ಇತ್ತೀಚೆಗೆ ತಮಿಳುನಾಡಿನಲ್ಲಿ ಸನಾತನ ಧರ್ಮವನ್ನು ನಾಶ ಮಾಡುವ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿಯವರ ಮಗ ಉದಯನಿಧಿ ಸ್ಟಾಲಿನ್ ಎಂಬ ಕ್ರೈಸ್ತ ಶಾಸಕ ಸನಾತನ ಧರ್ಮವು ಮಲೆರಿಯಾ, ಡೆಂಗ್ಯೂ ಇದ್ದಂತೆ, ಇದನ್ನು ಕೇವಲ ವಿರೋಧ ಮಾಡಿದರೆ ಸಾಲದು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಹೇಳಿದ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶವು ಬುಗಿಲೆದ್ದಿದೆ. ಈ ಹೇಳಿಕೆಯನ್ನು ನೀಡುವಾಗ ತಮಿಳುನಾಡಿನ 40,000 ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಉಸ್ತುವಾರಿಯನ್ನು ನೋಡುವ ಇಲಾಖೆಯ ಸಚಿವರಾದ ಶೇಖರ್‌ಬಾಬು ಸಹ ವೇದಿಕೆಯಲ್ಲಿದ್ದು, ಅವರು ಏನೂ ವಿರೋಧ ಮಾಡದೇ ಮೂಕಸಮ್ಮತಿಯನ್ನು ವ್ಯಕ್ತ ಮಾಡಿರುವುದು ಅತ್ಯಂತ ಖೇದಜನಕ ವಿಷಯವಾಗಿದೆ. ದೇಶದ ಸಂವಿಧಾನಬದ್ದವಾದ ಹುದ್ದೆಯಲ್ಲಿದ್ದು, 120 ಕೋಟಿ ಜನಸಂಖ್ಯೆಯನ್ನು ಪ್ರತಿನಿಧಿಸುವ ಸನಾತನ ಧರ್ಮವನ್ನು ನಾಶ ಮಾಡುವ ಹೇಳಿಕೆಯು ಅತ್ಯಂತ ಧ್ವೇಷಪೂರ್ಣವಾಗಿದೆ. ಸನಾತನ ಧರ್ಮವನ್ನು ನಾಶ ಮಾಡುವುದು ಎಂದರೆ 120 ಕೋಟಿ ಸನಾತನ ಧರ್ಮಿಯರ ಹತ್ಯಾಕಾಂಡ ಮಾಡಬೇಕು ಎಂಬ ಅರ್ಥವನ್ನು ನೀಡುತ್ತದೆ. ಅನ್ಯ ರಾಜ್ಯಗಳ ತುಲನೆಯಲ್ಲಿ ತಮಿಳುನಾಡಿನಲ್ಲಿ ಅತೀ ಹೆಚ್ಚು ದೇವಸ್ಥಾನಗಳಿದ್ದು, ಸರಿಸುಮಾರು 75 ಸಾವಿರಕ್ಕೂ ಅಧಿಕ ದೇವಸ್ಥಾನಗಳು ಇದೆ. ಸನಾತನ ಧರ್ಮದ ಸರ್ವೋತ್ಕೃಷ್ಠ ಸಂತರಾದ ಪೂಜ್ಯ ರಮಣ ಮಹರ್ಷಿಗಳು ಜನಿಸಿದ, ಜಗದ್ಗುರು ಶಂಕರಚಾರ್ಯರಾದ ಕಾಂಚಿಕಾಮಕೋಟಿ ಪೀಠ ಇರುವ, ಸಂತ ಅಪ್ಪಾರ್, ಸುಂದರರ್, ಸಂಬಂದರ್, ನಾಲ್ವರ್ ನಂತಹ ಅನೇಕ ಸಂತರು ನೀಡಿದ ನಾಡು ತಮಿಳುನಾಡಾಗಿದೆ. ಇಂದಿಗೂ ಅವರ ಅಚರಣೆಗಳನ್ನು ಶ್ರದ್ಧೆಯಿಂದ ಪಾಲನೆ ಮಾಡುತ್ತಾರೆ. ಇಂದು ತಮಿಳುನಾಡಿನಲ್ಲಿ ಶೇ 85 % ಹಿಂದೂ ಸಮುದಾಯದ ಜನಸಂಖ್ಯೆಯನ್ನು ಹೊಂದಿದೆ. ಸನಾತನ ಧರ್ಮವನ್ನು ನಾಶ ಮಾಡಬೇಕಂದರೆ ಈ ಎಲ್ಲವನ್ನೂ ನಾಶ ಮಾಡಬೇಕು ಎಂಬರ್ಥದ ಹೇಳಿಕೆಯನ್ನು ಉದಯನಿಧಿ ಸ್ಟಾಲಿನ್ ನೀಡಿದ್ದಾರೆ.
ಇದು ಇತ್ತಿಚೇಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಧ್ವೇಷಪೂರ್ಣ ಭಾಷಣಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂಬ ಆದೇಶದ ಪ್ರಕಾರ ಗಂಭೀರ ಪ್ರಕರಣವಾಗಿದ್ದು, ಕೂಡಲೇ ಮದ್ರಾಸ್ ಉಚ್ಚ ನ್ಯಾಯಾಲಯವು ಸ್ವಯಂ ಪ್ರೇರಿತ ದೂರು ದಾಖಲಿಸುವುದು ಅಪೇಕ್ಷಿತವಿತ್ತು. ಮಹಾರಾಷ್ಟ್ರದ ಸಭೆಯೊಂದರಲ್ಲಿ ಭಾಗ್ಯನಗರದ ಶಾಸಕರಾದ ಟಿ ರಾಜಾ ಸಿಂಗ್‌ರವರು ಮತ್ತು ಸುದರ್ಶನ್ ನ್ಯೂಸ್ ಚಾನೆಲ್ ಸಂಪಾದಕ ಶ್ರೀ. ಸುರೇಶ ಚೌವ್ಹಾಣ್ ನೀಡಿದ ಚಿಕ್ಕ ಹೇಳಿಕೆ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯವು ಸ್ವಯಂ ಪ್ರೇರಿತ ದೂರು ದಾಖಲಿಸಿತ್ತು. ಆದರೆ ಸ್ಟಾಲಿನ್ ಅವರ ಹೇಳಿಕೆಯು ಅದಕ್ಕಿಂತ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದರೂ ನ್ಯಾಯಾಲಯಗಳು ಸಂಪೂರ್ಣ ಮೌನವಾಗಿರುವುದು ಅತ್ಯಂತ ಆಶ್ಚರ್ಯವಾಗಿದೆ.
ಸನಾತನ ಧರ್ಮ ಹೇಳಿಕೆಗೆ ಬೆಂಬಲ ನೀಡುವ ಸನಾತನ ವಿರೋಧಿಗಳು.
ಕ್ರೈಸ್ತ ಶಾಸಕ ಸ್ಟಾಲಿನ್ ಹೇಳಿಕೆ ನೀಡಿದ ಕೂಡಲೇ ತಥಾಕಥಿತ ಬಹುಭಾಷಾ ನಟ ಪ್ರಕಾಶರಾಜ ಇವರು ಬೆಂಬಲವನ್ನು ವ್ಯಕ್ತ ಮಾಡಿದರು ಮತ್ತು ತಮಿಳುನಾಡು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಇವರು ಸಹ ಸ್ಟಾಲಿನ್ ಹೇಳಿಕೆಯನ್ನು ಸಮರ್ಥನೆ ಮಾಡಿದರು, ಅದಲ್ಲದೇ ಡಿಎಮ್‌ಕೆ ಮುಖಂಡರು ಸಹ ಇಂತಹ ಸಂವಿಧಾನಬಾಹಿರವಾದ ಹೇಳಿಕೆಯನ್ನು ಸಮರ್ಥನೆ ಮಾಡಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ.
ಈ ಹಿಂದೆ ಡಿಎಮ್‌ಕೆ ಸಂಸದ ಎ. ರಾಜಾ ಇವರು ಹಿಂದೂ ಎಂದರೆ ವೈಶ್ಯರು ಎಂದು ಹೇಳಿಕೆಯನ್ನು ನೀಡಿದ್ದರು. ಡಿಎಮ್‌ಕೆಯ ಕರುಣಾನಿಧಿಯವರು ರಾಮಸೇತು ಬಗ್ಗೆ ಹೇಳಿಕೆ ನೀಡುವಾಗ ‘ಶ್ರೀರಾಮ ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತಿದ್ದ ಎಂದು ಪ್ರಶ್ನೆ ಕೇಳಿದ್ದರು. ಹೀಗೆ ಡಿಎಮ್‌ಕೆ ಇತಿಹಾಸವೇ ಹಿಂದೂ ವಿರೋಧಿ ಮಾನಸಿಕೆಯಿಂದ ಕೂಡಿದೆ.
ಇಂದು ದೇಶದಾದ್ಯಂತ ಈ ರೀತಿಯಾದ ಸನಾತನ ವಿರೋಧಿ ಮಾನಸಿಕೆಯು ನಿರ್ಮಾಣವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಹಿಂದೂತ್ವದ ವಿರುದ್ಧ ಎಂದು ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿಯವರು ಸಹ ಹಿಂದೂತ್ವವು ಅತ್ಯಂತ ಅಪಾಯಕಾರಿ ಎಂದು ಹೇಳಿಕೆ ನೀಡಿದ್ದರು. ಶಾಸಕ ಸತೀಷ್ ಜಾರಕಿಹೊಳಿಯವರು ಸಹ ಹಿಂದೂ ಶಬ್ದವು ಪರ್ಶಿಯನ್ ದೇಶದಿಂದ ಬಂದಿದ್ದು, ಅದರ ಅರ್ಥ ಕೆಟ್ಟದಿದೆ ಎಂದು ಹೇಳಿಕೆ ನೀಡಿದ್ದರು. ಬಿಹಾರದ ಶಿಕ್ಷಣ ಸಚಿವ ಚಂದ್ರಶೇಕರ್ ಇವರು ರಾಮಚರಿತಮಾನಸ್ ಗ್ರಂಥದ ಬಗ್ಗೆ ಅತ್ಯಂತ ಕೆಟ್ಟ ಹೇಳಿಕೆಯನ್ನು ನೀಡಿದರು. ಹೀಗೆ ಸನಾತನ ಹಿಂದೂ ಧರ್ಮದ ವಿರುದ್ಧ ಕಾಂಗ್ರೆಸ್ ನೇತಾರರು ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿ, ಸನಾತನ ಧರ್ಮದವರು ಧಾರ್ಮಿಕ ಭಾವನೆಗೆ ನೋವುಂಟು ಮಾಡಿ ಅನ್ಯ ಸಮುದಾಯದವರ ಒಲೈಕೆ ಮಾಡುವ ರಾಜಕಾರಣವು ನಡೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇವರಿಗೆ ಅನ್ಯ ಸಮುದಾಯದ ಬಗ್ಗೆ ಮಾತನಾಡುವ ದಾಷ್ಟ್ಯ ಇಲ್ಲ. ಹಿಂದೂಗಳು ಶಾಂತಿ ಪ್ರೀಯರು, ಸಹಿಷ್ಣುಗಳು ಎಂದು ಹಿಂದೂ ವಿರೋಧಿಗಳು ಅದರ ದುರುಪಯೋಗವನ್ನು ಮಾಡುತ್ತಿದ್ದಾರೆ.
ಡಿಎಮ್‌ಕೆ ಪಕ್ಷದ ಮೇಲೆ ಕ್ರೈಸ್ತ ಚರ್ಚಗಳ ಪ್ರಭಾವ?
ತಮಿಳುನಾಡಿನಲ್ಲಿ ಎರಡನೇ ಅತಿದೊಡ್ಡ ಮತ ಕ್ರೈಸ್ತ ಮತವಾಗಿದೆ. ರೋಮನ್ ಕ್ಯಾಥಲಿಕ್ ಚರ್ಚ ಹಾಗೂ ಪ್ರೊಟೆಸ್ಟ್ಂಟ್ ಚರ್ಚ, ಚರ್ಚಸ್ ಆಪ್ ಸೌತ್ ಇಂಡಿಯಾ ಪ್ರಭಾವ ತುಂಬಾ ಪ್ರಮಾಣದಲ್ಲಿದೆ. ಚುನಾವಣೆಯ ಸಮಯದಲ್ಲಿ ಅಲ್ಲಿ ಅರ್ಚಬಿಷಪ್ ಇವರು ನೇರವಾಗಿ ಡಿಎಮಕೆ ಪಕ್ಷಕ್ಕೆ ಮತ ನೀಡಲು ಆದೇಶವನ್ನು ಮಾಡುತ್ತಾರೆ. ತಮಿಳುನಾಡು ಅತೀ ಹೆಚ್ಚು ಮತಾಂತರ ನಡೆಯುವ ರಾಜ್ಯವಾಗಿದ್ದು, ಇಲ್ಲಿ ಚರ್ಚಗಳ ಪ್ರಭಾವ ಎಷ್ಟು ಇದೆಯೆಂದೆರೆ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾಂದರ ಪ್ರತಿಮೆ ಸ್ಥಾಪನೆ ಮಾಡಲು ಸ್ಥಳೀಯ ಕ್ರೈಸ್ತರು ವಿರೋಧ ಮಾಡಿದ್ದರು. ಸ್ವತಃ ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್‌ರವರು ಚರ್ಚ ಆಪ್ ಸೌತ್ ಇಂಡಿಯಾ 75ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ತಮಿಳುನಾಡಿನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ, ಕ್ರೈಸ್ತರ ಮತಾಂತರ ಪಕ್ರಿಯೆಯು ಕಾನೂನುಬದ್ಧವಾಗಿದೆ ಎಂದು ಹೇಳಿದ್ದರು. ಮುಖ್ಯಮಂತ್ರಿಯ ಮಗ ಉದಯನಿಧಿ ಸ್ಟಾಲಿನ್ ‘ನಾನು ಹೆಮ್ಮೆಯ ಕ್ರೈಸ್ತ ಮತ್ತು ಕ್ರೈಸ್ತ ಯುವತಿಯನ್ನೇ ಮದುವೆಯಾಗಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದರು. ಈ ಎಲ್ಲ ಘಟನೆಗಳನ್ನು ನೋಡಿದಾಗ ತಮಿಳುನಾಡು ಡಿಎಮ್‌ಕೆ ರಾಜಕಾರಣದ ಮೇಲೆ ಕ್ರೈಸ್ತ ಮತದ ಪ್ರಭಾವ ಹೆಚ್ಚಿದೆ. ಈ ಸನಾತನ ವಿರೋಧಿ ಕೃತ್ಯದ ಹಿಂದೆ ಅವರ ಕೈವಾಡವಿರುವ ಸಂಶಯವಿದೆ.
ಸನಾತನವು ನಿತ್ಯನೂತನವಾಗಿದ್ದು, ಇದರ ನಾಶ ಅಸಾದ್ಯವಾಗಿದೆ.
ಸನಾತನ ಎಂದರೆ ‘ನಿತ್ಯ ನೂತನ ಇತಿ ಸನಾತನ ಅಂದರೆ ಯಾವುದು ಎಂದಿಗೂ ಹಳೆಯದಾಗುವುದಿಲ್ಲ, ನಾಶವಾಗುವುದಿಲ್ಲ ಅದುವೇ ಸನಾತನವಾಗಿದೆ. ಹಾಗಾಗಿ ಸನಾತನ ಧರ್ಮದ ಮೇಲೆ ಅಲೇಕ್ಸಾಂಡರ್‌ನಿಂದ ಹಿಡಿದು ಡಚ್ಚರು, ಫ್ರೆಂಚರು, ಪೋರ್ಚುಗೀಸರು, ಬ್ರಿಟೀಷರು, ಘಜ್ಞಿ, ಘೋರಿ, ಮೊಘಲ್, ಟಿಪ್ಪು ಸುಲ್ತಾನ ಹೀಗೆ ಅನೇಕ ಆಕ್ರಮಣಕಾರರು ದಾಳಿ ಮಾಡಿದರು. ಆದರೆ ಯಾರಿಂದಲೂ ಸಹ ಏನು ಮಾಡಲು ಸಾದ್ಯವಾಗಿಲ್ಲ. ಇಂದು ಸನಾತನ ಧರ್ಮವು ಇಡೀ ಪ್ರಪಂಚದಲ್ಲಿ ಪ್ರಜ್ವಲಿಸುತ್ತದೆ. ಇಂದು ಅಮೇರಿಕಾದ ಉಪಾದ್ಯಕ್ಷ ಕಮಲಾ ಹ್ಯಾರಿಸ್, ಮುಂದಿನ ಅಮೇರಿಕಾದ ಅಧ್ಯಕ್ಷ ವಿವೇಕ ರಾಮಸ್ವಾಮಿ ಇವರು ತಮಿಳುನಾಡಿನ ಸನಾತನಿಯಾಗಿದ್ದಾರೆ. ಬ್ರಿಟನ್ ಮತ್ತು ನೇಪಾಳದ ಪ್ರದಾನಿ, ವಿಶ್ವದ 25 ಕ್ಕೂ ಅಧಿಕ ವಿದೇಶಿ ದೈತ್ಯ ಕಂಪನಿಗಳ ಸಿಎಒ ಸನಾತನ ಧರ್ಮಿಯರೇ ಆಗಿದ್ದಾರೆ. ಯುರೋಪ್ ಮತ್ತು ಅಮೆರಿಕಾದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸನಾತನ ಧರ್ಮದ ಕಡೆಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಸನಾತನ ಧರ್ಮವು ಮತ್ತೊಮ್ಮೆ ವಿಶ್ವಗುರುವಾಗುವತ್ತ ಮಾರ್ಗಕ್ರಮಣ ಮಾಡುತ್ತಿದೆ. ‘ಧರ್ಮ ಎವಂ ಹತೊ ಹಂತಿ, ಧರ್ಮೊ ರಕ್ಷತಿ ರಕ್ಷಿತಃ ಎಂಬ ವ್ಯಾಖ್ಯೆಯಂತೆ ಧರ್ಮವನ್ನು ಯಾರು ಆಚರಣೆಯನ್ನು ಮಾಡುತ್ತಾರೆ ಅವರನ್ನು ಧರ್ಮವೇ ರಕ್ಷಣೆ ಮಾಡುತ್ತದೆ ಮತ್ತು ಯಾರು ಧರ್ಮವನ್ನು ನಾಶ ಮಾಡುತ್ತಾರೆ ಅವರನ್ನು ಧರ್ಮವೇ ನಾಶ ಮಾಡುತ್ತದೆ. ಹಾಗಾಗಿ ಸನಾತನ ಧರ್ಮವು ನಿತ್ಯನೂತನವಾಗಿದೆ ಅದನ್ನು ನಾಶಪಡಿಸಲು ಯಾರಿಂದಲೂ ಸಾದ್ಯವಿಲ್ಲ. ‘ಕೃಣ್ವಂತೋ ವಿಶ್ವಂ ಆರ್ಯಮ್ ಎಂಬಂತೆ ಇಡೀ ವಿಶ್ವವು ಸನಾತನ ಧರ್ಮಮಯವಾಗುತ್ತಿದೆ!
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ