ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

Upayuktha
0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ವಳಚ್ಚಿಲ್‌ನ ಶ್ರೀನಿವಾಸ ಇನ್‌ಸ್ಟಿಟ್ಯೂಶನ್ ಆಫ್ ಫಾರ್ಮಸಿ ಸಂಸ್ಥೆ ಸೆ.11ರಂದು ಆಯೋಜಿಸಿದ ರಾಜ್ಯಮಟ್ಟದ ಭಿತ್ತಿಚಿತ್ರ ರಚನೆ ಹಾಗೂ ವಿಜ್ಞಾನ ಮಾದರಿ ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.



ಶಾಂತಿಗೋಡಿನ ರವಿಕುಮಾರ್ ಮತ್ತು ಚೈತನ್ಯ ಬಿ ದಂಪತಿಯ ಪುತ್ರಿ ಸಮೀಕ್ಷಾ ಶೆಟ್ಟಿ ಮತ್ತು ಬೆಳ್ಳಾರೆಯ ತಿರುಮಲೇಶ್ವರ ಕುಲಾಲ್ ಮತ್ತು ಬೇಬಿ ದಂಪತಿಯ ಪುತ್ರಿ ಹರ್ಷಿತಾ ಟಿ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದರೆ, ವಿಜ್ಞಾನ ಮಾದರಿ ತಯಾರಿಯಲ್ಲಿ ಮುಕ್ರಂಪಾಡಿಯ ಪುಂಡಲೀಕ ಮತ್ತು ನಾಗಮಣಿ ದಂಪತಿಯ ಪುತ್ರ ಪೃಥ್ವಿರಾಜ್ ಪಿ. ಪ್ರಭು, ದರ್ಬೆಯ ಕೆ ಶ್ರೀಕಾಂತ್ ಶೆಣೈ ಮತ್ತು ಪ್ರೀತಿ ಶೆಣೈ ದಂಪತಿಯ ಪುತ್ರ ಕೆ ಶುಭನ್ ಶಣೈ ಹಾಗೂ ನರಿಮೊಗರಿನ ಶರತ್ಚಂದ್ರ ಬಿ. ಮತ್ತು ಬೃಂದಾ ದಂಪತಿಯ ಪುತ್ರ ಅನಿರುದ್ಧ ಬಿ. ದ್ವಿತೀಯ ಬಹುಮಾನ ಗಳಿಸಿರುತ್ತಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top