಡನ್ನು ದೇವರ ಭೂಮಿ, ದೇವರ ನಾಡು ಎಂದು ಕರೆದರೂ ತಪ್ಪಾಗಲಾರದು. ಇಲ್ಲಿ ಭೂತಾರಾಧನೆ ಜಾನಪದ ಸಂಸ್ಕøತಿಯಿಂದ ಬಂದರೆ, ದೇವತಾರಾಧನೆ ವೈದಿಕ ಸಂಸ್ಕøತಿಯನ್ನು ಬಿಂಬಿಸುತ್ತದೆ. ಹಾಗಾಗಿ ಇಲ್ಲಿ ಸಾಂಸ್ಕøತಿಕ ಮತ್ತು ಧಾರ್ಮಿಕ ಭಿನ್ನತೆ ಇದೆ. ಎರಡೂ ಸಂಸ್ಕøತಿಗಳು ಒಟ್ಟುಗೂಡಿವೆ ಎಂದರು. 



“ಪರಂಪರೆ ಎನ್ನುವುದು ಅವ್ಯಕ್ತವಾಗಿರುವಂಥದ್ದು. ತುಳು ಭಾಷೆಗೂ ತುಳುನಾಡಿಗೂ ಯಾವುದೇ ಸಂಬಂಧವಿಲ್ಲ. ತುಳು ಸಂಸ್ಕøತಿಯನ್ನು ಅನುಸರಿಸುತ್ತಿರುವ ಪ್ರದೇಶವೆಲ್ಲಾ ತುಳುನಾಡು. ತುಳುನಾಡು ಸಣ್ಣ ಪ್ರದೇಶವಾದರೂ ಇಲ್ಲಿ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ದೇವಸ್ಥಾನಗಳಿವೆ. ಈ ದೇವಸ್ಥಾನಗಳನ್ನು ರಾಜರುಗಳು ನಿರ್ಮಿಸಿಲ್ಲ, ಬದಲಾಗಿ ಸಾಂಸ್ಕøತಿಕ ಹಿನ್ನೆಲೆ, ಧಾರ್ಮಿಕ ನಂಬಿಕೆಯಿಂದ ಜನರಿಂದಲೇ ನಿರ್ಮಾಣವಾಗಿರುವಂತಹ ಪುರಾವೆಗಳು ಇವೆ" ಎಂದು ಅವರು ತಿಳಿಸಿದರು.



ಈ ವೇಳೆ ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧ. ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ, ವಿದ್ಯಾರ್ಥಿ ಪ್ರತಿನಿಧಿ ದೇವದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಮರಿಯಾ ವಂದಿಸಿ, ತೇಜಸ್ವಿನಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top