ಬೆಂಗಳೂರು: ರಂಗ ಚಂದಿರ ಮತ್ತು ಥಿಯೇಟರ್ ಥೆರಪಿ ಬೆಂಗಳೂರು ಆಯೋಜಿಸಿದ್ದ ಡಾ. ಬೇಲೂರು ರಘುನಂದನ್ ರವರ ಏಕವ್ಯಕ್ತಿ ನಾಟಕೋತ್ಸವವನ್ನು" ಅಧಿ ನಾಯಕಿ "ನಾಟಕದ ರಂಗ ಕಲಾವಿದೆ ಎಂಎಸ್ ಲಕ್ಷ್ಮಿ ಕಾರಂತ್ ಮತ್ತು "ಮಾತಾ" ನಾಟಕದ ಕಲಾವಿದರಾದ ಅರುಣ್ ಕುಮಾರ್ ಅವರಿಗೆ, ರಂಗ ಗೌರವ -2023 ಪ್ರದಾನ ಮಾಡುವ ಮೂಲಕ, ಡಾ.ಕಮಲಾ ಹಂಪನಾ, ನಾಟಕೋತ್ಸವವನ್ನು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ವಿಜಯಮ್ಮ, ಡಾ. ಬೇಲೂರು ರಘುನಂದನ್, ಶ್ರೀಮತಿ ಆರ್ ಲಕ್ಷ್ಮಿ ದೇವಿ, ಡಾ. ಎಂಎಸ್ ವಿದ್ಯಾ, ಶ್ರೀಮತಿ ಎಚ್ಆರ್ ಸುಜಾತ, ಡಾ. ವತ್ಸಲಾ ಮೋಹನ್, ಲಯನ್ ಲಲಿತಾ ಶೇಷಾದ್ರಿ, ಶ್ರೀಮತಿ ವಸಂತ ಕವಿತಾ, ಲಯನ್ ಶೋಭಾ ಶ್ರೀನಿವಾಸ್, ರಂಗಚಂದಿರದ ಕಾರ್ಯದರ್ಶಿಗಳಾದ ಜಿಪಿಓ ಚಂದ್ರು, ಥಿಯೇಟರ್ ಥೆರಪಿ ಕಾರ್ಯದರ್ಶಿಗಳಾದ ನವೀನ್ ಕೃಷಿ, ಶಾರದ ಪ್ರತಿಷ್ಠಾನದ ಅಧ್ಯಕ್ಷರಾದ ಮಾಗಡಿ ಗಿರೀಶ್, ರಂಗಸಂಘಟಕರಾದ ಶ್ರೀಧರ್ ಗೌಡ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ "ಅಧಿ ನಾಯಕಿ" ಮತ್ತು "ಮಾತ"ನಾಟಕ ಪ್ರದರ್ಶನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ