ಮಂಗಳೂರು: ನಾಳೆಯಿಂದ 28, 29, 30 - ಮೂರು ದಿನಗಳ ಕಾಲ ರಾಧಾ ಸುರಭಿ ಗೋ ಮಂದಿರದಿಂದ ಹೊರಟ ಗೋ- ಕರು ಸಹಿತವಾದ ರಥಯಾತ್ರೆ ನಗರದಲ್ಲೆಲ್ಲಾ ಸಂಚರಿಸಲಿದೆ.
ಅದ್ಯಪಾಡಿಯಿಂದ ಪುರಪ್ರವೇಶ ಮಾಡುವ ರಥವು ಶ್ರೀಕ್ಷೇತ್ರ ಮರಕಡದಿಂದ ಪೂಜ್ಯ ಶ್ರೀ ಶ್ರೀ ನಿತಿನ್ ಯೋಗೀಶ್ವರೇಶ್ವರ ಸ್ವಾಮಿಯವರ ಅನುಗ್ರಹ ಭಾಷಣದೊಂದಿಗೆ ಗೋ ಪೂಜೆ ಕೈಗೊಂಡು ನಂತರ ಕಾವೂರು ವ್ಯವಸಾಯ ಸಹಕಾರ ಬ್ಯಾಂಕ್ ಗೆ ಬರುತ್ತದೆ. ನಂತರ ಬೋಂದೆಲ್ ಪಚ್ಚನಾಡಿ ಆಗಿ ಕುಡುಪು, ಪಡೀಲ್ ಆಗಿ ಭಾರತೀ ಕಾಲೇಜ್ ಪ್ರವೇಶಿಸುತ್ತದೆ.
ಅಪರಾಹ್ನ ನಂತೂರು, ಕಂಕನಾಡಿ ಆಗಿ ಜೆಪ್ಪು ಮೋರ್ಗನ್ ಗೇಟ್ ಆಗಿ ಮಂಗಳಾದೇವಿಯಲ್ಲಿ ತಂಗುತ್ತದೆ. ಅಲ್ಲಿ ಶ್ರೀರಾಮಕೃಷ್ಣ ಮಠದ ಸ್ವಾಮೀಜಿ ಮತ್ತು ಪ್ರವಚನಕಾರ ದಿವಾಣ ಕೇಶವ ಭಟ್ಟರಿಂದ ಗೋಕಥೆ ಇರುತ್ತದೆ.
ಮಾರನೇ ದಿನ ಸ್ಟೇಟ್ ಬ್ಯಾಂಕ್ ಪ್ರವೇಶಿಸಿ ಕ್ಯಾಂಪ್ಕೊ ಆಗಿ ಸೆಂಟ್ರಲ್ ಮಾರ್ಕೆಟ್, ರಥಬೀದಿ, ಕುದ್ರೋಳಿ ದೇವಸ್ಥಾನ ಆಗಿ ಸಾಯಂಕಾಲ ಶ್ರೀಕ್ಷೇತ್ರ ಶರವಿನಲ್ಲಿ ತಂಗುವುದು.
ಅಲ್ಲಿ ಶರವು ದೇವಳದ ಶಿಲೆ ಶಿಲೆ ಮೊಕ್ತೇಸರರಾದ ಶ್ರೀರಾಘವೇಂದ್ರ ಶಾಸ್ತ್ರಿಗಳಿಂದ ಉದ್ಘಾಟನೆಗೊಳ್ಳುತ್ತದೆ. ಬಳಿಕ 6 ಗಂಟೆಯಿಂದ ಸರಯೂ ನಿರ್ದೇಶಕರಾದ ವರ್ಕಾಡಿ ರವಿ ಅಲೆವೂರಾಯರ ನೇತೃತ್ವದಲ್ಲಿ ಗೋಪಾಲ ರಾಮ ಎಂಬ ಗೋಕಥಾ ಯಕ್ಷಗಾನ ನಡೆಯಲಿದೆ.
30ರಂದು ಶರವಿನಿಂದ ಹೊರಟು ಉರ್ವಾ ಮಾರಿಗುಡಿಯಾಗಿ ಕೊಟ್ಟಾರದ ಮೂಲಕ ಪಣಂಬೂರು ಆಗಿ ಸುರತ್ಕಲ್ಲಿಗೆ ಹೋಗಿ ಕುಳಾಯಿ ವಿಷ್ಣುಮೂರ್ತಿ ದೇವಳದಲ್ಲಿ ತಂಗುತ್ತದೆ. ಅಲ್ಲಿ ಚಿತ್ರಾಪುರ ಮಠದ ಪೂಜ್ಯ ಸ್ವಾಮೀಜಿಯವರಿಂದ ಗೋಕಥೆ ಇರುತ್ತದೆ. ದೇವಳದ ಮೊಕ್ತೇಸರ ಶ್ರೀಕೃಷ್ಣ ಹೆಬ್ಬಾರ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ಭಾರತಿ ಸಂಪೂರ್ಣ ಸಹಕಾರ ನೀಡುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


