ಗುರು ಬ್ರಹ್ಮ, ಗುರು ವಿಷ್ಣು,
ಗುರುರ್ದೇವೋ ಮಹೇಶ್ವರಃ
ಗುರುರ್ಸಾಕ್ಶಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
ಗುರು ಎಂದರೆ ಪದಗಳಲ್ಲಿ ವರ್ಣಿಸಲಾಗದ ಸಂಬಂಧ. ಒಬ್ಬ ವಿದ್ಯಾರ್ಥಿಯನ್ನು ಒಳ್ಳೆಯ ರೀತಿಯಲ್ಲಿ ತಿದ್ದಿ ತಿಳಿ ಹೇಳುವವರು ಗುರುಗಳು. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಗುರುಗಳ ಪಾತ್ರ ಮಹತ್ವದ್ದಾಗಿರುತ್ತದೆ. ಅಜ್ಞಾನವೆಂಬ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಏಕೈಕ ಜೀವ ಅದು ಶಿಕ್ಷಕ.
ಪ್ರತಿಯೊಬ್ಬ ಪೋಷಕರ ಮನಸ್ಸಲ್ಲಿರುವ ಒಂದೇ ಆಸೆ, ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಿ, ಅವರು ಉತ್ತಮ ಸ್ಥಾನದಲ್ಲಿರಬೇಕೆಂದು. ಆ ಆಸೆಯನ್ನು ಪರಿಪೂರ್ಣಗೊಳಿಸುವವರು ಶಿಕ್ಷಕರು.
ಒಂದು ಮಾತಿದೆ ಯಾರನ್ನು ನೋಯಿಸಿದರೂ ಗುರುಗಳನ್ನು ನೋಯಿಸಬಾರದೆಂದು. ಏಕೆಂದರೆ ಗುರುಗಳ ಮನಸ್ಸನ್ನು ಒಮ್ಮೆ ನೋಯಿಸಿದರೆ ಮತ್ತೆ ಯಾವತ್ತೂ ನಮಗೆ ಜೀವನದಲ್ಲಿ ಒಳ್ಳೆಯದಾಗಲು ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿ ಗುರುಗಳ ಮನಸ್ಸನ್ನು ನೋಯಿಸಬಾರದೆಂದು ಹೇಳುವುದು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾರೆ. ಇವರು ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದು, ಅವರ ಆಸೆಯಂತೆ ಅವರ ಹುಟ್ಟು ಹಬ್ಬವನ್ನುಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾರೆ. ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡುವುದರಲ್ಲೂ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ. ಒಬ್ಬ ವಿದ್ಯಾರ್ಥಿಯನ್ನು ಉತ್ತಮ ಪ್ರಜೆಯನ್ನಾಗಿ ಮಾಡುವುದರಲ್ಲಿ ಶಿಕ್ಷಕರ ಪಾಲು ಮಹತ್ತರವಾದದ್ದು.
ಯಾವುದೇ ವಿದ್ಯಾರ್ಥಿಯನ್ನಾದರೂ ತಮ್ಮ ಮಕ್ಕಳಂತೆ ಭಾವಿಸಿ ಅವರ ಸರಿ ತಪ್ಪುಗಳನ್ನು ಸೂಕ್ಷ್ಮವಾಗಿ ತಿಳಿಸುವರು ಇವರು. ಮಕ್ಕಳು ತಪ್ಪು ದಾರಿಯನ್ನು ಹಿಡಿದರೆ ಸರಿ ದಾರಿಗೆ ಕೊಂಡೊಯ್ಯುವವರು ಶಿಕ್ಷಕರು.
ನಮ್ಮ ಜೀವನದಲ್ಲಿ ಸೋಲೇ ಬರಲಿ ಅಥವಾ ಗೆಲುವೇ ಬರಲಿ ಅದೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದವರು ಗುರುಗಳು. ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರೂ ಇದ್ದೇ ಇರುತ್ತಾರೆ. ಅದು ಶಾಲೆಯಲ್ಲಿರುವ ಶಿಕ್ಷಕರೇ ಆಗಬೇಕೆಂದಿಲ್ಲ, ನಮ್ಮ ಯಾವುದೇ ಕಷ್ಟದ ಸಮಯದಲ್ಲೂ ಜೊತೆಗಿದ್ದು ಧೈರ್ಯ ತುಂಬುವ ನಮ್ಮ ಪೋಷಕರೂ ಸಹ ನಮ್ಮ ಗುರುಗಳೇ. ಹಾಗಾಗಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮಗೆ ವಿದ್ಯೆ ಕಳಿಸಿದ ಗುರುಗಳನ್ನು ಮರೆಯಬಾರದು.
ನನ್ನೆಲ್ಲಾ ನೆಚ್ಚಿನ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು...... ಎಂದೆಂದಿಗೂ ಖುಷಿಯಾಗಿರಿ.....
-ಧನ್ಯಶ್ರೀ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ನೆಹರು ನಗರ ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ